ಹೆಡ್​​​ ಬುಷ್​​​​​ನಲ್ಲಿ ಡಾಲಿ ಧನಂಜಯ್​​ ಕೈ ಹಿಡಿಯಲಿರುವ ಈ ಸ್ಮೋಕಿಂಗ್​​ ಬ್ಯೂಟಿ ಯಾರು ಗೊತ್ತಾ?

ಹೆಡ್​​​ ಬುಷ್​​​​​ನಲ್ಲಿ ಡಾಲಿ ಧನಂಜಯ್​​ ಕೈ ಹಿಡಿಯಲಿರುವ ಈ ಸ್ಮೋಕಿಂಗ್​​ ಬ್ಯೂಟಿ ಯಾರು ಗೊತ್ತಾ?

ಕನ್ನಡದ ನಟ ರಾಕ್ಷಸ ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್’ ಸಿನಿಮಾಗೆ ಹೀರೋಯಿನ್​​​ ಆಯ್ಕೆಯಾಗಿದ್ದಾರೆ. ತೆಲುಗಿನ ‘RX 100’ ಚಿತ್ರದ ಮೂಲಕ ಟಾಲಿವುಡ್​​ನಲ್ಲಿ ಭಾರೀ ಹೆಸರು ಮಾಡಿದ್ದ ಪಾಯಲ್​​​​ ರಜಪೂತ್​​​ ಈಗ ‘ಹೆಡ್ ಬುಷ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್​​ಗೆ ಪ್ರವೇಶಿಸುತ್ತಿದ್ದಾರೆ.

ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಡಾಲಿ ‘ಹೆಡ್ ಬುಷ್’ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಮೊದಲ ಬಾರಿಗೆ ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ಈ ಚಿತ್ರದ ನಿರ್ಮಾಣ ಮಾಡಲಾಗುತ್ತಿದೆ.

blank

ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಶೂನ್ಯ ಎಂಬ ಹೊಸ ಡೈರೆಕ್ಟರ್​​​​ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ ‘ಹೆಡ್ ಬುಷ್’ ಸಿನಿಮಾ ತಯಾರಾಗಲಿದೆ.

blank

ಪಾಯಲ್ ರಜಪೂತ್ ಯಾರು?

ಪಾಯಲ್ ರಜಪೂತ್​​ ಹಿಂದಿ ಕಿರುತೆರೆ ಮೂಲಕ ಬಣ್ಣ ಹಚ್ಚಿದ್ದರು. ಈಗ ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.

Source: newsfirstlive.com Source link