‘ 2015ರ ಸರಣಿ ಪಂದ್ಯದಲ್ಲಿ ಆಡುವ ಅವಕಾಶ ಕಿತ್ತುಕೊಂಡ್ರಂತೆ ಎಬಿಡಿ: ಖಾಯಾ ಜೊಂಡೊ ಹೀಗಂದಿದ್ದೇಕೆ..?

‘ 2015ರ ಸರಣಿ ಪಂದ್ಯದಲ್ಲಿ ಆಡುವ ಅವಕಾಶ ಕಿತ್ತುಕೊಂಡ್ರಂತೆ ಎಬಿಡಿ: ಖಾಯಾ ಜೊಂಡೊ ಹೀಗಂದಿದ್ದೇಕೆ..?

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಖಾಯಾ ಜೊಂಡೊ ತನಗೆ ಯಾಕೆ ಸಹ ಆಟಗಾರ ಎಬಿ ಡಿವಿಲಿಯರ್ಸ್ ಮೇಲಿನ ಗೌರವ ಕಡಿಮೆಯಾಯ್ತು ಎಂಬ ಬಗ್ಗೆ ಮಾತನಾಡಿದ್ದಾರೆ.

ಡಿವಿಲಿಯರ್ಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ, 2015ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸಕ್ಕೆ ನಾನು ಕೂಡ ಆಯ್ಕೆಯಾಗಿದ್ದೆ. ಭಾರತ ವಿರುದ್ಧದ ಸರಣಿಯ 3ನೇ ಏಕದಿನ ಪಂದ್ಯಕ್ಕೂ ಮುನ್ನ ಜೆಪಿ ಡುಮಿನಿ ಗಾಯಕ್ಕೊಳಗಾದರು. ಹೀಗಾಗಿ ಜೆಪಿ ಡುಮಿನಿ ಜಾಗಕ್ಕೆ ನನ್ನನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಅವಕಾಶ ನೀಡದೆ ತಂಡದಿಂದ ಹೊರಗಿಟ್ಟಿದ್ರು ಎಂದು ಹೇಳಿಕೊಂಡಿದ್ದಾರೆ. ಅಂದು ಎಬಿಡಿ ನಡೆದುಕೊಂಡ ರೀತಿಯಿಂದ ತುಂಬಾ ಬೇಸರಕ್ಕೊಳಗಾದೆ. ನನ್ನ ಹೀರೋ ಎಂದು ಆರಾಧಿಸುತ್ತಾ ಬೆಳೆದು ಬಂದವನು ನಾನು.. ಅಂದು ವಿಲಿಯರ್ಸ್ ತೆಗೆದುಕೊಂಡ ನಿರ್ಧಾರ ಅವರ ಮೇಲಿದ್ದ ಗೌರವವನ್ನ ಕಡಿಮೆಯಾಯ್ತು ಎಂದು ಖಾಯಾ ಜೊಂಡೊ ಹೇಳಿದ್ದಾರೆ.

Source: newsfirstlive.com Source link