‘ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ರಾಜೀವ್​ ಗಾಂಧಿ ಹೆಸರು ಬೇಡ’ -ಅಮಿತ್ ಶಾಗೆ ಇ-ಪಿಟಿಷನ್

‘ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ರಾಜೀವ್​ ಗಾಂಧಿ ಹೆಸರು ಬೇಡ’ -ಅಮಿತ್ ಶಾಗೆ ಇ-ಪಿಟಿಷನ್

ಮಡಿಕೇರಿ: ಕ್ರೀಡಾಪಟುಗಳ ಸಾಧನೆ ಗುರುತಿಸಿ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ನ್ನು ಮೇಜರ್ ಧ್ಯಾನ್​ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಕೇಂದ್ರ ಸರ್ಕಾರ ಪುನರ್ ನಾಮಕರಣ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಎಂದು ಆನ್ ಲೈನ್ ಅಭಿಯಾನವೊಂದು ಕೊಡಗಿನಲ್ಲಿ ಶುರುವಾಗಿದೆ.

ಮೈಸೂರು ಕೊಡಗು ಗಡಿಯಲ್ಲಿರುವ ನಾಗರಹೊಳೆ ನ್ಯಾಷನಲ್ ಪಾರ್ಕ್ ಅನ್ನು ರಾಜೀವ್​ ಗಾಂಧಿ ನ್ಯಾಷನಲ್ ಪಾರ್ಕ್ ಎಂದೂ ಸಹ ಕರೆಯಲಾಗುತ್ತದೆ. ಆದರೆ ಈ ಹೆಸರನ್ನು ಬದಲಿಸಬೇಕು.. ರಾಷ್ಟ್ರೀಯ ಉದ್ಯಾನಕ್ಕೆ ರಾಜೀವ್ ಗಾಂಧಿ ಎಂಬ ಹೆಸರು ಬೇಡ ಎಂದು ಕೊಡಗಿನ ಕೆಲ ನಿವಾಸಿಗಳು ಆನ್​ಲೈನ್​ಲ್ಲಿ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ.

ನ್ಯಾಷನಲ್ ಪಾರ್ಕ್​​ಗೆ ಸಂಬಂಧವೇ ಇಲ್ಲದ ಮಾಜಿ ಪ್ರಧಾನಿಯವರ ಹೆಸರನ್ನು ಇಟ್ಟಿರುವುದು ಸರಿಯಲ್ಲ. ಒಂದು ರಾಜಕೀಯ ಕುಟುಂಬವನ್ನು ಮೆಚ್ಚಿಸಲು ರಾಜೀವ್ ಗಾಂಧಿ ಅವ್ರ ಹೆಸರಿಡಲಾಗಿದೆ. ಈಗಿರುವ ಹೆಸರನ್ನ ಬದಲಾಯಿಸಿ ಉದ್ಯಾನವನಕ್ಕೆ ಕೊಡಗಿನ ಹೆಮ್ಮೆಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಅಥವಾ ಜನರಲ್ ತಿಮ್ಮಯ್ಯ ನವರ ಹೆಸರು ಇಡಬೇಕು ಎಂದು ಕೊಡಗಿನ ಜನ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾಗೆ ಇ-ಪಿಟಿಷನ್ ಸಲ್ಲಿಸಿದ್ದಾರೆ.

Source: newsfirstlive.com Source link