‘ಮನಸಾರೆ’ ಧಾರಾವಾಹಿಗೆ ಚರಿತ್​ ಬಾಳಪ್ಪಾ ಎಂಟ್ರಿ.. ಪಾವನಿ ಜೊತೆ ಲವ್​ ಟ್ರ್ಯಾಕ್

‘ಮನಸಾರೆ’ ಧಾರಾವಾಹಿಗೆ ಚರಿತ್​ ಬಾಳಪ್ಪಾ ಎಂಟ್ರಿ.. ಪಾವನಿ ಜೊತೆ ಲವ್​ ಟ್ರ್ಯಾಕ್

ಉದಯ ಟಿವಿಯಲ್ಲಿ ಪ್ರಸಾರವಾಗುವ ಮನಸಾರೆ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಮೊನ್ನೆಯಷ್ಟೆ 350 ಎಪಿಸೋಡ್​ಗಳನ್ನ ಕಪ್ಲೀಟ್​ ಮಾಡಿ ಯಶಸ್ವಿಯಾಗಿ ಸಾಗ್ತಾಯಿದ್ದು, ಮನಸಾರೆ ಟೀಮ್​ಗೆ ಅಮ್ಮಮ್ಮಾ ಅಂದ್ರೆ ಚಿತ್ಕಲಾ ಬೀರಾದರ್​ ಸೇರ್ಪಡೆಯಾಗಿರುವ ಬಗ್ಗೆ ನಾವು ಹೇಳಿದ್ವಿ, ಆದ್ರೆ ಈಗಿನ ಹೊಸ ಸುದ್ದಿ ಅಂದ್ರೆ ರಾಮ್​ ಪಾತ್ರದ ಆಕ್ಟರ್​ ಚೇಂಜ್​ ಆಗಿದ್ದಾರೆ.

ಯೆಸ್​..ಮನಸಾರೆ ಧಾರಾವಾಹಿ ಪ್ರಾರ್ಥನಾ ಎಂಬ ಹುಡುಗಿಯ ಸುತ್ತ ಸುತ್ತುವ ಕಥೆಯಾಗಿದ್ದು.. ಪ್ರಾರ್ಥನಾ ತಂಗಿ ಪಾವನಿ ಪಾತ್ರಕ್ಕೂ ಅಷ್ಟೇ ಮಹತ್ವವಿದೆ. ತಂದೆಗೆ ಪ್ರಾರ್ಥನಾ ಕಂಡ್ರೆ ಆಗಲ್ಲ.. ಆದ್ರೆ ಪಾವನಿ ಅಂದ್ರೆ ಪ್ರಾಣ.. ಇತ್ತ ಪ್ರಾರ್ಥನಾಗೆ ತಂದೆ ಅಂದ್ರೆ ಜಗತ್ತು.. ಪಾವನಿ ಹುಡುಗಾಟದ ಹುಡುಗಿ.. ಹೀಗೆ ಸಾಗುವ ಕತೆಯಲ್ಲಿ ಪ್ರಾರ್ಥನಾ ಜೋಡಿಯಾಗಿ ಯುವ ಇದ್ರೆ ಪಾವನಿಯ ಲವ್​ ಟ್ರ್ಯಾಕ್​ ನಡೆಯುತ್ತಿದ್ದು, ಪಾವನಿ ಜೋಡಿಯಾಗಿ ರಾಮ್​ ಇದ್ದಾರೆ.

blank

ಬಿಸನೆಸ್​ ಮ್ಯಾನ್​ ರಾಮ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದ ವಿಕಾಸ್​ ವಶಿಷ್ಟ ಮನಸಾರೆ ಸೀರಿಯಲ್​ನಿಂದ ಹೊರ ನಡೆದಿದ್ದು, ಆ ಪಾತ್ರಕ್ಕೆ ಈಗ ಚರಿತ್​ ಬಾಳಪ್ಪಾ ಬಣ್ಣ ಹಚ್ಚಿದ್ದಾರೆ.

ಚರಿತ್​ ಬಾಳಪ್ಪಾ ಚಿರಪರಿಚಿತ ಮುಖ.. ಇವರನ್ನ ಚರಿತ್​ ಅನ್ನೋಕಿಂತ ಡಾ.ದ್ರವಂತ್​ ಅಂದ್ರೆ ಪಟ್​ ಅಂತಾ ನೆನಪಾಗುತ್ತೆ. ಹೌದು, ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗುವ ಮುದ್ದುಲಕ್ಷ್ಮೀ ಸೀರಿಯಲ್​ನಲ್ಲಿ ಧ್ರುವ ಪಾತ್ರ ನಿರ್ವಹಿಸಿದ್ದ ಅದೇ ಚಲುವ ಚರಿತ್​.

ಈಗ ಚರಿತ್​ ಮನಸಾರೆ ಟೀಮ್​ನ್ನ ಜಾಯಿನ್​ ಆಗಿದ್ದು, ರಾಮ್​ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ..ಇನ್ನೂ ಅವರ ಪಾತ್ರ ಲವ್​ ಟ್ರ್ಯಾಕ್ಲ್ಲಿನಲ್ಲಿದ್ದು, ಒಂದುಕಡೆ ಬಿಸೆನೆಸ್ ಮ್ಯಾನ್​ ಮತ್ತೊಂದು ಕಡೆ ಲವ​ರ್​ ಬಾಯ್​ ಆಗಿ ಹೇಗೆ ಕಮಾಲ್​ ಮಾಡಲಿದ್ದಾರೆ ಎಂಬುವುದನ್ನ ಕಾದು ನೋಡಬೇಕು​. ಒಟ್ಟಿನಲ್ಲಿ ಹೊಸ ಪ್ರಾಜಕ್ಟ್​ ಶುರುಮಾಡಿರುವ ಚರಿತ್​ ಬಾಳಪ್ಪಾಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

Source: newsfirstlive.com Source link