ಎಂಟಿಬಿ ಸಮಾಧಾನವಾಗಿದ್ದಾರೆ, ಆನಂದ್ ಸಿಂಗ್ ಬಗ್ಗೆ ಗೊತ್ತಿಲ್ಲ: ಈಶ್ವರಪ್ಪ

ದಾವಣಗೆರೆ: ಎಂಟಿಬಿ ಸಮಾಧಾನವಾಗಿದ್ದಾರೆ, ಆನಂದ್ ಸಿಂಗ್ ಬಗ್ಗೆ ಗೊತ್ತಿಲ್ಲ  ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಕಾಗಿನೆಲೆ ಮಠದಲ್ಲಿ ನಿರಂಜನಾನಂದಪುರಿ ಸ್ವಾಮಿಜಿ ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ನನಗೆ ಇಂಥದೇ ಖಾತೆ ಬೇಕೆಂದು ನಾನು ಕೇಳಿರಲಿಲ್ಲ. ಮೊದಲಿದ್ದ ಖಾತೆ ದೊರೆತಿರುವುದು ತೃಪ್ತಿ ಇದೆ. ಕಾಗಿನೆಲೆ ಶ್ರೀ ಆಶೀರ್ವಾದದಿಂದ ಸಚಿವ ಸ್ಥಾನ ಸಿಕ್ಕಿದೆ, ಈ ಹಿನ್ನೆಲೆ ರಾಜ್ಯದ ಎಲ್ಲ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಎಂದರು. ಇದನ್ನೂ ಓದಿ: ಗೆಳೆಯ… ಹಾಡು ಪ್ಲೇ – ಸುದೀಪ್ ಜೊತೆ ಬೇಸರ ತೋಡಿಕೊಂಡ ದಿವ್ಯಾ

ಖಾತೆ ಅಸಮಧಾನ ಇದ್ದಿದ್ದು ನಿಜ, ಈಗಿರುವ ಖಾತೆ ಸಮಾಧಾನ ತಂದಿದೆ ಎಂದು ಎಂಟಿಬಿ ಹೇಳಿದ್ದು, ಸಿಎಂ ಅವರು ಕರೆದು ಸಮಾಧಾನ ಮಾಡಿದ್ದಾರೆ. ಆನಂದ್ ಸಿಂಗ್ ಅವರ ಬಗ್ಗೆ ನನಗೆ ಗೊತ್ತಿಲ್ಲ, ಎಲ್ಲ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಎಂದರು. ಕೆಎಸ್ ಈಶ್ವರಪ್ಪ ಪಂಚಮಸಾಲಿ ಸ್ವಾಮಿಜಿ ಭೇಟಿ ಮಾಡಿದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿಯ ಬಳಿ ಇರುವ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಈಗಾಗಲೇ ಮಾದಾರ ಚೆನ್ನಯ್ಯ ಶ್ರೀ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಭೇಟಿ ಬಳಿಕ ವಚನಾನಂದ ಸ್ವಾಮಿಜಿ ಭೇಟಿ ಮಾಡಿ ಆಶಿರ್ವಾದ ಪಡೆದಿದ್ದಾರೆ.

Source: publictv.in Source link