ಸಹೋದರಿಯ ಸಾವಿನ ಸುದ್ದಿ ಮುಚ್ಚಿಟ್ಟ ತಾಯಿ; ವಿಷಯ ತಿಳಿದು ನಿಂತಲ್ಲೇ ಕುಸಿದುಬಿದ್ದ ಒಲಿಂಪಿಕ್ಸ್ ಓಟಗಾರ್ತಿ

ಸಹೋದರಿಯ ಸಾವಿನ ಸುದ್ದಿ ಮುಚ್ಚಿಟ್ಟ ತಾಯಿ; ವಿಷಯ ತಿಳಿದು ನಿಂತಲ್ಲೇ ಕುಸಿದುಬಿದ್ದ ಒಲಿಂಪಿಕ್ಸ್ ಓಟಗಾರ್ತಿ

ತಿರುಚಿನಾಪಳ್ಳಿ: ಭಾರತೀಯ ಓಟಗಾರ್ತಿಯರಾದ ಶುಭಾ ವೆಂಕಟರಾಮನ್ ಮತ್ತು ಸಹೋದರಿ ಧನಲಕ್ಷ್ಮಿ ಶೇಕರ್ ಟೋಕಿಯೋ ಒಲಿಂಪಿಕ್ಸ್​ನಿಂದ ಕಳೆದ ಶನಿವಾರ ತಮ್ಮ ಊರಾದ ತಿರುಚಿನಾಪಳ್ಳಿಗೆ ವಾಪಸ್ಸಾಗಿದ್ದಾರೆ, ಈ ವೇಳೆ ಅವರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದ್ದು ಧನಲಕ್ಷ್ಮಿ ನಿಂತಲ್ಲೇ ಕುಸಿದುಬಿದ್ದ ಘಟನೆ ನಡೆದಿದೆ.

ಧನಲಕ್ಷ್ಮಿ ಒಲಿಂಪಿಕ್ಸ್​ಗೆಂದು ತೆರಳಿದ್ದ ವೇಳೆ ಅವರ ಸಹೋದರಿ ಸಾವನ್ನಪ್ಪಿದ್ದಾರೆ. ಆದ್ರೆ ಈ ಮಾಹಿತಿಯನ್ನು ಅವರ ತಾಯಿ ಮಗಳಿಗೆ ತಿಳಿಸಿಲ್ಲ. ಮಗಳಿಗೆ ಸಹೋದರಿ ಸಾವನ್ನಪ್ಪಿರುವ ವಿಚಾರ ತಿಳಿದರೆ ಆಟದ ಮೇಲೆ ಗಮನ ಹರಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಮಗಳ ಸಾವಿನ ವಿಚಾರವನ್ನ ಧನಲಕ್ಷ್ಮಿಗೆ ತಿಳಿಸದೇ ಮುಚ್ಚಿಟ್ಟಿದ್ದಾರೆ. ಊರಿಗೆ ವಾಪಸ್ಸಾಗುತ್ತಿದ್ದಂತೆಯೇ ಧನಲಕ್ಷ್ಮಿಗೆ ಸಹೋದರಿಯ ಸಾವಿನ ವಿಚಾರ ತಿಳಿದು ನಿಂತಲ್ಲೇ ಕುಸಿದುಬಿದ್ದಿದ್ದಾರೆ. ನನ್ನ ತಾಯಿ ನಾನು ಒಲಿಂಪಿಕ್ಸ್​ಗೆ ಹೋಗಬೇಕೆಂದು ಬಹಳ ಕಷ್ಟಪಟ್ಟಿದ್ದರು ಎಂದು ಧನಲಕ್ಷ್ಮಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link