ಪ್ರವಾಹ; ನೀರಿನಲ್ಲೇ ಶವ ಹೊತ್ತೂಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಪ್ರವಾಹ; ನೀರಿನಲ್ಲೇ ಶವ ಹೊತ್ತೂಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಭೂಪಾಲ್​​: ಮಧ್ಯಪ್ರದೇಶದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ಗುಣ ಜಿಲ್ಲೆಯಲ್ಲಿ ಹತ್ತಾರು ಗ್ರಾಮಗಳು ಜಲಾವೃತಗೊಂಡಿವೆ. ಹೀಗಿರುವಾಗ ಭೀಕರ ಪ್ರವಾಹದಲ್ಲೇ ಶವ ಹೊತ್ತೂಯ್ದು ಅಂತ್ಯ ಸಂಸ್ಕಾರ ಮಾಡಿದ ದುರಂತ ಘಟನೆ ಇಲ್ಲಿನ ಭದೌರಾ ಗ್ರಾಮದಲ್ಲಿ ನಡೆದಿದೆ.

ಹೌದು, ಭಾರೀ ಮಳೆಯಿಂದಾಗಿ ಇಲ್ಲಿನ ಭದೌರಾ ಗ್ರಾಮದ ರಸ್ತೆಯಲ್ಲಿ ಸುಮಾರು 2-3 ಅಡಿಯಷ್ಟು ನೀರು ನಿಂತಿದೆ. ಇದರ ಪರಿಣಾಮ ಗ್ರಾಮದ ಕಮರ್ಲಾಲ್‌ ಶಾಕ್ಯಾವಾರ್‌ ಎಂಬುವರ ಮೃತ ದೇಹವನ್ನು ನೀರು ನಿಂತ ರಸ್ತೆಯಲ್ಲೇ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲಾಯ್ತು.

ಇದನ್ನೂ ಓದಿ: ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ಬಾಲಿವುಡ್​​​ ಸ್ಟಾರ್​​​​​ ನಟ

ಇನ್ನು, ಮೃತ ವ್ಯಕ್ತಿ ಅಂತ್ಯ ಸಂಸ್ಕಾರ ಮಾಡಲು ಇಡೀ ಕುಟುಂಬ ಅರ್ಧ ದಿನ ಕಾದರೂ ಮಳೆ ನಿಲ್ಲಲಿಲ್ಲ. ಕಾರಣ ಗ್ರಾಮದ ರಸ್ತೆ ಮೇಲೆ 3 ಅಡಿಯಷ್ಟು ನೀರು ನಿಂತಿತ್ತು. ಕೊನೆಗೂ ಈಜು ಬರುವವರು ಮಾತ್ರ ನೀರಿನಲ್ಲೇ ಹೊತ್ತೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿದರು.
ಈ ವಿಡಿಯೋ ಮೊಬೈನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

Source: newsfirstlive.com Source link