ಒಂದೇ ಒಂದು ವಾಟ್ಸ್​​ಆ್ಯಪ್ ಮೆಸೇಜ್; ಸೆಕೆಂಡುಗಳಲ್ಲೇ ನಿಮ್ಮ ಕೈ ಸೇರುತ್ತೆ ವ್ಯಾಕ್ಸಿನ್ ಸರ್ಟಿಫಿಕೇಟ್

ಒಂದೇ ಒಂದು ವಾಟ್ಸ್​​ಆ್ಯಪ್ ಮೆಸೇಜ್; ಸೆಕೆಂಡುಗಳಲ್ಲೇ ನಿಮ್ಮ ಕೈ ಸೇರುತ್ತೆ ವ್ಯಾಕ್ಸಿನ್ ಸರ್ಟಿಫಿಕೇಟ್

ನವದೆಹಲಿ: ವ್ಯಾಕ್ಸಿನ್ ಸರ್ಟಿಫಿಕೇಟ್ ಪಡೆಯಲು ಈ ಹಿಂದೆ ಕೆಲವು ನಿಮಿಷಗಳ ಸಮಯ ಹಿಡಿಯುತ್ತಿತ್ತು. ಇದೀಗ ಈ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಮತ್ತಷ್ಟು ಸರಳೀಕರಿಸಿದ್ದು ಸೆಕೆಂಡುಗಳಲ್ಲೇ ವ್ಯಾಕ್ಸಿನ್ ಸರ್ಟಿಫಿಕೇಟ್ ಕೈ ಸೇರುವಂತೆ ಮಾಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸೆಕೆಂಡುಗಳಲ್ಲೇ ನೀವು ಮಾಡಬೇಕಿರೋದು ಇಷ್ಟೇ..

  • ಮೊದಲಿಗೆ +91 9013151515 ಈ ನಂಬರ್​ನ್ನು ಮೊಬೈಲ್​ಗೆ ಸೇವ್ ಮಾಡಿಕೊಳ್ಳಬೇಕು.
  • ನಂತರ ವಾಟ್ಸ್ ಆ್ಯಪ್​ ಮೂಲಕ ಈ ನಂಬರ್​ಗೆ Covid Sertificate ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಬೇಕು
  • ಇದಾದ ನಂತರ ನಿಮ್ಮ ನಂಬರ್​ಗೆ ಬರುವ ಓಟಿಪಿಯನ್ನ ಎಂಟರ್​ ಮಾಡಬೇಕು.

ಈ ಸರಳ ಮೂರು ವಿಧಾನಗಳನ್ನ ಅನುಸರಿಸಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ನಂಬರ್​ಗೆ ನೀವು ವ್ಯಾಕ್ಸಿನ್ ತೆಗೆದುಕೊಂಡ ಸರ್ಟಿಫಿಕೇಟ್ ನಿಮ್ಮ ಕೈ ಸೇರಲಿದೆ.

Source: newsfirstlive.com Source link