#BIGBREAKING ಮಂಜು ಪಾವಗಡ ಬಿಗ್​ಬಾಸ್​ ಸೀಸನ್​-8ರ ವಿನ್ನರ್.. ಅರವಿಂದ್ ರನ್ನರ್ ಅಪ್

#BIGBREAKING ಮಂಜು ಪಾವಗಡ ಬಿಗ್​ಬಾಸ್​ ಸೀಸನ್​-8ರ ವಿನ್ನರ್.. ಅರವಿಂದ್ ರನ್ನರ್ ಅಪ್

ಬಿಗ್​ಬಾಸ್ ಸೀಸನ್ 8 ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ, ಇನ್ನು ರೈಡರ್ ಅರವಿಂದ್ ರನ್ನರ್ ಅಪ್ ಆಗಿದ್ದಾರೆ. ಸೀಸನ್ 8 ಫೈನಲ್​ನಲ್ಲಿ ಅರವಿಂದ್, ಮಂಜು ಪಾವಗಡ ಹಾಗೂ ದಿವ್ಯಾ ಉರುಡುಗ ಫೈನಲ್ 3 ಕಂಟೆಸ್ಟೆಂಟ್​ಗಳಾಗಿ ಉಳಿದುಕೊಂಡಿದ್ದರು. ಈ ಮೂವರಲ್ಲಿ ಮಂಜು ಮತ್ತು ಅರವಿಂದ್ ನಡುವೆ ಭಾರೀ ಪೈಪೋಟಿ ಎದುರಾಗಿತ್ತು.

ಸೋಷಿಯಲ್ ಮೀಡಿಯಾಗಳಲ್ಲಿ ಮಂಜು ಹಾಗೂ ಅರವಿಂದ್ ಇಬ್ಬರಲ್ಲಿ ಒಬ್ಬರು ಗೆಲುವು ಸಾಧಿಸಲಿದ್ದಾರೆ ಎನ್ನುವ ಲೆಕ್ಕಾಚಾರಗಳು ನಡೆದಿದ್ದವು. ಲೆಕ್ಕಾಚಾರದಂತೆಯೇ ಇದೀಗ ಮಂಜು ಪಾವಗಡ ಸೀಸನ್ 8 ರ ವಿನ್ನರ್ ಆಗಿದ್ದಾರೆ, ಅರವಿಂದ್ ರನ್ನರ್ ಅಪ್ ಆಗಿದ್ದಾರೆ.

ಮಂಜು ಪಾವಗಡ ಹಾಸ್ಯ ನಟನಾಗಿದ್ದು ಬಿಗ್​ಬಾಸ್ ಮನೆಯಲ್ಲೂ ಸದಾ ಎಲ್ಲರನ್ನೂ ನಗಿಸುತ್ತಾ ಬಿಗ್​ಬಾಸ್​ ಮನೆಯನ್ನು ಕಳೆಗಟ್ಟಿಸಿದ್ದರು. ಅಲ್ಲದೇ ಉತ್ತಮ ಎಂಟರ್​ಟೈನರ್ ಎನ್ನಿಸಿಕೊಂಡಿದ್ದರು. ಹೀಗಾಗಿ ಅವರೇ ಗೆಲ್ಲಬಹುದೆಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇನ್ನು ಮಂಜುಗೆ ಅರವಿಂದ್ ಟಫ್ ಫೈಟ್ ಕೊಟ್ಟಿದ್ದರು.

blank

ಲಾಕ್​ಡೌನ್ ಹಿನ್ನೆಲೆ ಬಿಗ್​ಬಾಸ್ ಅರ್ಧಕ್ಕೇ ನಿಂತು ಹೋಗಿತ್ತು. ನಂತರ ಲಾಕ್​ಡೌನ್ ಸಡಿಲಿಸದ ಮೇಲೆ ಬಿಗ್​ಬಾಸ್ ಸೀಸನ್ 8 ರ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗಿತ್ತು. ಸೀಸನ್ 8 ರ ಕಂಟೆಸ್ಟೆಂಟ್​ಗಳು ಗೆಲುವಿಗಾಗಿ ಭಾರೀ ಹೋರಾಟ ನಡೆಸಿದ್ದರು.

Source: newsfirstlive.com Source link