ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ -ಕೆ.ಎಸ್​ ಈಶ್ವರಪ್ಪ

ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ -ಕೆ.ಎಸ್​ ಈಶ್ವರಪ್ಪ

ಚಿತ್ರದುರ್ಗ: ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ವೇಳೆ ಅಸಮಾಧಾನ ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಕೆ.ಎಸ್​ ಈಶ್ವರಪ್ಪ, ಮಂತ್ರಿಗಳಿಗೆ ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜ. ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ ಎಂದರು.

ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ಕೆಟ್ಟ ಕನಸು ಬೀಳುತ್ತಿದೆ. ಯಾವಾಗಲೂ ಬಿಜೆಪಿ ಸರ್ಕಾರ ಉರುಳುವ ಕನಸು. ಮತ್ತೆ ಸಿಎಂ ಆಗಬೇಕು ಎಂದು ಕನುಸ ಕಾಣುತ್ತಿರುವ ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ. ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಮಾಡಿದ ಮೋಸದಿಂದಲೇ ಸಿದ್ದರಾಮಯ್ಯ ಸರ್ಕಾರ ಹೋಯ್ತು ಎಂದು ಕಿಡಿಕಾರಿದರು.

ಇದನ್ನೂ ಓದಿ: ರೋಗಗ್ರಸ್ಥ ಸರ್ಕಾರಿ ಕೈಗಾರಿಕೆಗಳಿಗೆ ಮರುಚಾಲನೆ.. ಇಲ್ಲವೇ ಸೇಲ್ ಮಾಡಿ ಕಾರ್ಯಾರಂಭ- ನಿರಾಣಿ

ರಾಜ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಸರ್ಕಾರ ಬರಲ್ಲ. ಸಿದ್ದರಾಮಯ್ಯ ಸಿಎಂ ಕನಸು ಕಾಣುವುದು ಬೇಡ. ಹೊರಗಡೆಯಿಂದ ಬಂದವರು ವಲಸಿಗರು ಎಂದು ಡಿಕೆಶಿ ಹೇಳಿದ್ದರು. ಕಾಂಗ್ರೆಸ್ ಪಕ್ಷದ ಸೊಸೆ ಎಂದು ಹೇಳಿ ಸಿದ್ದರಾಮಯ್ಯ ಒಪ್ಪಿಕೊಂಡರು. ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷದ ಮಗ ಅಂದರು ಗೆದ್ದರು ಎಂದು ಹೇಳಿದರು.

ಇಂದಿರಾ ಕ್ಯಾಂಟಿನ್​​ ಹೆಸ್ರು ಸುಮ್ಮನೆ ತೆಗೆಯಲ್ಲ

ಇಂದಿರಾ ಕ್ಯಾಂಟೀನ್ ಹೆಸರು ಸುಮ್ಮಸುಮ್ಮನೆ ತೆಗೆಯಲು ಹೋಗಲ್ಲ. ಜನರ ಸಂತೋಷ ಪಡುವ ದಿಕ್ಕಲ್ಲಿ ಏನು ಮಾಡಬೇಕು ಮಾಡುತ್ತೇವೆ. ರಾಜೀವ ಗಾಂಧಿ ಹೆಸರು ತೆಗೆದು ಧ್ಯಾನಚಂದ್ ಹೆಸರು ಇಟ್ಟಿದ್ದೇವೆ. ನಿಮ್ಮಿಂದ ಏನು ಮಾಡೋಕಾಯ್ತು ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಆರ್​ಎಸ್​ಎಸ್​, ಬಿಜೆಪಿಗರ ಕೊಲೆಗಳು ನಡೆಯುತ್ತಿದ್ದವು. ಈಗ ನಾವು ದೇಶದಲ್ಲಿ ಬೆಳೆದಿದ್ದೇವೆ. ಯಾರಿಗಾದರೂ ತಾಕತ್​​ ಇದ್ರೆ ನಮ್ಮ ಮೈ ಮುಟ್ಟಲಿ ನೋಡೋಣ ಎಂದು ಸವಾಲ್​​ ಎಸೆದರು.

ಸೇನೆ ಸಂಪೂರ್ಣ ಅಧಿಕಾರ ನೀಡಿದ್ದೆ ಮೋದಿ

ಈ ಹಿಂದೆ ಸೇನೆಗೆ ಅಧಿಕಾರ ಇರಲಿಲ್ಲ. ಮೋದಿ ಬಂದ ಬಳಿಕ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ನೀವೇ ನಿರ್ಧಾರ ಮಾಡಿ ಒಂದಕ್ಕೆ ಹತ್ತು ತೆಗೆಯಿರಿ ಎಂದು ಸಂಪೂರ್ಣ ಸ್ವತಂತ್ರ ಕೊಟ್ಟಿದ್ದಾರೆ ಎಂದು ತಿಳಿಸಿದರು.

Source: newsfirstlive.com Source link