ಆಧಾರ್ ಕಾರ್ಡ್ ಮಾಡಿಸಲೆಂದು ಕರೆದೊಯ್ದು ₹40 ಸಾವಿರಕ್ಕೆ ಮಗುವನ್ನೇ ಮಾರಿದ ತಂದೆ

ಆಧಾರ್ ಕಾರ್ಡ್ ಮಾಡಿಸಲೆಂದು ಕರೆದೊಯ್ದು ₹40 ಸಾವಿರಕ್ಕೆ ಮಗುವನ್ನೇ ಮಾರಿದ ತಂದೆ

ಅಸ್ಸಾಂ: ಡ್ರಗ್ಸ್ ಸೇವನೆಗೆ ಹಣವಿಲ್ಲವೆಂದು ತಂದೆಯೋರ್ವ ಎರಡೂವರೆ ವರ್ಷದ ಮಗುವೊಂದನ್ನ ₹40,000 ರೂಗಳಿಗೆ ಮಾರಾಟ ಮಾಡಿದ ಘಟನೆ ಅಸ್ಸಾಂನ ಮೊರಿಗನ್ ಜಿಲ್ಲೆಯಲ್ಲಿ ನಡೆದಿದೆ. ಮೊರಿಗನ್ ಜಿಲ್ಲೆಯ ಲಹರಿಘಾಟ್​​ನಲ್ಲಿ ಘಟನೆ ನಡೆದಿದ್ದು ಅಮಿನುಲ್ ಇಸ್ಲಾಂ ಎಂಬಾತ ಸಜೀದಾ ಬೇಗಂ ಎಂಬುವವರಿಗೆ ಮಗುವನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಾಯಿ ರುಕ್ಮಿಣಾ ಬೇಗಂ ಗಂಡನ ಜೊತೆ ಜಗಳವಾಡಿಕೊಂಡು ತನ್ನ ತಂದೆಯ ಮನೆಯಲ್ಲಿ ವಾಸವಿದ್ದರು.. ಈ ವೇಳೆ ಅದೊಂದು ದಿನ ಮಾವನ ಮನೆಗೆ ಬಂದ ತಂದೆ ಅಮಿನುಲ್ ಇಸ್ಲಾಂ ಮಗುವಿಗೆ ಆಧಾರ್ ಕಾರ್ಡ್ ಮಾಡಿಸಬೇಕೆಂದು ಕಾರಣ ನೀಡಿ ಕರೆದೊಯ್ದಿದ್ದಾನೆ. ಎರಡು ಮೂರು ದಿನಗಳು ಕಳೆದರೂ ಗಂಡ ಮಗುವನ್ನ ಕರೆತರದಿದ್ದರಿಂದ ಅನುಮಾನಗೊಂಡ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ತನಿಖೆ ನಡೆಸಿ ಮಗುವನ್ನ ಪತ್ತೆಹಚ್ಚಿದ್ದಾರೆ.

Source: newsfirstlive.com Source link