ಮೊದಲು ಪಕ್ಷಕ್ಕೆ ಕೆಲಸ ಮಾಡ್ಲಿ.. ಆಮೇಲೆ ಖಾತೆ ಕೇಳಲಿ- ಅತೃಪ್ತ ಸಚಿವರಿಗೆ ಮುನಿರತ್ನ ಟಾಂಗ್

ಮೊದಲು ಪಕ್ಷಕ್ಕೆ ಕೆಲಸ ಮಾಡ್ಲಿ.. ಆಮೇಲೆ ಖಾತೆ ಕೇಳಲಿ- ಅತೃಪ್ತ ಸಚಿವರಿಗೆ ಮುನಿರತ್ನ ಟಾಂಗ್

ತುಮಕೂರು: ಸಿದ್ದಗಂಗಾ ಮಠದ ಭೇಟಿ ಬಳಿಕ ಸಚಿವ ಮುನಿರತ್ನ ಮಾತನಾಡಿದ್ದು.. ನನಗೆ ಕೊಟ್ಟಿರುವ ಖಾತೆ ತೃಪ್ತಿ ತಂದಿದೆ.. ಇನ್ನೊಂದು ಪಕ್ಷದಿಂದ ಈ ಪಕ್ಷಕ್ಕೆ ಬಂದಿದ್ದೀವಿ.. ಪಕ್ಷಕ್ಕೆ ನಮ್ಮ ಕೊಡುಗೆ ಏನೂ ಇಲ್ಲ… ರಾಜೀನಾಮೆ ಕೊಟ್ಟಿದ್ದೀವಿ.. ಈ ಪಕ್ಷಕ್ಕೆ ಬಂದಿದ್ದೀವಿ..ಶಾಸಕ ಸ್ಥಾನ ಕೊಟ್ಟಿದ್ದಾರೆ, ಎಲ್ಲಾ ಕೊಟ್ಟಿದ್ದಾರೆ. ನಾವು ಪಕ್ಷದಲ್ಲಿ ಸ್ವಲ್ಪ ದಿನ ಕೆಲಸ ಮಾಡ್ಬೇಕು. ಕೆಲಸ ಮಾಡಿ ಆಮೇಲೆ ಬೇಕಾದ್ರೆ ಇಂತ ಖಾತೆ ಕೊಡಿ ಅಂತ ಕೇಳ್ಬಹುದು ಎಂದು ಹೇಳುವ ಮೂಲಕ ಅತೃಪ್ತಿ ಹೊರಹಾಕಿದ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.

ಏಕಾಏಕಿ ಬಂದು ತ್ಯಾಗ ಮಾಡಿದ್ದೀವಿ, ಪಕ್ಷ ಬಿಟ್ಟು ಬಂದಿದ್ದೀವಿ ಅಂತ ಎಷ್ಟು ದಿನ ಇದನ್ನೇ ಮಾತಾಡ್ತಿರೋದು. ಪಕ್ಷದಲ್ಲಿ ಒಬ್ಬರಾಗಿ ಪಕ್ಷಕ್ಕೆ ಸೇವೆ ಮಾಡೋದನ್ನ ಕಲೀಬೇಕು. ಪಕ್ಷಕ್ಕೆ ಸೇವೆ ಮಾಡದೇ ತ್ಯಾಗ ಮಾಡಿದ್ವಿ, ಬಂದ್ವಿ ಅಂದ್ರೆ ಅದು ನಂಗೆ ಸರಿ ಕಾಣ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಬೇಕು. ಬಂದ ತಕ್ಷಣವೇ ದೊಡ್ಡ ಖಾತೆ ಬೇಕು ಅಂದ್ರೆ ಸರಿ ಕಾಣೋದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ,  ಪಕ್ಷಕ್ಕೆ ಕೆಲಸ ಮಾಡ್ಲಿ ಆಮೇಲೆ ಖಾತೆ ಕೇಳಲಿ. ಸಿಎಂ ಬದಲಾವಣೆ ಆದ್ರೂ ನಮಗೆ ಪಕ್ಷದಲ್ಲಿ ಯಾವುದೇ ಅಭದ್ರತೆ  ಇಲ್ಲ ಎಂದಿದ್ದಾರೆ.

Source: newsfirstlive.com Source link