ಕ್ರಿಕೆಟ್​ ಆಡೋದಕ್ಕೆ ಮುಂಬೈ ತಂಡವನ್ನ ಆಹ್ವಾನಿಸಿದ ಓಮನ್​ ಕ್ರಿಕೆಟ್​ ಸಂಸ್ಥೆ

ಕ್ರಿಕೆಟ್​ ಆಡೋದಕ್ಕೆ ಮುಂಬೈ ತಂಡವನ್ನ ಆಹ್ವಾನಿಸಿದ ಓಮನ್​ ಕ್ರಿಕೆಟ್​ ಸಂಸ್ಥೆ

5 ಅಥವಾ 6 ಟಿ-20 ಪಂದ್ಯಗಳನ್ನ ಆಡಲು ಮುಂಬೈ ತಂಡವನ್ನ ಓಮನ್​​​ ಕ್ರಿಕೆಟ್ ಸಂಸ್ಥೆ ಆಹ್ವಾನಿಸಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಒಮನ್ ತಂಡಕ್ಕೆ ಪ್ರಾಥಮಿಕ ಅಭ್ಯಾಸ ಅವಶ್ಯಕತೆ ಇದೆ.  ಹೀಗಾಗಿ ಓಮನ್ ಕ್ರಿಕೆಟ್ ನ​​​ ಮುಖ್ಯಸ್ಥ ಪಂಕಜ್ ಖಿಮ್ಜಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದುಲೀಪ್ ಮೆಂಡಿಸ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಸಂಜಯ್ ನಾಯಕ್ ಅವರಿಗೆ ಸಂದೇಶ ಕಳುಹಿಸಿದ್ರು.

ಇದೀಗ ನಮ್ಮ ಮನವಿಯನ್ನ MCA ಸ್ವೀಕರಿಸಿದ್ದು, ಮುಂಬೈ ತಂಡವು ಪ್ರಯಾಣ ಬೆಳೆಸಲಿದೆ ಎಂದು ಮೆಂಡಿಸ್ ಹೇಳಿದ್ದಾರೆ. ತಂಡವು ಆಗಸ್ಟ್ 19ರಂದು ಮಸ್ಕತ್​​ಗೆ ಹೊರಡಲು ಸಜ್ಜಾಗಿದೆ. ಮುಂಬೈ ತಂಡವು ರಾಷ್ಟ್ರೀಯ ತಂಡದೊಂದಿಗೆ ಆಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ವಿಶ್ವಕಪ್​​ಗೂ ಮುನ್ನ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಓಮನ್​ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಪ್ರವಾಸವನ್ನ MCA ಅಧಿಕಾರಿಗಳು, ದೃಢಪಡಿಸಿದ್ದು, ಶೀಘ್ರದಲ್ಲೇ ಮುಂಬೈ ತಂಡವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

 

Source: newsfirstlive.com Source link