ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ

ಟಾಸ್ಕ್ ವಿಚಾರದಲ್ಲಿ ನಂಬರ್ ಒನ್, ಯಾವ ಸಮಯದಲ್ಲಿ ಎಷ್ಟು ಬೇಕೋ ಅಷ್ಟೇ ಮಾತು, ತಪ್ಪು ಮಾಡಿದರೂ ಕ್ಷಮೆ ಕೇಳಿ ಆ ತಪ್ಪನ್ನು ತಿದ್ದಿಕೊಳ್ಳುವ ಗುಣ ಹೊಂದಿದ್ದ ಅರವಿಂದ್ ಬಿಗ್‍ಬಾಸ್ 8ನೇ ಅವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಬಿಗ್‍ಬಾಸ್ ವೇದಿಕೆಗೆ ಮನರಂಜನಾ ಕ್ಷೇತ್ರದಿಂದ ಬಂದವರು ಮಾತ್ರ ಕ್ಲಿಕ್ ಆಗುತ್ತಾರೆ. ಉಳಿದ ಕ್ಷೇತ್ರದಿಂದ ಬಂದರೆ ಹೇಳ ಹೆಸರಿಲ್ಲದಂತೆ ಹೋಗುತ್ತಾರೆ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಬೈಕರ್ ಅರವಿಂದ್ ಕೆ.ಪಿ. ಈ ಮಾತನ್ನು ಸುಳ್ಳು ಮಾಡಿದ್ದಾರೆ. ಉತ್ತಮ ಆಟ, ಆಟದ ಜೊತೆ ಉತ್ತವ ವ್ಯಕ್ತಿತ್ವ ಬೆಳೆಸಿಕೊಂಡರೆ ವೀಕ್ಷಕರು ಫಿನಾಲೆಯವರೆಗೂ ಕರೆದುಕೊಂಡು ಬರುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 43,35,957 ಮತಗಳನ್ನು ಪಡೆದುಕೊಂಡು ಮನೆಯಿಂದ  ಆಚೆ ಬಂದಿದ್ದಾರೆ. ಇದನ್ನೂ ಓದಿ : ಕೈಗೆ ಗಾಯವಾಗಿದ್ದರೂ ಅತ್ಯುತ್ತಮ ಆಟ – ಡಿಯುಗೆ ಸಿಕ್ತು 3ನೇ ಸ್ಥಾನ

ಬಿಗ್‍ಬಾಸ್ ಟಾಪ್‍ನಲ್ಲಿ 5 ಸ್ಪರ್ಧಿಗಳಿದ್ದರು. ವೈಷ್ಣವಿ, ಪ್ರಶಾಂತ್ ಮನೆಯಿಂದ ಆಚೆ ಬಂದ ಮೇಲೆ ಮನೆಯಲ್ಲಿ ಅರವಿಂದ್, ದಿವ್ಯಾ ಉರುಡುಗ, ಮಂಜು ಪಾವಗಡ ಉಳಿದಿದ್ದರು. ಮಂಜು ವಿನ್ನರ್ ಆದರೆ, ಅರವಿಂದ್ ರನ್ನರ್ ಅಪ್ ಆದರು. ಅರವಿಂದ್‍ಗೆ 11 ಲಕ್ಷ ಜೊತೆಗೆ ಹಿಂದಿನ ವಾರದ ಗೇಮ್‍ನಲ್ಲಿ ಪಡೆದುಕೊಂಡ 2 ಲಕ್ಷ ಹಣವನ್ನು ಸೇರಿ 13 ಲಕ್ಷ ಹಣ ಸಿಕ್ಕಿದೆ.

blank

ಮನಂರಜನೆ ಕ್ಷೇತ್ರದವರೇ ಇರುವ ಕಾರಣ ಮೊದಲೇ ನಾನು ಎಲಿಮಿನೇಟ್ ಆಗುತ್ತೇನೆ ಎಂದು ಭಾವಿಸಿದ್ದ ಅರವಿಂದ್ ನೀಡಿದ ಮನರಂಜನೆ ವೀಕ್ಷಕರಿಗೆ ಇಷ್ಟವಾಗಿತ್ತು. ತಮಗೆ ಸಂಬಂಧ ಇರದ ಕ್ಷೇತ್ರದೊಳಗೆ ಕಾಲಿಟ್ಟು ಕರ್ನಾಟಕ ಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅರವಿಂದ್ ಅವರು ತಮ್ಮ ನೇರ ನುಡಿ, ಆಟ, ದಿವ್ಯಾ ಜೊತೆ ಇರುವ ಸ್ನೇಹದ ಮೂಲಕವಾಗಿ ಎಷ್ಟೋ ಹೆಂಗಳೆಯರಿಗೆ ಇಷ್ಟವಾಗಿದ್ದರು.

blank

ಅರವಿಂದ್ ಮೂಲತಃ ಉಡುಪಿಯವರು. ಅವರು ಬೇರೆಬೇರೆ ರಾಷ್ಟ್ರಗಳಲ್ಲಿ ಬೈಕ್ ಓಡಿಸಿದ್ದಾರೆ. ಅನೇಕ ಕಠಿಣ ಪರಿಸ್ಥಿತಿಗಳನ್ನು ಅವರು ಎದುರಿಸಿ ಬಂದಿದ್ದಾರೆ. ಹೀಗಾಗಿ ಬಿಗ್‍ಬಾಸ್ ಮನೆಯಲ್ಲಿ ಅವರ ಕಾನ್ಫಿಡೆನ್ಸ್ ಮಟ್ಟ ತುಂಬಾನೇ ಹೆಚ್ಚಿತ್ತು. ಅವರು ಏನನ್ನೇ ಹೇಳುವುದಿದ್ದರೂ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು ಮತ್ತು ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಿದ್ದರು. ಅರವಿಂದ್ ಬಿಗ್‍ಬಾಸ್ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವನ್ನು ಬಿಚ್ಚಿಟ್ಟರು. ತಪ್ಪಿದ್ದಾಗ ತಪ್ಪು ಎಂದರು, ಸರಿ ಇದ್ದಾಗ ಸರಿ ಎಂದರು. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಮುನ್ನಡೆದರು. ಎಲ್ಲರ ಜತೆ ಹೊಂದಿಕೊಂಡರು. ಈ ಕಾರಣಕ್ಕೆ ಅರವಿಂದ್ ವೀಕ್ಷಕರಿಗೆ ಇಷ್ಟವಾಗುತ್ತಾ ಹೋದರು. ಕೊನೆಯಲ್ಲಿ ವೈಷ್ಣವಿಯವರು ಅರವಿಂದ್ ಅವರ ಕೆಲಸಗಳನ್ನು ನೋಡಿ ‘ಪರ್ಫೆಕ್ಷನಿಸ್ಟ್’ ಎಂದು ಕರೆದಿದ್ದರು.

blank

ಅರವಿಂದ್ ನೇರವಾಗಿ ಮತನಾಡುತ್ತಾರೆ, ತಾವು ಹೊರಗಡೆ ಹೇಗೆ ಇದ್ದಾರೆ ಹಾಗೆ ಬಿಗ್‍ಬಾಸ್ ಮನೆಯಲ್ಲಿ ಇದ್ದಾರೆ. ಟಾಸ್ಕ್‍ನಲ್ಲಿ ಚುರುಕಾಗಿರುತ್ತಾರೆ ನಿಜ. ಆದರೆ ಮನರಂಜನೆ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದರಿಂದ ಬಿಗ್‍ಬಾಸ್ ಗೆಲುವಿನ ಪಟ್ಟವನ್ನು ಪಡೆಯುವಲ್ಲಿ ಎಡವಿದ್ದಾರೆ.

blank

ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಪ್ರಶಸ್ತಿ ಮುಖ್ಯವೇ ಜನರ ನಂಬಿಕೆ ಮುಖ್ಯವೇ ಎಂದು ಕೇಳಿದ ಪ್ರಶ್ನೆಗೆ ಅರವಿಂದ್ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯೇ ಮುಖ್ಯ ಎಂದು ಹೇಳಿದ್ದರು.

Source: publictv.in Source link