ವರುಣನ ಅಬ್ಬರಕ್ಕೆ ಉತ್ತರ ತತ್ತರ; ರಾಜಸ್ಥಾನವೊಂದರಲ್ಲೇ 80 ಮಂದಿ ಸಾವು

ವರುಣನ ಅಬ್ಬರಕ್ಕೆ ಉತ್ತರ ತತ್ತರ; ರಾಜಸ್ಥಾನವೊಂದರಲ್ಲೇ 80 ಮಂದಿ ಸಾವು

ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜಸ್ಥಾನದ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದಲ್ಲಿ 1,250ಕ್ಕೂ ಹೆಚ್ಚು ಗ್ರಾಮಗಳು ನೆರೆಯಿಂದಾಗಿ ತತ್ತರಿಸಿವೆ.

ಮಧ್ಯಪ್ರದೇಶದ ಚಂಬಲ್, ಗ್ವಾಲಿಯರ್ ವಲಯದಲ್ಲಿ ಮಳೆ ಮತ್ತು ಪ್ರವಾಗ ಎದುರಾಗಿದ್ದು ನೆರೆ ಸಂತ್ರಸ್ತರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಪ್ರವಾಹದಲ್ಲಿ ಸಿಲುಕಿದ ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರಿಂದ ಅಗತ್ಯ ವಸ್ತು ಪೂರೈಕೆ ನಡೆಯುತ್ತಿದೆ.

ಇತ್ತ ರಾಜಸ್ಥಾನದಲ್ಲಿ ವರುಣನ ಅಬ್ಬರಕ್ಕೆ 80 ಜನ, 125 ಜಾನುವಾರು ಸಾವನ್ನಪ್ಪಿವೆ. ಜೈಪುರ, ಬುಂದಿ, ಟೊಂಕ್​, ಕೋಟ ಸೇರಿದಂತೆ ಹಲವೆಡೆ ತೀವ್ರ ಹಾನಿಯಾಗಿದೆ. ಮಳೆಯ ಪರಿಣಾಮದಿಂದ ಮೃತಪಟ್ಟವರಿಗೆ ತಲಾ ₹5 ಲಕ್ಷ, ಗಾಯಗೊಂಡವರಿಗೆ ₹2 ಲಕ್ಷ ಪರಿಹಾರವನ್ನ ಅಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ಘೋಷಿಸಿದ್ದಾರೆ.

ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದ್ದು ಮೇಲ್ಮಟ್ಟದ ಪ್ರದೇಶಗಳಿಗೆ ರಕ್ಷಣಾ ತಂಡ ಜನರನ್ನು ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದ ಮನೆಯ ಗೋಡೆಗಳು ಕುಸಿದು ಹಲವರು ಸಾವನ್ನಪ್ಪಿದ್ದಾರೆ. ಇನ್ನು ಎಸ್​ಡಿಆರ್​ಎಫ್​ ನಿಧಿಯಿಂದ ಬೆಳೆ ನಾಶವಾದ ರೈತರಿಗೆ 5 ಲಕ್ಷ ಪರಿಹಾರ ವಿತರಣೆ ಮಾಡಲು ಘೋಷಿಸಲಾಗಿದೆ.

Source: newsfirstlive.com Source link