ಹಫ್ತಾ ವಸೂಲಿಗೆಂದು ಬಂದವನು ನಡುರೋಡಲ್ಲೇ ಕೊಲೆಯಾದ.. ರೌಡಿಶೀಟರ್ ಹತ್ಯೆಗೆ ಬೆಚ್ಚಿಬಿದ್ದ ನಗರ

ಹಫ್ತಾ ವಸೂಲಿಗೆಂದು ಬಂದವನು ನಡುರೋಡಲ್ಲೇ ಕೊಲೆಯಾದ.. ರೌಡಿಶೀಟರ್ ಹತ್ಯೆಗೆ ಬೆಚ್ಚಿಬಿದ್ದ ನಗರ

ಹಾವೇರಿ: ನಡು ರೋಡಲ್ಲೇ ರೌಡಿಶೀಟರ್ ಓರ್ವನನ್ನ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ನಡೆದಿದೆ. ಅನ್ವರ್ ಶೇಕ್ ಅಲಿಯಾಸ್ ಹಜರತ್ ಅಲಿ, ಅಲಿಯಾಸ್ ಟೈಗರ್ ರಪೀಕ್, ಮೂಮಿನ್ 40 ಮೃತ ರೌಡಿಶೀಟರ್.. ಮೃತನ ಮೂಲ ನಿವಾಸ ಗೋವಾ ಎನ್ನಲಾಗಿದೆ.

ಇಮ್ರಾನ್ 28 ಕೊಲೆ ಮಾಡಿದ ವ್ಯಕ್ತಿ ಎಂದು ಹೇಳಲಾಗಿದೆ. ಹಫ್ತಾ ವಸೂಲಿಗಾಗಿ ಅನ್ವರ್​ಶೇಕ್ ಬಂದಿದ್ದ.. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ನಡೆದ ಒಂದು ಗಂಟೆಯಲ್ಲೇ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಪೊಲೀಸರ ಮುಮದೆ ಆರೋಪಿ ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ಹಣ ಕೇಳುವ ಸಂಬಂಧ ಈ ಮೊದಲೇ ಇವರಿಬ್ಬರ ಮದ್ಯೆ ನಡೆದಿತ್ತು ಜಗಳ.. ಇಂದು ಕೂಡಾ ಹಣ ಕೇಳಲು ಬಂದು ರಸ್ತೆಯ ಮಧ್ಯೆ ಅನ್ವರ್ ಶೇಕ್ ಅವಾಜ್ ಹಾಕಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link