ಪೋಷಕರೇ ಎಚ್ಚರ.. ಬೆಂಗಳೂರಿನ ಈ ಏರಿಯಾದಲ್ಲಿ ನಡೀತಿದೆ ಸಿಗರೇಟ್ ದಂಧೆ

ಪೋಷಕರೇ ಎಚ್ಚರ.. ಬೆಂಗಳೂರಿನ ಈ ಏರಿಯಾದಲ್ಲಿ ನಡೀತಿದೆ ಸಿಗರೇಟ್ ದಂಧೆ

ಇದು ಪುಟ್ಟ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವಂಥಾ ಕಥೆ.. ಹೆತ್ತವರೇ ನೀವು ಸ್ವಲ್ಪ ಎಚ್ಚರ ತಪ್ಪಿದ್ರೂ ನಿಮ್ಮ ಮಕ್ಕಳು ನಿಮ್ಮ ಕೈ ತಪ್ಪೋಗ್ತಾರೆ ಹುಷಾರ್​.. ಮನೆಯಲ್ಲಿ ಅಪ್ರಾಪ್ತ ಮಕ್ಕಳಿರೋ ಪೋಷಕರು ಈ ಸ್ಟೋರಿಯನ್ನ ಓದಲೇಬೇಕು.

ಕುರುಬರಹಳ್ಳಿಯಲ್ಲಿರೋ ಹೈದರಾಬಾದ್​ ಇರಾನಿ ಅಂಗಡಿಯಲ್ಲಿ ಸಿಗರೇಟ್​ ದಂಧೆ ನಡೆಯುತ್ತಿದೆ. ಅಪ್ರಾಪ್ತರಿಗೆ ಸಿಗರೇಟ್​ ಮಾರುವ ದಂಧೆ ಅಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. COPTA, ಸಿಗರೇಟ್ಸ್ ಮತ್ತು ಇತರೆ ತಂಬಾಕು ಪದಾರ್ಥ ಕಾಯ್ದೆ, ಈ ಕಾಯ್ದೆ ಜಾರಿ ಇದ್ರೂ ದಂಧೆ ನಡೆಸುವವರ ಡೋಂಟ್ ಕೇರ್ ಅಂತಿದ್ದಾರೆ. ಈ ಕಾಯ್ದೆಯಡಿ ಌಶ್ ಟ್ರೇ, ಲೈಟರ್, ಬೆಂಕಿಪೊಟ್ಟಣ ಕೊಡುವಂತಿಲ್ಲ. ಅಷ್ಟೇ ಯಾಕೆ ಅಪ್ರಾಪ್ತ ಮಕ್ಕಳಿಗೆ ಈ ವಸ್ತುಗಳನ್ನ ಮಾರಾಟ ಮಾಡುವಂತಿಯೂ ಇಲ್ಲ. ವಾಸ ಯೋಗ್ಯ ಸ್ಥಗಳಲ್ಲಿ ಸಿಗರೇಟ್ ವ್ಯಾಪಾರ ಮಾಡುವ ಹಾಗೂ ಇಲ್ವಂತೆ. ಆದ್ರೆ ವಾಸ ಯೋಗ್ಯ ಸ್ಥಳದಲ್ಲೇ ಅಪ್ರಾಪ್ತರಿಗೆ ಸಿಗರೇಟ್​ ಮಾರುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಕುರುಬರಹಳ್ಳಿಯ ಈ ಅಂಗಡಿಯಲ್ಲಿ ಸಿಗರೇಟ್ ಸೇದೋಕೆ ಅಂತಾಲೇ ಪ್ರತ್ಯೇಕ ಕೊಠಡಿ ಇದೆ. ಅಪ್ರಾಪ್ತರಿಗೆ ಸೇಲ್ ಆಗುವ ಸಿಗರೇಟ್​ಗೆ ಲೆಕ್ಕವೇ ಇಲ್ಲ.

ಈಗಾಗಲೇ ಆ ವಾರ್ಡ್​ನ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಆದ್ರೆ ಇಲ್ಲಿ ಕ್ರಮ ಜರುಗಿಸಬೇಕಾದ್ದು ಆ ಬಿಲ್ಡಿಂಗ್​ನ ಓನರ್ ಮತ್ತು ಅಂಗಡಿಯ ಮಾಲೀಕನ ವಿರುದ್ಧ. ಒಟ್ನಲ್ಲಿ ಪೋಷಕರು ಮಕ್ಕಳ ಬಗ್ಗೆ ಎಷ್ಟೇ ಎಚ್ಚರವಹಿಸಿದ್ರೂ ಸಾಲದು.. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ..ಎಚ್ಚರ ಎಚ್ಚರ..

Source: newsfirstlive.com Source link