ನಾನೂ ಎರಡು ವರ್ಷ ಖಾಲಿ ಇದ್ದೆ: ಮುನಿರತ್ನ

ತುಮಕೂರು: ಪಕ್ಷಕ್ಕಾಗಿ ಯಾವುದೇ ಕೊಡುಗೆ ಕೊಡದೇ ದೊಡ್ಡ ಹುದ್ದೆ ಕೇಳುವುದು ಸರಿಯಲ್ಲ. ನಾನೂ ಎರಡು ವರ್ಷ ಖಾಲಿ ಇದ್ದೆ ಎಂದು ತೋಟಗಾರಿಕೆ ಇಲಾಖೆ, ಯೋಜನೆ ಕಾರ್ಯಕ್ರಮ ನಿರ್ವಹಣೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಮುನಿರತ್ನ ಹೇಳಿದ್ದಾರೆ.

ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೂ ಎರಡು ವರ್ಷ ಖಾಲಿ ಇದ್ದೆ. ಈಗ ಪಕ್ಷ ನನಗೆ ಗುರುತಿಸಿ ಸಚಿವ ಸ್ಥಾನ ಕೊಟ್ಟಿದೆ. ನನಗೆ ಕೊಟ್ಟಿರುವ ಖಾತೆ ತೃಪ್ತಿ ಕೊಟ್ಟಿದೆ. ಯಾವುದೇ ಖಾತೆ ಬೇಕು ಎಂದು ನಾನು ಕೇಳಿರಲಿಲ್ಲ. ಆದರೆ ಕೆಲವರು ಇಂಥದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಪಕ್ಷಕ್ಕಾಗಿ ಏನೂ ಕೊಡದೇ ದೊಡ್ಡ ಹುದ್ದೆ ಕೇಳುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿದ್ದಾರೆ. ಇದನ್ನೂ ಓದಿ: ಕೈಗೆ ಗಾಯವಾಗಿದ್ದರೂ ಅತ್ಯುತ್ತಮ ಆಟ – ಡಿಯುಗೆ ಸಿಕ್ತು 3ನೇ ಸ್ಥಾನ

ನಾವೆಲ್ಲ ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಬಂದಿದ್ದೇವೆ. ಶಾಸಕ ಆಗಿದ್ದೇನೆ, ನಾವು ಪಕ್ಷದಲ್ಲಿ ಸ್ವಲ್ಪ ದಿನ ಕೆಲಸ ಮಾಡಿ ಬಳಿಕ ಇಂತಹ ಖಾತೆ ಕೊಡಿ ಅಂತ ಕೇಳಬಹುದು. ಅದನ್ನ ಬಿಟ್ಟು ತ್ಯಾಗ ಮಾಡಿ ಈ ಪಕ್ಷಕ್ಕೆ ಬಂದಿದ್ದೇವೆ ಅಂತ ಪದೇ ಪದೇ ಮಾತಾಡೋದು ಸರಿಯಲ್ಲ ಎಂದಿದ್ದಾರೆ.

Source: publictv.in Source link