‘ಮಿಸ್ಟರ್​​ ಮೋದಿ.. ಬನ್ನಿ, ನಮ್ಮ ಮಾತು ಕೇಳಿ’; ವಿಪಕ್ಷಗಳಿಂದ 3 ನಿಮಿಷದ ವಿಡಿಯೋ ಬಿಡುಗಡೆ

‘ಮಿಸ್ಟರ್​​ ಮೋದಿ.. ಬನ್ನಿ, ನಮ್ಮ ಮಾತು ಕೇಳಿ’; ವಿಪಕ್ಷಗಳಿಂದ 3 ನಿಮಿಷದ ವಿಡಿಯೋ ಬಿಡುಗಡೆ

26 ದಿನಗಳ ಸುದೀರ್ಘ ಸಸಂತ್​​​ ಮುಂಗಾರು ಅಧಿವೇಶನ ಆಗಸ್ಟ್ 13ನೇ ತಾರೀಕಿನಂದು ಕೊನೆಗೊಳ್ಳಲಿದೆ. ಇನ್ನೇನು ಒಂದು ವಾರದಲ್ಲಿ ಸಂಸತ್​​ ಕಲಾಪಗಳು ಮುಗಿಯಬೇಕು ಎನ್ನುವ ಹೊತ್ತಲ್ಲೀಗ ವಿರೋಧ ಪಕ್ಷಗಳ ನಾಯಕರು ವಿಡಿಯೋವೊಂದು ಬಿಡುಗಡೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಈ ವಿಡಿಯೋ ಟ್ವೀಟ್​​ ಮಾಡಿದ್ದು, ಮಿಸ್ಟರ್‌ ಮೋದಿ ನಾವು ಹೇಳೋದು ಕೇಳಿ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ನಾವು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ವಿಪಕ್ಷಗಳು ವಿಡಿಯೋದಲ್ಲಿ ಆರೋಪಿಸಿವೆ. ಸುಮಾರು ದೇಶದ ವಿವಿಧ ಹತ್ತಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಮಾತಾಡಿದ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಪ್ರಧಾನಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ -ಕೆ.ಎಸ್​ ಈಶ್ವರಪ್ಪ

ಇಂದಿಗೆ ಸಂಸತ್​​ ಕಲಾಪ ಶುರುವಾಗಿ 14 ದಿನ. ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ನಮ್ಮ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ. ಚರ್ಚೆ ಮಾಡದೆಯೇ ನೀವು ಮಸೂದೆ ಅಂಗೀಕರಿಸುತ್ತಿದ್ದೀರಿ. ನಿಮಗೆ ಧೈರ್ಯ ಇದ್ದರೆ ಪೆಗಸಸ್​​ ಕುರಿತು ಚರ್ಚೆ ಮಾಡಿ ಎಂದು ವಿಡಿಯೋದಲ್ಲಿ ಪ್ರಧಾನಿ ಮೋದಿಗೆ ಸವಾಲ್​​ ಹಾಕಲಾಗಿದೆ.

Source: newsfirstlive.com Source link