ಮರಳಿ ಮನಸ್ಸಾಗಿದೆ ಸೀರಿಯಲ್​ ಟೈಟಲ್​ ಟ್ರಾಕ್​ ಔಟ್​..

ಮರಳಿ ಮನಸ್ಸಾಗಿದೆ ಸೀರಿಯಲ್​ ಟೈಟಲ್​ ಟ್ರಾಕ್​ ಔಟ್​..

ಮರಳಿ ಮನಸ್ಸಾಗಿದೆ.. ಇದು ಹೊಚ್ಚ ಹೊಸ ಸೀರಿಯಲ್‌. ನಮ್ಮ ಚಂದನ್‌ಕುಮಾರ್ ಖಡಕ್ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ಬರ್ತಿರೋ ಧಾರಾವಾಹಿ. ಈ ಧಾರಾವಾಹಿ ಬಗ್ಗೆ ನಾವು ನಿಮಗೆ ತಿಳಿಸಿದ್ವಿ. ಮಾತು ಕೊಟ್ಟ ಮನಸ್ಸುಗಳ ನಡುವೆ ಪ್ರೀತಿಯ ಸೇತುವೆ ಅನ್ನೋ ಟ್ಯಾಗ್‌ಲೈನ್ ಮೂಲಕ ಬರ್ತಿರೋ ಮರಳಿ ಮನಸ್ಸಾಗಿದೆ ಧಾರವಾಹಿಯ ಪ್ರೋಮೊ ಇದೀಗ ಸಖತ್​ ವೈರಲ್​ ಆಗ್ತಾಯಿದೆ.

blank

ಪ್ರೋಮೋದಲ್ಲಿ ಇಷ್ಟವಿಲ್ಲದಿದ್ದರೂ ಕೊಟ್ಟ ಮಾತಿಗೆ ಬೆಲೆ ಕೊಟ್ಟು ಚಂದನ್​ ಹುಡುಗಿಯನ್ನು ಮದುವೆಯಾಗ್ತಾನೆ.. ಆದ್ರೆ ಆ ಹುಡುಗಿಗು ಈ ಮದುವೆ ಇಷ್ಟವಿರುವುದಿಲ್ಲ.. ಒಬ್ಬರನ್ನೊಬ್ಬರು ಇಷ್ಟಪಡದೇ ಮದುವೆಯಾಗಿ ಮುಂದೆ ಅವರು ಹೇಗೆ ಇರ್ತಾರೆ ಏನೆಲ್ಲಾ ಕಷ್ಟಗಳ ಬರಬಹುದು ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾವಸ್ತು.

ಇನ್ನು ಸದ್ಯ ಮರಳಿ ಮನಸಾಗಿದೆ ಧಾರಾವಾಹಿಯ ಟೈಟಲ್​ ಟ್ರ್ಯಾಕ್​ ರಿಲೀಸ್​ ಆಗಿದ್ದು, ಹಾಡು ಚನ್ನಾಗಿ ಮೂಡಿ ಬಂದಿದೆ.. ಈ ಹಾಡಿನಲ್ಲಿ ತಮ್ಮ ಪ್ರೀತಿಯ ಬಗ್ಗೆ ವ್ಯಕ್ತಪಡಿಸಿದ್ದಾರೆ.. ಇನ್ನು ಕಾಸ್ಟ್ಯೂಮ್​ ಹಾಗೂ ಕ್ವಾಲಿಟಿ ಕೂಡಾ ಸೂಪರ್​ ಆಗಿದೆ.

blank

ಚಂದನ್‌ ಜೊತೆ ನಟಿಸ್ತಿರೋದು ನಟಿ ದಿವ್ಯಾ ವಾಗುಕರ್​. ಈ ಧಾರಾವಾಹಿಯಲ್ಲಿ ಸ್ಪಂದನ ರೋಲ್​ಗೆ ಬಣ್ಣ ಹಚ್ಚಿದ್ದು..ಎಸ್​ ಪಿ ವಿಕ್ರಾಂತ್​ ನಾಯಕ್​ ಪತ್ನಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೊಸ ಕಥೆಯ ಮೂಲಕ ನಿಮ್ಮನ್ನು ರಂಜಿಸಲಿರುವ ಮರಳಿ ಮನಸ್ಸಾಗಿದೆ ಧಾರಾವಾಹಿ ಅಗಸ್ಟ್ 9 ರಂದು ಲಾಂಚ್ ಆಗಲಿದೆ.

Source: newsfirstlive.com Source link