ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

ಬೆಂಗಳೂರು: ಕಾಮಿಡಿಯನ್ ಮಂಜು ಪಾವಗಡ ಅವರು ಈ ಬಾರಿಯ ಬಿಗ್‍ಬಾಸ್ ಸೀನ್ -8ರ ವಿನ್ನರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಮಂಜುಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಸ್ನೇಹಿತರಂತೂ ಹೆಗಲ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡಿದರು. ಹಾರ ಹಾಕಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಮಂಜು ಸಾಧನೆಯನ್ನು ಸಂಭ್ರಮಿಸಿದ್ದಾರೆ.  ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

ಒಟ್ಟಿನಲ್ಲಿ `ಹಳ್ಳಿ ಹಕ್ಕಿ’ ಮಂಜುಗೆ ದೊಡ್ಮನೆ ಕಿರೀಟ ಒಲಿದಿದ್ದು, ಮಂಜು ಪಾವಗಡ-ಅರವಿಂದ್ ಕೆಪಿ ಮಧ್ಯೆ ಟಫ್ ಫೈಟ್ ಏರ್ಪಟ್ಟಿತ್ತು. ಕೊನೆಗೆ ಸುದೀಪ್ ಅವರು ವಿನ್ನರ್ ಮಂಜು ಪಾವಗಡ ಹೆಸರು ಘೋಷಿಸಿದ್ದಾರೆ. ಮಂಜು ಪಾವಗಡ ವಿನ್ನರ್, ಅರವಿಂದ್ ರನ್ನರ್ ಅಪ್ ಆಗಿದ್ದು, ಮಂಜುಗೆ 53 ಲಕ್ಷ, ಅರವಿಂದ್‍ಗೆ 11 ಲಕ್ಷ ಬಹುಮಾನ ದೊರೆತಿದೆ.  ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ

blank

ಸರ್ಧೆಯ ವಿಜೇತರಾಗಿರುವ ಮಂಜು ಪಾವಗಡ ಮಜಾಭಾರತ ರಿಯಾಲಿಟಿ ಶೋ ಸ್ಪರ್ಧಿ ಯಾಗಿ ಕನ್ನಡಿಗರಿಗೆ ಪರಿಚಿತರಿದ್ದರು. ಆದರೆ ಬಿಗ್ ಬಾಸ್ ಕಾರ್ಯಕ್ರಮ ತಮಗೆ ಕೊಟ್ಟ ಅವಕಾಶವನ್ನ ಜೋಪಾನವಾಗಿ ಕಾಪಾಡಿಕೊಂಡು ಸಂದರ್ಭಕ್ಕೆ ತಕ್ಕಂತೆ ಆಟವಾಡುವುದರಲ್ಲಿ ಯಶಸ್ವಿಯಾಗಿದ್ದರು. ಮನರಂಜಿಸುತ್ತಾ ಬಂದಿದ್ದು, ಟಾಸ್ಕ್ ನಲ್ಲೂ ಉತ್ತಮ ಪರ್ಫಾಮೆನ್ಸ್ ಕೊಟ್ಟಿದ್ದರು. ಕಡು ಬಡತನದಲ್ಲಿರುವ ಮಂಜು ಬಿಗ್ ಬಾಸ್ ಗೆದ್ದ ಹಣದಿಂದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋದಾಗಿ ಈ ಹಿಂದೆ ಹೇಳಿದ್ರು. ಹೀಗಾಗಿ ಕರುನಾಡು ಮಂಜುಗೆ ಹರಸಿದೆ. ಈ ಮೂಲಕ ಮತಗಳ ಮಹಾಪೂರವೇ ಮಂಜುಗೆ ಹರಿದುಬಂದಿತ್ತು. ಇದೇ ಕಾರಣದಿಂದ ಮಂಜು ಗೆಲ್ಲುವ ದಾರಿ ಸುಗಮವಾಯ್ತು.

Source: publictv.in Source link