ಗುರುವಿಗೆ ತಕ್ಕ ಶಿಷ್ಯ; 105 ಮೀಟರ್ ಭರ್ಜಿ​​ ಎಸೆದಿದ್ದ ನೀರಜ್​​ ಚೋಪ್ರಾ ಕೋಚ್​​

ಗುರುವಿಗೆ ತಕ್ಕ ಶಿಷ್ಯ; 105 ಮೀಟರ್ ಭರ್ಜಿ​​ ಎಸೆದಿದ್ದ ನೀರಜ್​​ ಚೋಪ್ರಾ ಕೋಚ್​​

ಗುರುವಿಗೆ ತಕ್ಕ ಶಿಷ್ಯ ಎಂಬ ಗಾದೆ ಮಾತೊಂದಿದೆ. ಓರ್ವ ಗುರು ಮನಸ್ಸು ಮಾಡಿದರೆ ಯಾವುದೇ ಸಾಧನೆಯಾದರೂ ಚಿಟಿಕೆ ಹೊಡೆದಷ್ಟೇ ಸುಲಭ. ಕೇವಲ ಗುರು ಮಾತ್ರವಲ್ಲ ಏನಾದರೂ ಸಾಧಿಸಲು ಶಿಷ್ಯ ಕೂಡ ಗುರು ತೋರಿಸಿದ ಹಾದಿಯಲ್ಲೇ ಸಾಗಬೇಕು. ಈಗ ನೀರಜ್ ಕೂಡ ಗುರು ತೋರಿದ ಹಾದಿಯಲ್ಲಿ ಸಾಗಿದ್ದಕ್ಕೇ ಇದೀಗ ಚಿನ್ನದ ಪದಕ ಗೆದ್ದಿದ್ದಾರೆ. 

ಹೌದು, ನೀರಜ್‌ ಚೋಪ್ರಾ ಸಾಧನೆಯ ಶ್ರೇಯ ಕೋಚ್‌ ಯುವೆ ಹಾನ್​​ ಅವರಿಗೆ ಸಲ್ಲಬೇಕು. ಏಕೆಂದರೆ, ನೀರಜ್​​ ಇಂದು ಮಾಡಿದ ಸಾಧನೆ ಜರ್ಮನಿ ಮೂಲದ ಕೋಚ್​​ ಹಾನ್‌ 27 ವರ್ಷಗಳ ಹಿಂದೆಯೇ ಮಾಡಿದ್ದರು ಎಂದು ತಿಳಿದು ಬಂದಿದೆ.

ಹಾನ್​​ 1984, ಜುಲೈ 20ರಂದು ನಡೆದಿದ್ದ ಕೂಟವೊಂದರಲ್ಲಿ 104.80 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆದಿದ್ದರು. ಇಲ್ಲಿಯವರೆಗೂ ಈ ದಾಖಲೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: BIG BREAKING: ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ

ಇಷ್ಟು ಮಾತ್ರವಲ್ಲದೇ ಹಾನ್​​​ 1985ರಲ್ಲಿ ಕ್ಯಾನ್‌ಬೆರಾ ಒಲಿಂಪಿಕ್ಸ್​ನಲ್ಲಿ 96.96 ಮೀಟರ್ಸ್‌ ಜಾವೆಲಿನ್‌ ಎಸೆದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. 1982ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು.

ಭಾರತದ ಕೋಚ್​ ಆಗಿ ನೇಮಕ

2017 ನವೆಂಬರ್‌ ತಿಂಗಳಿನಲ್ಲಿ ಹಾನ್​​ ಭಾರತ ಜಾವೆಲಿನ್‌ ಥ್ರೋ ತಂಡದ ಕೋಚ್‌ ಆಗಿ ನೇಮಕಗೊಂಡರು. ಈಗ ಇವರ ಮಾರ್ಗದರ್ಶನ ಮತ್ತು ನೀರಜ್​​ ಚೋಪ್ರಾ ಪರಿಶ್ರಮದಿಂದ ಭಾರತಕ್ಕೆ ಚಿನ್ನದ ಪದಕ ಬಂದಿದೆ.

Source: newsfirstlive.com Source link