ಪೆಟ್ರೋಲ್ ಮೋಸಕ್ಕಾಗಿ ಲಂಚ; ಏನ್ ಮೇಡಂ ಜನ ಪರವಾಗಿ ಇರಬೇಕಿದ್ದ ನೀವೇ ಹೀಗೆ ಮಾಡಿದ್ರೆ ಹೇಗೆ?

ಪೆಟ್ರೋಲ್ ಮೋಸಕ್ಕಾಗಿ ಲಂಚ; ಏನ್ ಮೇಡಂ ಜನ ಪರವಾಗಿ ಇರಬೇಕಿದ್ದ ನೀವೇ ಹೀಗೆ ಮಾಡಿದ್ರೆ ಹೇಗೆ?

ಬೆಂಗಳೂರು: ಪೆಟ್ರೋಲ್ & ಡಿಸೆಲ್ ಈ ಹೆಸರು ಕೇಳಿದ್ರೆ ದೇಶದ ಜನ ಈಗ ಬೆಚ್ಚಿಬೀಳ್ತಾರೆ.. ಯಾಕಂದ್ರೆ 100 ರ ಗಡಿ ದಾಟಿರುವ ರೇಟ್ ದಿನೇ ದಿನೇ ಜಾಸ್ತಿ ಆಗ್ತಾನೆ ಹೋಗ್ತಿದೆ.. ಆದರೆ ಇದರ ನಡುವೆ ಪೆಟ್ರೋಲ್ ಬಂಕ್ ಗಳು ಗ್ರಾಹಕರಿಗೆ ಹಾಕುವ ಪೆಟ್ರೋಲ್ ನಲ್ಲಿ ಎಂಎಲ್ ಲೆಕ್ಕದಲ್ಲಿ ಕಣ್ಣಿಗೆ ಕಾಣದಂತೆ ದೋಚುತ್ತಿವೆ. ಅದಕ್ಕೆ ಪೂರಕವಾಗಿದೆ ಈ ಕಥೆ. ಸ್ವತಃ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಹಾಗೂ ಏಜೆಂಟ್ ಶಿವಕುಮಾರ್ ಹಫ್ತಾ ವಸೂಲಿ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಬಾರಿ ಇದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತ ಪಿಳ್ಳಪ್ಪ ಅದನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಿಡಿ ಸಮೇತ ಎಸಿಬಿಗೆ ದೂರು ನೀಡಿದ್ದಾರೆ.

ಸಿಡಿಯಲ್ಲಿ ಪೆಟ್ರೋಲ್ ಬಂಕ್ ಮಾರುತಿ ಎಂಬುವವರು ಹಾಗೂ ಎಸಿ ಸೀಮಾ ಮ್ಯಾಗಿ ನಡುವೆ ನಡೆದಿದೆ ಎನ್ನಲಾದ ಮಾತುಕತೆ ಹೀಗಿದೆ..

ಪೆಟ್ರೋಲ್ ಬಂಕ್ ಮಾರುತಿ: ಏನ್ ಮೇಡಮ್ ಸಮಾಚಾರ, ಕೊರೊನಾದಲ್ಲಿ ಎಲ್ಲಾ ಹೇಗೆ ಆಯ್ತು.?

ಎಸಿ ಸೀಮಾ ಮ್ಯಾಗಿ: ಕೊರೊನಾದಲ್ಲಿ ಚೆನ್ನಾಗಿದ್ದೇವೆ ಅಂದ್ರೆ ಅದೇ ಒಂದು ಗುಡ್ ನ್ಯೂಸ್ ಅಲ್ವಾ.!

ಪೆಟ್ರೋಲ್ ಬಂಕ್ ಮಾರುತಿ: ಮೇಲ್ ಪೋಸ್ಟ್ ಮಾಡಿಸಿಕೊಳ್ಳಿ

ಎಸಿ ಸೀಮಾ ಮ್ಯಾಗಿ: ಟ್ರಾನ್ಸಫರ್ ಆಗಿದೆ ಈ ಮೇನ್ ಸರ್ಕಲ್ ಗೆ, ಕೋರ್ಟ್ ಗೆ ಹೋಗಿದ್ದಾರೆ ನೋಡಬೇಕು, ನೀವೇಳಿದ್ರಲ್ಲ ಮಾಡಿಕೊಳ್ಳಿ ಅಂತಾ.. ನೋಡಬೇಕು..

ಪೆಟ್ರೋಲ್ ಬಂಕ್ ಮಾರುತಿ: ನಮಗೇನು ಒಂದು ಎಂಎಲ್ ಇಕ್ಕೊಕೆ ಬೀಡಲ್ಲ ಸೇಲ್ಸ್ ಆಫೀಸರ್ ಹುಚ್ಚ ಬಂದವ್ನೇ..

ಎಸಿ ಸೀಮಾ ಮ್ಯಾಗಿ: ಹ್ಹ ಹ್ಹ ಹ್ಹ ಅವನು ಹುಚ್ಚ, ಇವರು ಹುಚ್ಚುರು ಏನ್ ಮಾಡೋದು

ಪೆಟ್ರೋಲ್ ಬಂಕ್ ಮಾರುತಿ:  ಏನ್ ಮಾಡೋದು ಒಂದು ಎಂಎಲ್ ಇಲ್ಲ.. ಎಲ್ಲಾ ಗಾಜಿಂದು ಪ್ಲೋರೆಸಿಂದು ಗಾಜಿಂದು ಮಾಡಿದ್ರೆ ಒಂದು ಎಂಎಲ್ ಇರಲ್ಲ. ಯಾರಿಗೆ ಏನು ಕೊಂಡಂಗೆ ಇಲ್ಲ.. ಏನೇನು ಇಲ್ಲ.

ಎಸಿ ಸೀಮಾ ಮ್ಯಾಗಿ: ಯಾರವನು.?

ಪೆಟ್ರೋಲ್ ಬಂಕ್ ಮಾರುತಿ: ಶಿವಾಂಶ ಅಂತಾ

ಎಸಿ ಸೀಮಾ ಮ್ಯಾಗಿ: ಶಿವಾಂಶಾ ಅನ್ನೋನಾ..? ಅಮ್ಮಾ .. ದೇವಾ ಗುಜರಾತ್ ಅವನು

ಪೆಟ್ರೋಲ್ ಬಂಕ್ ಮಾರುತಿ: ಬೆಂಗಳೂರು ಹೆಡ್, ಈವಾಗ ಸೌತ್ ಬಂದವ್ನೆ.. ಈಗ ನಮ್ಮ ಡಿಲರ್ಸ್ ಅಸೋಷಿಯೇಷನ್ ಹೆಡ್ ಇಂದಿರಾನಗರ ಪೆಟ್ರೋಲ್ ಬಂಕ್ ಪ್ರಕಾಶ್ ಅತನೂ, ಆರ್ ಬಿ ಪೆಟ್ರೋಲಿಯಂ ರಾಜಾಜಿನಗರ,

ಎಸಿ ಸೀಮಾ ಮ್ಯಾಗಿ: ಅವನ್ಯಾರು

ಪೆಟ್ರೋಲ್ ಬಂಕ್ ಮಾರುತಿ: ಹೇಳ್ತಿನಿ ಇರಿ ಆತನೂ, ಆಮೇಲೆ ತಾರನಾಥ್ನೂ

ಎಸಿ ಸೀಮಾ ಮ್ಯಾಗಿ: ತಾರಾನಾಥ್ ಪ್ರಕಾಶೂ,

ಪೆಟ್ರೋಲ್ ಬಂಕ್ ಮಾರುತಿ: ಇವರೆಲ್ಲರ್ನೂ ನಾನು ಆ ಗ್ರೂಪ್ ನಲ್ಲಿ ಸೇರ್ಕೊಂಡಿದ್ದೀನಿ..

ಎಸಿ ಸೀಮಾ ಮ್ಯಾಗಿ: ಈಗ ಮಾಡ್ತಿರಾ.

ಪೆಟ್ರೋಲ್ ಬಂಕ್ ಮಾರುತಿ: ಈಗ ಈ ಶಿವಾಂಶೂ ಅವನಿಗೆ ಕೊಡ್ತಿರಿ ಡೋಸು.

ಎಸಿ ಸೀಮಾ ಮ್ಯಾಗಿ: ಮೋದಿ ಭಕ್ತ ರೀ ಅವನು.?

ಪೆಟ್ರೋಲ್ ಬಂಕ್ ಮಾರುತಿ: ಯಾರು..?

ಎಸಿ ಸೀಮಾ ಮ್ಯಾಗಿ: ಶಿವಾಂಶನಾ

ಪೆಟ್ರೋಲ್ ಬಂಕ್ ಮಾರುತಿ: ಹ್ಹಾ

ಎಸಿ ಸೀಮಾ ಮ್ಯಾಗಿ: ಗುಜರಾತಿ ಅವನು

ಪೆಟ್ರೋಲ್ ಬಂಕ್ ಮಾರುತಿ: ಈ ಲೋಕಲ್ ಪವರ್ ಮುಂದೆ ಯಾವನು ಇಲ್ಲಿ ಏನು ಮಾಡೋಕೆ ಆಗಲ್ಲ.

ಎಸಿ ಸೀಮಾ ಮ್ಯಾಗಿ: ಹ್ಹಾ ಪಾಪ ಅವನು.

blank

ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಮೋಸ ಆಗಬಾರದು ಅಂತಾ ಕೇಂದ್ರ ಸರ್ಕಾರ, ಪ್ರತಿ ಪೆಟ್ರೋಲ್ ಕಂಪನಿಗಳ ಟೆಂಪರಿಂಗ್ ಚೆಕ್ ಮಾಡಲು ಸೇಲ್ಸ್ ಆಫೀಸರ್​ನ ನೇಮಕ ಮಾಡಿರುತ್ತೆ. ಇಲ್ಲಿ ಆತನ ಪ್ರಮಾಣಿಕ ಕೆಲಸವನ್ನು ,ಪೆಟ್ರೋಲ್ ಕಳ್ಳತನ ಮಾಡಲು ಬಿಡದೇ ಇದ್ದದ್ದಕ್ಕೆ ಪೆಟ್ರೋಲ್ ಬಂಕ್ ಮಾರುತಿ ಹೇಳ್ತಿದ್ರೆ ಖುಷಿಯಿಂದ ಮೇಡಮ್ ಹಲ್ಲು ಕಿರಿಯುತ್ತಿದ್ದರು.

ಪೆಟ್ರೋಲ್ ಬಂಕ್ ಮಾರುತಿ: ಲೋಕಲ್ ಪವರ್ ಅದು ಅಷ್ಟೇ..ಯಾರು ಏನೆ ಬಂದ್ರೂ ಅಷ್ಟೇ ಕಥೆ

ಎಸಿ ಸೀಮಾ ಮ್ಯಾಗಿ: ಬಟ್ ಅವ್ನು

ಪೆಟ್ರೋಲ್ ಬಂಕ್ ಮಾರುತಿ: ನಾವೇನು ಇಲ್ಲಿಗಲ್ ಆಕ್ಟಿವಿಟಿಸ್ ಮಾಡಿದ್ರೆ ಭಯಬಿಳಬೇಕು. ಅದೇನಿಲ್ಲ ಸ್ವಚ್ಚವಾಗಿ ಬದುಕುತ್ತೆನೆ ಅದ್ರೆ ಬಿಡಲ್ಲ. ಎಲ್ಲಾ ಪ್ರಪಂಚ ಎಲ್ಲಾ ಬಿಡ್ತಾ ಇದೆ.. ಒಂದು ಎರಡು ಎಂಎಲ್ ಬಿಡು ಅಂದ್ರನೂ ಬಿಡಲ್ಲ. ಕೇಳಿ

ಎಸಿ ಸೀಮಾ ಮ್ಯಾಗಿ: ಹೂಂ

ಹೀಗೆ ಪೆಟ್ರೋಲ್ ಬಂಕ್ ನಲ್ಲಿ ನಡೆಯುವ ಮೋಸವನ್ನು ತಡೆದು ಪ್ರಶ್ನಿಸಲು ರಾಜ್ಯ ಸರ್ಕಾರ ಇವರಿಗೆ ಅಧಿಕಾರಿ ಮಾಡಿದ್ರೆ, ಈ ಕೆಎಎಸ್ ಅಧಿಕಾರಿ ಸೀಮಾ, ಕೇಂದ್ರದಿಂದ ಬಂದಿರುವ ಪ್ರಮಾಣಿಕ ಅಧಿಕಾರಿಯ ಸಮರ್ಥಿಸಿಕೊಳ್ಳುವ ಕೆಲಸ ಮಾಡಲ್ಲ. ಬದಲಾಗಿ ತನ್ನ ಲಂಚಬಾಕತನವನ್ನ ಪ್ರದರ್ಶನ ಮಾಡ್ತಾರೆ.

ಪೆಟ್ರೋಲ್ ಬಂಕ್ ಮಾರುತಿ: ಮೇಡಮ್ ಕಾಫಿ ನಾ ಟೀ ನಾ.?

ಎಸಿ ಸೀಮಾ ಮ್ಯಾಗಿ: ನನಗೆ ಏನು ಬೇಡಪ್ಪ.

ಪೆಟ್ರೋಲ್ ಬಂಕ್ ಮಾರುತಿ: ಏನ್ ತರ್ಸ್ಲಿ

ಎಸಿ ಸೀಮಾ ಮ್ಯಾಗಿ: ಇಲ್ಲಪಾ ಈಗ ಊಟ ಮಾಡಿದೆ.

ಪೆಟ್ರೋಲ್ ಬಂಕ್ ಮಾರುತಿ: ಯಾಕೆ ಲೇಟ್

ಎಸಿ ಸೀಮಾ ಮ್ಯಾಗಿ: ಲೇಟ್ ಆಯ್ತು. ನಮ್ಮ ಆಫೀಸ್ ನಿಂದ ಬಿಟ್ಟಿದ್ದೆ ಲೇಟ್, ಅದೇ ಟ್ರಾನ್ಸಫರ್ ಆಯ್ತು ಇವರು ಕೋರ್ಟ್ ಗೆ ಹೋದ್ರು.

ಪೆಟ್ರೋಲ್ ಬಂಕ್ ಮಾರುತಿ: ನೀವು ಬಂದು ಬಿಡಿ ಮೇಡಮ್ ಅವರೇ

ಎಸಿ ಸೀಮಾ ಮ್ಯಾಗಿ: ಕೋರ್ಟ್ ಗೆ ಹೋಗಿದನ್ನಲ್ಲ.. ಇರಿ ನೋಡೋಣ. ಕೋರ್ಟ್ ಏನ್ ಹೇಳುತ್ತೆ ಕೇಳ್ಕೊಂಡು ನೋಡೋನ

ಪೆಟ್ರೋಲ್ ಬಂಕ್ ಮಾರುತಿ: ಬಂದ್ರೆ ಒಂದು 5 ಎಂಎಲ್ ಇಟ್ಕೊಟ್ರೆ.

ಎಸಿ ಸೀಮಾ ಮ್ಯಾಗಿ: ಹ್ಹ ಹ್ಹ ನಾನು ಬಂದ್ರೆ ಒಂದು ಲೇವೆಲ್ಗೆ ಇಟ್ಟುಕೊಡ್ತಿನಿ ಬಿಡಿ

ಪೆಟ್ರೋಲ್ ಬಂಕ್ ಮಾರುತಿ: ಇವಾಗ ಯಾರಿದ್ದಾರೆ ಮೇಡಮ್.?

ಎಸಿ ಸೀಮಾ ಮ್ಯಾಗಿ: ನರಸಿಂಹ ಮೂರ್ತಿ

ಬ್ರೋಕರ್ ಶಿವಕುಮಾರ್: ಅನಿಲ್ ಕುಮಾರ್ ಇದ್ದಾರೆ, ಏನ್ ತೊಂದರೆ ಇಲ್ಲ

ಪೆಟ್ರೋಲ್ ಬಂಕ್ ಮಾರುತಿ: ಸರ್ ಏನ್ ಗೊತ್ತಾ, ಇರೋದ್ರಲ್ಲಿ ಅಷ್ಟು ಕೊಟ್ಟಿಲ್ಲ ಅಂದ್ರೆ ಹೇಗೆ.?

ಬ್ರೋಕರ್ ಶಿವಕುಮಾರ: ಹ್ಹಾ ಸ್ಟ್ಯಾಂಪಿಂಗ್ ಬಂದಾಗ ನನಗೆ ಪೋನ್ ಹಾಕಿ, ಮೇಡಮ್ ಗೆ ಪೋನ್ ಹಾಕಿ ನನಗೇನು ಬೇಡ

ಎಸಿ ಸೀಮಾ ಮ್ಯಾಗಿ: ಹ್ಹಾ

ಪೆಟ್ರೋಲ್ ಬಂಕ್ ಮಾರುತಿ: ಅವರು ಮಾಡ್ತಾರೆ, ಆಮೇಲೆ ತಿರಾಗ ರಿ ಸ್ಟ್ಯಾಂಪಿಂಗ್  ಮಾಡಿಸ್ತಾನೆ ಇತಾ.. ಹಂಗೆ ಮಾಡಿಸಿದಾ ಒದ್ ಸತಿ.

ಬ್ರೋಕರ್ ಶಿವಕುಮಾರ: ಇಲ್ಲಾ ಇಲ್ಲಾ ಇಸತಿ ನಾನು ಹೇಳ್ತಿನಿ ಬಿಡು

ಎಸಿ ಸೀಮಾ ಮ್ಯಾಗಿ: ಇಲ್ಲ ಇಲ್ಲ ಕನ್ಫರ್ಮ್

ಪೆಟ್ರೋಲ್ ಬಂಕ್ ಮಾರುತಿ: ಖಡಕ್ ಸರ್ ಅವನು.. ಖಡಕ್ ಅಂದ್ರೆ ಏನಕ್ಕೂ ಏನಿಲ್ಲ. ಟಾಲರೇನ್ಸ್ ಇಲ್ಲ. 0 ಗೆ ಇಡಬೇಕು. ಜಿರೋ ಟಾಲರೇನ್ಸ್

ಎಸಿ ಸೀಮಾ ಮ್ಯಾಗಿ: ಹಂಗಾದ್ರೆ ಓಡಿಸ್ರಿ ಅವನಾ ಇಲ್ಲಿಂದ. .

ಪೆಟ್ರೋಲ್ ಬಂಕ್ ಮಾರುತಿ: ಅದಕ್ಕೆ ಇಲ್ಲಿ., ಈವಾಗ ಹಾಕಿಕೊಂಡಿವಲ್ಲ ಇರ್ರಿ.. ನಾಳೆ ಮಿಟಿಂಗ್ ಕರೆದಿದ್ದಾರೆ. ಇಂದಿರಾನಗರ ಬಂಕ್ ನಲ್ಲಿ ಪ್ರಕಾಶ್, ಅಲ್ಲಿಗೆ ಸೇಲ್ಸ್ ಆಫೀಸರ್ ಕರ್ಕೊಂಡು ನಾನು ಅಧ್ಯಕ್ಷರು ಎಲ್ಲಾ ನಾಲ್ಕು ಜನನೂ ಹೋಗ್ತಿವಿ. ಹೋಗ್ಬಿಟ್ಟು., ಏನಪ್ಪ ಏನ್ ಕಥೆ ನಿಂದು ಅಂತಾ

ಎಸಿ ಸೀಮಾ ಮ್ಯಾಗಿ: ಏನಪ್ಪ ಯಾಕಿಸ್ಟೊಂದು ಮಾಡ್ತಿದಿಯಾ.? 5 ಎಂಎಲ್ ಬಿಟ್ಟು ಕೊಡ್ತಿಯಾ ಇಲ್ವಾ ಅಂತಾ ಕೇಳಿ. ಇರ್ಲಿ ಕೊಡ್ತಾನೆ ಬನ್ನಿ

ಪೆಟ್ರೋಲ್ ಬಂಕ್ ಮಾರುತಿ: ಇಲ್ಲಾ ಪ್ರಪಂಚ ಎಲ್ಲಾ ಹೋದಂಗೆ ನಾವು ಹೋಗಬೇಕಲ್ವಾ ಸಾರ್.

blank

ಇದು ಎಸಿ ಸಿಮಾ ಮೇಡಮ್ ಇನ್ನೊಂದು ವರಸೆ.. ಒಬ್ಬ ಪ್ರಮಾಣಿಕ ಅಧಿಕಾರಿಯ ವಿರುದ್ದ ಪೆಟ್ರೊಲ್ ಬಂಕ್​ನವರನ್ನ ಎತ್ತಿ ಕಟ್ತಾರೆ.  ಜೊತೆಗೆ ತಾನು ಬಂದ್ರೆ ಪೆಟ್ರೋಲ್ ಹಾಕುವುದರಲ್ಲಿ ಟೆಂಪರಿಂಗ್ ಮಾಡಲು ಸಹಾಯ ಮಾಡುವುದಾಗಿ ಹೇಳ್ತಾರೆ. ಹೀಗೆ ಮಾಡಿದ್ರೆ, ಈ ದುಬಾರಿ ಪೆಟ್ರೋಲ್ ರೇಟ್ ನಲ್ಲಿ ಜನ ಸಾಮಾನ್ಯರು ಏನಾಗಬೇಕು ಹೇಳಿ.

ಬ್ರೋಕರ್ ಶಿವಕುಮಾರ: ಫೀಸ್ ಕೊಟ್ಬಿಡು ಹಂಗೆ

ಪೆಟ್ರೋಲ್ ಬಂಕ್ ಮಾಲೀಕ: ಯಾರಿಗೆ

ಬ್ರೋಕರ್ ಶಿವಕುಮಾರ: ಮೇಡಂಗೆ

ಪೆಟ್ರೋಲ್ ಬಂಕ್ ಮಾಲೀಕ: ಫೀಸ್ ಬೇಕಾ.?

ಎಸಿ ಸೀಮಾ ಮ್ಯಾಗಿ: ಹೂಂ

ಪೆಟ್ರೋಲ್ ಬಂಕ್ ಮಾಲೀಕ: ಫೀಸ್ ಏನಕ್ಕೆ ಮೇಡಮ್ ಸುಮ್ಮನೆ..

ಬ್ರೋಕರ್ ಶಿವಕುಮಾರ: ಮೇಡಂದು ಒಬ್ರೆ ಅಲ್ಲಾ ನಮ್ಮ ಇಬ್ಬರದ್ದು.

ಪೆಟ್ರೋಲ್ ಬಂಕ್ ಮಾರುತಿ: ಒಳ್ಳೆ ನಂಟಿಸ್ತನದ ಸವಾರಿ ಮೇಡಮ್ ನಿಮ್ಮದು

ಬ್ರೋಕರ್ ಶಿವಕುಮಾರ: ನೋಡಿ, ಎಲ್ಲರಿಗೂ ಏನ್ ಕೊಡ್ತಾರೋ ಕೊಡಿ ನಿಮ್ಮದು.. ನಿಮಗೇನು ಕೇಳಬೇಕಾ. ನಿಮ್ಮಂತವರು ವಿಶ್ವಾಸದಿಂದು ಇನ್ನೂ ಸ್ವಲ್ಪ ಜಾಸ್ತಿನೇ ಕೊಡ್ತಾರೆ.

ಎಸಿ ಸೀಮಾ ಮ್ಯಾಗಿ: ಹ್ಹ ಹ್ಹಾ ಹ್ಹಾ

ಪೆಟ್ರೋಲ್ ಬಂಕ್ ಮಾರುತಿ: ವಿಶ್ವಾಸ ಇದೆ

ಹೀಗೆ ಸ್ವಲ್ಪ ನಾಚಿಕೆಯಿಲ್ಲದೇ ಒಬ್ಬ ಬ್ರೋಕರ್ ಮೂಲಕ ಲಂಚ ಕೇಳಿಸುತ್ತಾರೆ. ಆ ನಂತರ ನಗುತ್ತಾ ತಾನು ನೇರವಾಗಿ ಪಡೆಯದೇ ಹೊರ ಹೋಗ್ತಾರೆ. ಆಗ ಅವರ ಡ್ರೈವರ್ ಬಂದು ಪೆಟ್ರೋಲ್ ಬಂಕ್ ಮಾಲೀನ ಮಾರುತಿಯ ಬಳಿ ಲಂಚದ ಹಣ ಪಡೆಯುತ್ತಾನೆ.

ಪೆಟ್ರೋಲ್ ಬಂಕ್ ಮಾರುತಿ: ನೀನು ನೆಕ್ಟ್ ಬರೋ ಆಫೀಸರ್ ಜತೆನೂ ಇರ್ತಿಯಾ.?

ಸೀಮಾ ಮ್ಯಾಗಿ ಡ್ರೈವರ್: ಇಲ್ಲಾ, ಮೇಡಮ್ ಎಲ್ಲಿ ಹೋಗ್ತಾರೋ, ಅವರ ಜೊತೆ ಹೋಗ್ತಿವಿ

ಪೆಟ್ರೋಲ್ ಬಂಕ್ ಮಾರುತಿ: ಮೇಡಮ್ ಹೇ ಬರ್ತಾರೆ ಬಾ

ಇನ್ನೂ ಇವರ ಲಂಚದ ವ್ಯವಹಾರವನ್ನು ಇವರೇ ಒಂದು ಡೈರಿಯಲ್ಲಿ ಮೆಂಟೇನ್ ಮಾಡುತ್ತಾರೆ. ಹಣ ಪಡೆದುಕೊಳ್ಳುವ ಸೀಮಾ ಡ್ರೈವರ್ ಒಂದು ಡೈರಿಯಲ್ಲಿ ಹಣ ನೀಡಿದ್ದಾಗಿ ಪೆಟ್ರೋಲ್ ಬಂಕ್ ನವರ ಸಹಿ & ಸೀಲ್ ಅನ್ನು ಹಾಕಿಸಿಕೊಂಡು ಹೋಗ್ತಾನೆ.

ಅಲ್ಲಿಂದ ನಂದಿ ಕಿಸಾನ್ ಏಜೆನ್ಸಿ ಪೆಟ್ರೋಲ್ ಬಂಕ್ ಸೇರಿದಂತೆ ಅನೇಕ ಕಡೆ ಲಂಚ ಪಡೆದು ಹೋಗ್ತಾರೆ ಅಂತಾ ದೂರುದಾರ ಪಿಳ್ಳಪ್ಪ ಉಲ್ಲೇಖಿಸಿದ್ದಾರೆ. ಇನ್ನೂ ಈ ಸೀಮಾ ಜೊತೆ ಸಾಥ್ ಕೊಟ್ಟಿರುವ ಬ್ರೋಕರ್ ಶಿವಕುಮಾರ್ ತನ್ನನ್ನ ತಾನು ಈ ಇಲಾಖೆಯ ಇನ್ಸ್​ ಪೆಕ್ಟರ್ ಅಂತಾ ಹೇಳಿಕೊಳ್ಳುತ್ತಾನೆ. ಆದರೆ ಈತನ ವಿರುದ್ದ ಈ ಹಿಂದೆ ಪಿಳಪ್ಪ ದೂರು ನೀಡಿದ್ದರು. ಕಾನೂನು ಮತ್ತು ಮಾಪನ ಶಾಸ್ತ್ರ (ಅಳತೆ ಮತ್ತು ತೂಕ) ಇಲಾಖೆಯ 20 ಏಜೆಂಟರನ್ನು ಎಸಿಬಿ ಪೊಲೀಸರು 2019 ರಲ್ಲಿ ಬಂಧಿಸಿ, ಲಕ್ಷಾಂತರ ರೂಪಾಯಿ ಲಂಚದ ಹಣ ಸೀಜ್ ಮಾಡಿದ್ದರು. ಇತ್ತಾ ಜೈಲಿಗೆ ಹೋಗಿ ಬಂದಿದ್ರೂ ಈತ ಬುದ್ದಿ ಕಲಿತಿಲ್ಲ. ಬಂದ ಅಧಿಕಾರಿಗಳ ಬುಟ್ಟಿಗೆ ಹಾಕಿಕೊಂಡು ಅವರಿಗೆ ಲಂಚ ಕೊಡಿಸಿ ತಾನು ತಿನ್ನೋದು ಮುಂದುವರೆಸಿದ್ದಾನೆ.

ಪಿಳ್ಳಪ್ಪ ಮೊನ್ನೆ ಬೂದಿಗೆರೆ ಕ್ರಾಸ್ ಬಳಿ ಸರ್ಕಾರಿ ಜೀಪಿನಲ್ಲಿ ಈ ಶಿವಕುಮಾರನ ನೋಡಿದ ತಕ್ಷಣ ತಾನು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಆ ವೇಳೆ ಬ್ರೋಕರ್ ಶಿವಕುಮಾರ್ ಜೊತೆ ಸೀಮಾ ಕೆ. ಮ್ಯಾಗಿಯ ಲಂಚವಾತಾರ ಬಹಿರಂಗವಾಗಿದೆ.

ಸೀಮಾ ಕೆ. ಮ್ಯಾಗಿಗೆ ಇಲಾಖೆಯೂ ನೊಟೀಸ್ ಜಾರಿ ಮಾಡಿದೆ. ಆದರೆ, ಸೀಮಾ ತನ್ನ ಮೇಲೆ ಕ್ರಮ ಆಗದಂತೆ ತಡೆಯಲು ಶಾಸಕರ ಕಡೆಯಿಂದ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎಸಿಬಿ ಸೀಮಾ ವಿರುದ್ದ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ವಿಷ್ಣು ಪ್ರಸಾದ್ ಕ್ರೈಂ ಬ್ಯೂರೋ ನ್ಯೂಸ್ ಫಸ್ಟ್.

Source: newsfirstlive.com Source link