RR & KKRಗೆ ಗುಡ್​​ನ್ಯೂಸ್​​: ಶಕೀಬ್​​-ಮುಸ್ತಫಿಜುರ್​ ಐಪಿಎಲ್​ ಹಾದಿ ಸುಗಮ

RR & KKRಗೆ ಗುಡ್​​ನ್ಯೂಸ್​​: ಶಕೀಬ್​​-ಮುಸ್ತಫಿಜುರ್​ ಐಪಿಎಲ್​ ಹಾದಿ ಸುಗಮ

2ನೇ ಹಂತದ IPL​​​ಗೆ ಭಾಗವಹಿಸೋದಕ್ಕೆ ಬಾಂಗ್ಲಾ ಕ್ರಿಕೆಟಿಗರಿಗೆ ನಿರಾಪೇಕ್ಷಣಾ ಪ್ರಮಾಣ ಪತ್ರ ನೀಡಲು ಬಾಂಗ್ಲಾದೇಶ ಕ್ರಿಕೆಟ್​​ ಮಂಡಳಿ ಒಪ್ಪಿಗೆ ನೀಡಿದೆ. ಇಂಗ್ಲೆಂಡ್​ ಎದುರಿನ ಸರಣಿಯನ್ನು ಮರು ಪರಿಷ್ಕರಿಸಿ ಮುಂದೂಡಿರುವ ಕಾರಣ, ಐಪಿಎಲ್​ ಆಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕೊಲ್ಕತ್ತಾ ನೈಟ್​ ರೈಡರ್ಸ್​ ಪರ ಶಕೀಬ್ ಅಲ್ ಹಸನ್ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡದ ಪರ ಮುಸ್ತಫಿಜುರ್ ರೆಹಮಾನ್ ಆಡ್ತಿದ್ದು, ಇವರಿಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಟಿ20 ವಿಶ್ವಕಪ್​​ಗೂ ಮುನ್ನ ಪೂರ್ವ ಸಿದ್ಧತೆಗೆ ಇದೊಂದು ಉತ್ತಮ ಅವಕಾಶ ಎಂದೂ ಹೇಳಲಾಗ್ತಿದೆ. ಐಪಿಎಲ್ ನಡೆಯೋ​​​ ಸೆಪ್ಪೆಂಬರ್​ನಲ್ಲಿ ಬಾಂಗ್ಲಾದೇಶ – ಇಂಗ್ಲೆಂಡ್​ ನಡುವೆ ದ್ವಿಪಕ್ಷೀಯ ಸರಣಿ ನಡೆಯಬೇಕಿತ್ತು.

blank

ಈ ಕಾರಣದಿಂದಾಗಿ ಈ ಇಬ್ಬರ ಪಾಲ್ಗೊಳ್ಳುವಿಕೆಗೆ ಬಾಂಗ್ಲಾ ಕ್ರಿಕೆಟ್​ ಮಂಡಳಿ ಎನ್​​ಒಸಿ ಪತ್ರ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿತ್ತು.  ಆದರೆ ಅನ್ಯ ಕಾರಣಗಳಿಂದ ಈ ಸರಣಿಯನ್ನ 2023ರ ಮಾರ್ಚ್​​​ಗೆ ಮುಂದೂಡಲಾಗಿದೆ. ಹಾಗಾಗಿ ಇಬ್ಬರೂ ಆಟಗಾರರಿಗೆ 2ನೇ ಹಂತದ ಐಪಿಎಲ್​​ನಲ್ಲಿ ಭಾಗವಹಿಸೋಕೆ ಅವಕಾಶ ನೀಡಲಾಗಿದೆ.

Source: newsfirstlive.com Source link