ಮೊದಲ ಟೆಸ್ಟ್​ ಪಂದ್ಯ: ಭಾರತದ ಗೆಲುವಿಗೆ ಅಡ್ಡಿಪಡಿಸಿದ ಮಳೆರಾಯ

ಮೊದಲ ಟೆಸ್ಟ್​ ಪಂದ್ಯ: ಭಾರತದ ಗೆಲುವಿಗೆ ಅಡ್ಡಿಪಡಿಸಿದ ಮಳೆರಾಯ

ನಾಟಿಂಗ್ ಹ್ಯಾಮ್​ನಲ್ಲಿ ನಡೆದ ಟೀಮ್​ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ಅಂತಿಮ ದಿನದ ಆರಂಭದಿಂದಲೂ ಬಿಟ್ಟೂಬಿಡದೆ ಕಾಡಿದ ಮಳೆರಾಯನಿಂದ ಯಾವುದೇ ಫಲಿತಾಂಶವಿಲ್ಲದೆ ಪಂದ್ಯ ಕೊನೆಗೊಂಡಿದೆ.

ಪಂದ್ಯದ ಕೊನೆಯ ದಿನವಾದ ಇಂದು ಭಾರತ ತಂಡದ ಗೆಲುವಿಗೆ, 157ರನ್​ಗಳ ಅಗತ್ಯವಿತ್ತು. ಆದರೆ ವರುಣ ಕಾಡಿದ ಪರಿಣಾಮ ಡ್ರಾಗೆ ಸುಖಾಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ 183 ರನ್​ಗಳಿಸಿದ್ರೆ, ಟೀಮ್​ ಇಂಡಿಯಾ ಆಡಿದ ಪ್ರಥಮ ಇನ್ನಿಂಗ್ಸ್​​ನಲ್ಲಿ ಭಾರತ 95ರನ್​ಗಳ ಮುನ್ನಡೆ ಪಡೆದಿತ್ತು. ಬಳಿಕ 2ನೇ ಇನ್ನಿಂಗ್ಸ್​​​ನಲ್ಲಿ 303ರನ್​ ಕಲೆ ಹಾಕಿದ ಇಂಗ್ಲೆಂಡ್, ಭಾರತದ ಗೆಲುವಿಗೆ 208ರನ್​ ಗುರಿ ನೀಡ್ತು. ಆದರೆ ಭಾರತ, ನಾಲ್ಕನೇ ದಿನದಾಟದ ಅಂತ್ಯಕ್ಕೆ 57ರನ್​ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಅಂತಿಮ ದಿನಕ್ಕೆ 157ರನ್​ಗಳ ಅವಶ್ಯಕತೆ ಇತ್ತು. ಆದರೆ ಭಾರತದ ಗೆಲುವಿಗೆ ಮಳೆ ಅಡ್ಡಿಪಡಿಸಿತು. ಇನ್ನು ಆಗಸ್ಟ್ 12 ರಿಂದ ಲಾರ್ಡ್ಸ್‌ನಲ್ಲಿ ಎರಡನೇ ಟೆಸ್ಟ್‌ ಆರಂಭವಾಗಲಿದೆ.

Source: newsfirstlive.com Source link