ಗಡಿಜಿಲ್ಲೆಗೆ ಶಾಕ್ ಕೊಟ್ಟ ಕೊರೊನಾ; ಬೆಂಗಳೂರನ್ನೇ ಮೀರಿಸಿದ ದ. ಕನ್ನಡ ಸೋಂಕಿತರ ಸಂಖ್ಯೆ

ಗಡಿಜಿಲ್ಲೆಗೆ ಶಾಕ್ ಕೊಟ್ಟ ಕೊರೊನಾ; ಬೆಂಗಳೂರನ್ನೇ ಮೀರಿಸಿದ ದ. ಕನ್ನಡ ಸೋಂಕಿತರ ಸಂಖ್ಯೆ

ಬೆಂಗಳೂರು: ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಗಡಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 438 ಹೊಸ ಕೊರೊನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಬೆಂಗಳೂರು ನಗರದಲ್ಲಿ ಇಂದು 348 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ: ಮೂರನೆ ಅಲೆ ಆತಂಕ: ಇಂದಿನಿಂದ ಕುಕ್ಕೆ, ಧರ್ಮಸ್ಥಳದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ

ಇನ್ನು ರಾಜ್ಯದಾದ್ಯಂತ ಇಂದು 1,598 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 29,18,525ಕ್ಕೆ ಏರಿಕೆಯಾಗಿದೆ. ಇಂದು 1,914 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಈವರೆಗೆ 28,57,776 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ.

ಇದನ್ನೂ ಓದಿ: ಕೊರೊನಾ ಭೀತಿ: ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಆತಂಕ..ಚೆಕ್​ಪೋಸ್ಟ್​ಗಳಲ್ಲಿ ಮತ್ತಷ್ಟು ಬಿಗಿಯಾದ ತಪಾಸಣೆ

ಇಂದು ಸೋಂಕಿನಿಂದಾಗಿ ರಾಜ್ಯದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 36,793 ಮಂದಿ ಕೊರೊನಾದಿಂದ ಸಾವನ್ನಪ್ಪಿದಂತಾಗಿದೆ. ಸದ್ಯ ರಾಜ್ಯದಲ್ಲಿ 23,930 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್​ನಲ್ಲಿ ಹೇಳಿದೆ.

blank

Source: newsfirstlive.com Source link