ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಬಹುಮಾನಗಳ ಮಹಾಪೂರ; ಏನೆಲ್ಲಾ ಒಲಿದು ಬಂತು..?

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಬಹುಮಾನಗಳ ಮಹಾಪೂರ; ಏನೆಲ್ಲಾ ಒಲಿದು ಬಂತು..?

ನವದೆಹಲಿ: ಈ ಬಾರಿ ಪದಕಗಳ ಕಿರೀಟವನ್ನು ಭಾರತಾಂಬೆಗೆ ತೊಡಿಸಿರುವ ಒಲಿಂಪಿಕ್ಸ್​​​​​​​ ಆಟಗಾರರಿಗೆ ಬಹುಮಾನಗಳ ಮಹಾಪೂರವೇ ಹರಿದುಬಂದಿದೆ. ಅದ್ರಲ್ಲೂ ಜಾವೆಲಿನ್ ಎಸೆತದಲ್ಲಿ ಸ್ವರ್ಣಕ್ಕೆ ಮುತ್ತಿಟ್ಟಿರುವ ನೀರಜ್ ಚೋಪ್ರಾಗೆ ಅತೀ ಹೆಚ್ಚು ಬಹುಮಾನಗಳು ಘೋಷಣೆಯಾಗಿವೆ.

ನೀರಜ್​​​ಗೆ ಬಹುಮಾನಗಳ ಮಹಾಪೂರ

  1. ₹ 1 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ ಕಾರ್ಯದರ್ಶಿ ಜೈ ಶಾ
  2. ₹ 1 ಕೋಟಿ ಬಹುಮಾನ ಘೋಷಿಸಿದ ಚೆನೈ ಸೂಪರ್ ಕಿಂಗ್ಸ್​​ ಫ್ರಾಂಚೈಸಿ
  3. ₹ 6 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ರಾಜ್ಯ ಸರ್ಕಾರ
  4. ₹ 2 ಕೋಟಿ ಬಹುಮಾನ ಘೋಷಿಸಿದ ಪಂಜಾಬ್ ಮುಖ್ಯಮಂತ್ರಿ
  5. ತಲಾ ₹1 ಕೋಟಿ ಘೋಷಿಸಿದ ಒಡಿಸ್ಸಾ, ಮಣಿಪುರ ಸರ್ಕಾರಗಳು
  6. 1 ವರ್ಷದ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋ ಏರ್​​ಲೈನ್ಸ್​​​
  7. ಎಕ್ಸ್​​​ಯುವಿ 700 ಕಾರು ಉಡುಗೊರೆ ಘೋಷಿಸಿದ ಆನಂದ್ ಮಹಿಂದ್ರಾ
  8. ಜೀವಿತಾವಧಿವರೆಗೆ ಗೋಲ್ಡನ್ ಪಾಸ್ ನೀಡಿದ ಕೆ.ಎಸ್​​.ಆರ್​.ಟಿ.ಸಿ
  9. ₹25 ಲಕ್ಷ ಬಹುಮಾನ ಘೋಷಿಸಿದ ಎಲಾನ್ ಗ್ರೂಪ್ಸ್​​ ಮುಖ್ಯಸ್ಥ ರಾಕೇಶ್​​​

ಹೀಗೆ ನೀರಜ್ ಚೋಪ್ರಾಗೆ ಕೋಟಿ ಕೋಟಿ ನಗದು ಬಹುಮಾನಗಳ ಜೊತೆಗೆ ವಿಶೇಷ ಬಹುಮಾನಗಳ ಘೋಷಣೆ ಆಗಿದೆ. ಈ ಮೂಲಕ ಭಾರತದ ಚಿನ್ನದ ಹುಡುಗ ನೀರಜ್ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿದೆ.

ಒಟ್ನಲ್ಲಿ ಹಾಕಿ, ಅಥ್ಲೆಟಿಕ್ಸ್​​ನಲ್ಲಿ ಕನಸಾಗಿದ್ದ ಪದಕಗಳು ಈ ಬಾರಿ ಭಾರತದ ಪಾಲಾಗಿದ್ದು, ಭಾರತ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಇಮದು ಟೋಕಿಯೋ ಒಲಿಂಪಿಕ್ಸ್​​ ವರ್ಣರಂಜಿತ ತೆರೆ ಕಂಡಿದೆ. 2024ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಒಲಿಂಪಿಕ್ಸ್​​​​ನಲ್ಲೂ ಭಾರತ ಮತ್ತಷ್ಟೂ ಪದಕ ಗೆಲ್ಲುವ ನಿರೀಕ್ಷೆಗೆ ಈ ಬಾರಿಯ ಭಾರತೀಯ ಆಟಗಾರರ ಸಾಧನೆ ಸಾಕ್ಷಿಯಾಗಿದೆ.

Source: newsfirstlive.com Source link