ಟೀಂ ಇಂಡಿಯಾ ಗೆಲುವಿನ ಕನಸಿಗೆ ತಣ್ಣೀರೆರೆಚಿದ ಮಳೆ.. ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾ

ಟೀಂ ಇಂಡಿಯಾ ಗೆಲುವಿನ ಕನಸಿಗೆ ತಣ್ಣೀರೆರೆಚಿದ ಮಳೆ.. ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾ

ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ. ಕಡೇ ದಿನವಾದ ಭಾನುವಾರ ಮಳೆ ಕಾರಣದಿಂದಾಗಿ ಆಟ ಸಾಧ್ಯವಾಗವಿಲ್ಲ. ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 209ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಭಾರತ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿತ್ತು. ಇನ್ನು 157ರನ್‌ಗಳನ್ನು ಗಳಿಸಿದ್ದರೆ ಭಾರತಕ್ಕೆ ಪಂದ್ಯದಲ್ಲಿ ಜಯ ಸಿಗುತ್ತಿತ್ತಾದರೂ ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಗಿ ಕೊನೆಗೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

Source: newsfirstlive.com Source link