ದೇಹದ ತೂಕ ಇಳಿಸಬೇಕಾ? ಈ ಸಲಹೆ ಪಾಲಿಸಿ

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ ಎನ್ನುವುದು ತಿಳಿದಿರುವ ವಿಚಾರವಾಗಿದೆ.

ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಬಹಳ ಕಷ್ಟ. ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಹಲವಾರು ಪ್ರಯತ್ನಗಳನ್ನು ಮಾಡಿರುತ್ತೀರಿ, ಕೆಲವು ಜೀವನಶೈಲಿ ಕೂಡ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ. ಮನೆಯಲ್ಲಿರುವ ಕೆಲವು ಪದಾರ್ಥ ಮತ್ತು ಕೆಲವು ಪ್ರತಿನಿತ್ಯ ರೂಢಿಯನ್ನು ಬೆಳಸಿಕೊಳ್ಳುವ ಮೂಲಕವಾಗಿ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದಾಗಿದೆ.

* ಸರಿಯಾದ ಸಮಯಕ್ಕೆ ಊಟ, ತಿಂಡಿ ತಿನ್ನುವ ಅಭ್ಯಾಸವನ್ನು ಇಟ್ಟುಕೊಳ್ಳುವುದು ಉತ್ತಮವಾಗಿದೆ. ಸಂಜೆ 7 ರ ಮೊದಲು ಆಹಾರ ಸೇವಿಸುವುದು ಉತ್ತಮವಾಗಿದೆ. ಅಲ್ಲದೇ ಊಟವಾದ ಸುಮಾರು 1 ರಿಂದ 2 ಗಂಟೆಗಳ ನಂತರ ಮಲಗುವುದು ಒಳ್ಳೆಯ ಅಭ್ಯಾಸವಾಗಿದೆ.

* ಅಡುಗೆ ಮನೆಯಲ್ಲಿಯೇ ಹೊಟ್ಟೆಯ ಬೊಜ್ಜನ್ನು ಕರಗಿಸಲು ಬೇಕಾಗುವ ಹಲವಾರು ವಸ್ತುಗಳಿವೆ. ಮೆಂತ್ಯೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ಪುಡಿಯನ್ನು ನೀರಿನೊಂದಿಗೆ ಸೇವಿಸುವುದು ಹೊಟ್ಟೆಯ ಬೊಜ್ಜನ್ನು ಕರಗಿಸಲು ರಾಮಬಾಣವಾಗುತ್ತದೆ.

blank

*ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಮೆಂತ್ಯೆಯಲ್ಲಿನ ಕೆಲ ಪದಾರ್ಥಗಳು ಹೊಟ್ಟೆಯಲ್ಲಿನ ಬೊಜ್ಜನ್ನು ಕರಗಿಸುತ್ತದೆ ಹಾಗೂ ದೇಹದ ತೂಕ ಕಡಿಮೆ ಮಾಡುತ್ತದೆ.

blank

* ಹುಣಸೇ ಹಣ್ಣನ್ನು ಸೇವಿಸುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

blank

* ಒಣ ಶುಂಠಿಯ ಪುಡಿಯನ್ನು ಸೇವಿಸುವುದು ಉತ್ತಮ. ಏಕೆಂದರೆ ಅದು ಕೊಬ್ಬನ್ನು ಕರಗಿಸಲು ಉಪಯುಕ್ತವಾದ ಥರ್ಮೋಜೆನಿಕ್ ಏಜೆಂಟ್‍ಗಳನ್ನು ಹೊಂದಿದೆ. ಬಿಸಿ ನೀರಿನಲ್ಲಿ ಒಣಗಿದ ಶುಂಠಿಯನ್ನು ಸೇವಿಸುವುದರಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

blank

* ನಿಮಗೆ ನೀರು ಕುಡಿಯಬೇಕು ಎನಿಸಿದಾಗೆಲ್ಲ ಬೆಚ್ಚಗಿನ ನೀರನ್ನು ಕುಡಿಯಿರಿ. ಜೀರ್ಣಕ್ರೀಯೆಯನ್ನು ಸುಧಾರಿಸುತ್ತದೆ.

* ನೀವು ಪ್ರತಿನಿತ್ಯ ಒಂದೇ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಢಿಮಾಡಿಕೊಳ್ಳಿ.

Source: publictv.in Source link