ಗೆಳೆಯ… ಹಾಡು ಪ್ಲೇ – ಸುದೀಪ್ ಜೊತೆ ಬೇಸರ ತೋಡಿಕೊಂಡ ದಿವ್ಯಾ

ಬಿಗ್‍ಬಾಸ್ ಕನ್ನಡ ಸೀಸನ್ 8ರ ಫಿನಾಲೆಯ ಸ್ಟೇಜ್ ಹತ್ತುವ ನಿರೀಕ್ಷೆಯಲ್ಲಿದ್ದ ದಿವ್ಯಾ ಉರುಡುಗ ಅವರಿಗೆ ಕೊನೆಯ ಎಪಿಸೋಡ್‍ನಲ್ಲಿ ಬೆಳಗ್ಗೆ ಒಂದು ವಿಚಾರವಾಗಿ ಬೇಸರವಾಗಿದೆ. ಈ ಕುರಿತಾಗಿ ದಿವ್ಯಾ ಅವರು ಸುದೀಪ್ ಅವರ ಬಳಿ ಹೇಳಿಕೊಂಡಿದ್ದಾರೆ.

ಬಿಗ್‍ಬಾಸ್ ಶೋನ ಕೊನೆಯ ದಿನ ಬೆಳಗ್ಗೆ ಜೂನಿಯರ್ ಎನ್‍ಟಿಆರ್ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಪುನೀತ್ ರಾಜ್‍ಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾದ ಹಾಡು ಕೇಳಿ ದಿವ್ಯಾ ಉರುಡುಗ ಸ್ವಲ್ಪ ಬೇಸರಗೊಂಡರಂತೆ. ಈ ವಿಷಯವನ್ನು ಕಿಚ್ಚ ಸುದೀಪ್ ಬಳಿ ದಿವ್ಯಾ ಅವರೇ ಹೇಳಿಕೊಂಡಿದ್ದಾರೆ. ಗೆಳೆಯ ಗೆಳೆಯಾ ಗೆಲುವು ನಮದಯ್ಯ ಎಂಬ ಹಾಡು ಕೇಳಿ ಈ ಬಾರಿ ಮಂಜು ಮತ್ತು ಅರವಿಂದ್ ಅವರೇ ಫಿನಾಲೆ ಸ್ಟೇಜ್ ಹತ್ತುವುದು ಖಚಿತವೇನೋ ಎಂದು ದಿವ್ಯಾ ಲೆಕ್ಕಾಚಾರ ಹಾಕಿದರಂತೆ. ಈ ಕುರಿತಾಗಿ ಸುದೀಪ್ ಅವರ ಬಳಿ ಹೇಳಿಕೊಂಡಿದ್ದಾರೆ.

ನೀವು ಬೇರೆ ಯಾವ ಹಾಡು ಹಾಕಿದ್ದರೂ ನನಗೆ ಬೇಜಾರಾಗುತ್ತಿರಲಿಲ್ಲ ಆದರೆ ಗೆಳೆಯ ಗೆಳೆಯ ಅಂತ ಅವರಿಬ್ಬರಿಗೆ ಹೊಂದುವ ಹಾಡು ಹಾಕಿದಾಗ ಹಾಗಾದರೆ ನಾನು ಈ ರೇಸ್‍ನಲ್ಲೇ ಇಲ್ವಾ? ಎಂದು ನನಗೆ ಆತಂಕವಾಯ್ತು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಅದಕ್ಕೆ ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್, ನಾವು ಹಾಕೋ ಎಲ್ಲ ಹಾಡಿಗೂ ಅರ್ಥ ಹುಡುಕಬೇಡಿ. ನೀವು ಅದೇ ಯೋಚನೆಯಲ್ಲಿ ಇರುವುದರಿಂದ ಹಾಗೆ ಅನಿಸಿರುತ್ತದೆ ಎಂದು ಹೇಳಿ ಸಮಾಧಾನ ಮಾಡಿದ್ದಾರೆ.

ಬಿಗ್‍ಬಾಸ್ ಕನ್ನಡ 8ನೇ ಸೀಸನ್‍ನ ವಿನ್ನರ್ ಯಾರೆಂಬುದು ಬಹಿರಂಗವಾಗಲು ಕೆಲವೇ ಕ್ಷಣಗಳು ಉಳಿದಿವೆ. ಮಂಜು ಪಾವಗಡ ಮತ್ತು ಅರವಿಂದ್ ಕೆ.ಪಿ. ಇಬ್ಬರೂ ನಟ ಕಿಚ್ಚ ಸುದೀಪ್ ಎಡ-ಬಲದಲ್ಲಿ ನಿಲ್ಲಬಹುದು ಎನ್ನುವುದು ಬಿಗ್ ಬಾಸ್ ವೀಕ್ಷಕರ ಲೆಕ್ಕಾಚಾರ. ಇವರಿಬ್ಬರಲ್ಲಿ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆ ದಿವ್ಯಾ ಉರುಡುಗ ಕೂಡ ಭಾರೀ ಪೈಪೆÇೀಟಿ ನೀಡುತ್ತಿರುವುದರಿಂದ ಟಾಪ್ 2ರಲ್ಲಿ ದಿವ್ಯಾ ಉರುಡುಗ ಕೂಡ ಇರಬಹುದು ಎಂದೂ ಹೇಳಲಾಗುತ್ತಿದೆ.

blank

ದಿವ್ಯಾ ಕೂಡ ತಾವು ಫಿನಾಲೆಯ ಸ್ಟೇಜ್ ಏರುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಬಿಗ್‍ಬಾಸ್ 8ನೇ ಸೀಸನ್‍ನ ಕೊನೆಯ ಎಪಿಸೋಡ್‍ನಲ್ಲಿ ಬೆಳಗ್ಗೆ ಹಾಕಲಾದ ಆ ಒಂದು ಹಾಡಿನಿಂದ ದಿವ್ಯಾ ಉರುಡುಗ ಅವರಿಗೆ ಆತಂಕ ಹೆಚ್ಚಾಗಿದೆ.

Source: publictv.in Source link