ಆಗ ನಗ್ನವಾಗಿದ್ದೆ.. ಆಗ ನಂಗೆ ಯಾವುದೇ ಸಮಸ್ಯೆ ಇರ್ಲಿಲ್ಲ..’ಆ’ ಅನುಭವ ಬಿಚ್ಚಿಟ್ಟಿದ್ಯಾರು ಗೊತ್ತಾ?

ಆಗ ನಗ್ನವಾಗಿದ್ದೆ.. ಆಗ ನಂಗೆ ಯಾವುದೇ ಸಮಸ್ಯೆ ಇರ್ಲಿಲ್ಲ..’ಆ’ ಅನುಭವ ಬಿಚ್ಚಿಟ್ಟಿದ್ಯಾರು ಗೊತ್ತಾ?

ಪೋರ್ನ್​​ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಲ್ಲಿ ಮುಂಬೈ ಪೊಲೀಸರು ರಾಜ್​​ ಕುಂದ್ರಾ ಬಂಧನ ಮಾಡಿದ ಬೆನ್ನಲ್ಲೇ ಹಲವು ನಟಿಯರು ಮತ್ತು ಮಾಡೆಲ್​​ಗಳು ಗಂಭೀರ ಆರೋಪ ಮಾಡಿದ್ದರು. ಬಾಲಿವುಡ್​​ ನಟಿ ಪೂನಂ ಪಾಂಡೆ ಕೂಡ ರಾಜ್​ ಕುಂದ್ರಾ ವಿರುದ್ಧ ಇಂಥದ್ದೇ ಆರೋಪ ಎಸಗಿದ್ದರು. ಈಗ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶೆರ್ಲಿನ್​ ಚೋಪ್ರಾ ಸರದಿ.

ಇತ್ತೀಚೆಗೆ ಮುಂಬೈ ಪೊಲೀಸರು ಮುಂದೆ ರಾಜ್​ ಕುಂದ್ರಾ ಪ್ರಕರಣ ಸಂಬಂಧ ತನ್ನ ಹೇಳಿಕೆಗಳನ್ನು ದಾಖಲಿಸಿದ್ದ ಶೆರ್ಲಿನ್​ ಚೋಪ್ರಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ರಾಜ್​​ ಕುಂದ್ರಾ ವಿರುದ್ಧ ಗಂಭೀರ ಆರೋಪಗಳು ಮಾಡಿದ್ದಲ್ಲದೇ ತನ್ನನ್ನು ಟ್ರಾಲ್​​ ಮಾಡಿದವರಿಗೆ ಖಡಕ್​​ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ತನ್ನ ಪ್ಲೇ ಬಾಯ್​ ಸಿನಿಮಾದ ಅನುಭವದ ಬಗ್ಗೆಯೂ ಮಾತಾಡಿದ್ದಾರೆ.

blank

ಪ್ರತಿ ಬಾರಿಯೂ ಪೋರ್ನ್​​​ ಸಿನಿಮಾದ ಬಗ್ಗೆ ಮಾತಾಡಿ ಟ್ರಾಲ್​​ಗೆ ಒಳಗಾಗುತ್ತಿದ್ದೇನೆ. 2012ರಲ್ಲಿ ಪ್ಲೇ ಬಾಯ್​​​ ಎಂಬ ಬೋಲ್ಡ್​ ಸಿನಿಮಾದಲ್ಲಿ ನಟಿಸಿದ್ದು ನಿಜ. ಆಗ ನನಗೆ ಬೋಲ್ಡ್​ ಸಿನಿಮಾಗಳಲ್ಲಿ ನಟಿಸೋಕೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದರು.

blank

ನಾನೇ ಪ್ಲೇ ಬಾಯ್​ ಸಿನಿಮಾದಲ್ಲಿ ನಗ್ನವಾಗಿ ನಟಿಸೋಕೆ ಒಪ್ಪಿಕೊಂಡೆ. ಆಗ ನನಗೆ ನಟಿಸೋಕೆ ಆಸೆ ಇದ್ದದು ನಿಜ ಎಂದಿದ್ದಾರೆ.

ಇನ್ನು, ಪೋರ್ನ್​​ ಸಿನಿಮಾದ ಬಗ್ಗೆ ಮಾತಾಡಿದ ನನ್ನ ಟ್ರಾಲ್​​ ಮಾಡುತ್ತಿರುವವರಿಗೆ ಒಂದು ಮಾತು ಹೇಳುತ್ತೇನೆ. ಎಲ್ಲರು ಇದನ್ನು ನೋಡಬೇಕಾದರೆ, ಪೋರ್ನ್​ ಸಿನಿಮಾ ಮಾಡೋದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದೀರಿ. ಸರ್ಕಾರವೇ ಪೋರ್ನ್​​ ವೆಬ್​ಸೈಟ್​​ಗಳನ್ನು ಬ್ಯಾನ್​​ ಮಾಡಿದೆ. ನಾವು ರೂಲ್ಸ್​ ಬ್ರೇಕ್​​ ಮಾಡಬಾರದು, ಅದುವೇ ಈ ನೆಲದ ಕಾನೂನು ಎಂದು ಖಡಕ್​​ ಆಗಿಯೇ ಹೇಳಿದ್ದಾರೆ.

Source: newsfirstlive.com Source link