ವಿಶ್ವಸಂಸ್ಥೆ ಭದ್ರತಾ ಮಂಡಳಿ ಚರ್ಚೆಗೆ ಮೋದಿ ಅಧ್ಯಕ್ಷತೆ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

ವಿಶ್ವಸಂಸ್ಥೆ ಭದ್ರತಾ ಮಂಡಳಿ ಚರ್ಚೆಗೆ ಮೋದಿ ಅಧ್ಯಕ್ಷತೆ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

1. ಇಂದು ಸಿಎಂ ಬೊಮ್ಮಾಯಿ ಮೈಸೂರು ಪ್ರವಾಸ

blank
ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದು, ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ. ಮೈಸೂರಿನ ಪ್ರವಾಸ ಕೈಗೊಂಡಿರುವ ಸಿಎಂ, ಚಾಮುಂಡಿ ತಾಯಿ ದರ್ಶನದ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳು, ಹಿರಿಯ ಆರೋಗ್ಯಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಧಿಕಾರಿಗಳ ಜೊತೆ ಕೋವಿಡ್ ನಿಯಂತ್ರಣದ ಕುರಿತು ಸಭೆ ನಡೆಸಲಿದ್ದಾರೆ. ಇನ್ನು ಸಿಎಂ ಆದ ಬಳಿಕ ಬಸವರಾಜ್​ ಬೊಮ್ಮಾಯಿ ಅವರ ಮೊದಲ ಮೈಸೂರು ಭೇಟಿ ಇದಾಗಿದೆ.

2. ಇಂದು ಮಧ್ಯಾಹ್ನ 3.30ಕ್ಕೆ SSLC ಪರೀಕ್ಷೆ ಫಲಿತಾಂಶ

blank
ಇಂದು ಮಧ್ಯಾಹ್ನ 3.30ಕ್ಕೆ ಎಸ್​​ಎಸ್​​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ಮೊಬೈಲ್​​ಗೆ ಫಲಿತಾಂಶ ಬರಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​​ ನೇತೃತ್ವದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಸಚಿವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ. ಶಿಕ್ಷಣ ಇಲಾಖೆ ಜುಲೈ 19 ಹಾಗೂ 22 ರಂದು ರಾಜ್ಯಾದ್ಯಂತ SSLC ಪರೀಕ್ಷೆ ನಡೆಸಿತ್ತು.

3. ಕೊರೊನಾ ಬಾರದಿರಲು ಬಂಡೇಶ್ವರ ಸ್ವಾಮಿಗೆ ರುದ್ರಾಭಿಷೇಕ
ಕೊರೊನಾ ಮೂರನೆ ಅಲೆ ಬಾರದಿರಲಿ ಎಂದು ಕೆಂಗೇರಿ ಉಪನಗರದಲ್ಲಿರುವ ಬಂಡೆ ಮಠದಲ್ಲಿನ ಬಂಡೇಶ್ವರ ಸ್ವಾಮಿಗೆ 48 ದಿನಗಳಿಂದ ರುದ್ರಾಭಿಷೇಕ ಮಾಡಲಾಗ್ತಿದೆ. ನಿತ್ಯ 22 ಬಾರಿ ರುದ್ರಾಭಿಷೇಕ ಮಾಡಲಾಗಿದ್ದು, ನಿನ್ನೆ ಅಮಾವಾಸ್ಯೆ ಪ್ರಯುಕ್ತ ಗಣಪತಿ ಹೋಮ, ರುದ್ರ ಹೋಮ, ನವಗ್ರಹ ಶಾಂತಿ ಮೂಲಕ ಅಭಿಷೇಕ ಮಾಡಲಾಯಿತು. ಅಲ್ಲದೆ ಜನರನ್ನ ಕಾಡುತ್ತಿರುವ ನೆರೆ ಹಾವಳಿ ಕಡಿಮೆಯಾಗಲಿ ಅನ್ನೋದು ನಾವು ಮಾಡುವ ಪ್ರಾರ್ಥನೆ ಎಂದು ಬಂಡೆಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು ಹೇಳಿದ್ರು.

4. 592 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಬೀದರ್ ಪೊಲೀಸ್​
ಹೈದ್ರಾಬಾದ್​ನಿಂದ ಕಮಲನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 592 ಕೆಜಿ ಗಾಂಜಾವನ್ನು ಬೀದರ್​ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಭಾಲ್ಕಿಯ ಮುರಾಳ ಗ್ರಾಮದ ಓಂಕಾರ, ಅನಿಲ್​​ ಕುಮಾರ್, ಕಮಲನಗರದ ಹಾಜಿ ಪಾಶಾ ಹಾಗೂ ಅಸ್ಲಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5. ​ ಲಸಿಕೆ ಪಡೆದವರಿಗೆ ರೈಲು ಪ್ರಯಾಣಕ್ಕೆ ಅವಕಾಶ

blank
ಕೊರೊನಾ 2 ಡೋಸ್ ಲಸಿಕೆ ಪಡೆದವರಿಗೆ ಆಗಸ್ಟ್ 15 ರಿಂದ ಮುಂಬೈ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸಲು ಪಾಸ್ ಪಡೆಯುವುದಕ್ಕಾಗಿ ಌಪ್​ ಇರುತ್ತದೆ. ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಲ್ಲದವರಿಗೂ ಪ್ರತ್ಯೇಕ ವ್ಯವಸ್ಥೆ ಇದೆ. ನಾವು ಆಫ್‌ಲೈನ್ ವ್ಯವಸ್ಥೆಯನ್ನೂ ಪರಿಚಯಿಸಿದ್ದೇವೆ ಎಂದು ಠಾಕ್ರೆ ತಿಳಿಸಿದ್ದಾರೆ.

6. ವಿಶ್ವಸಂಸ್ಥೆ ಭದ್ರತಾ ಮಂಡಳಿ ಚರ್ಚೆಗೆ ಮೋದಿ ಅಧ್ಯಕ್ಷತೆ
ಕಡಲ ಭದ್ರತೆ ಕುರಿತು ಇಂದು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಮುಕ್ತ ಚರ್ಚೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಈ ಚರ್ಚೆಯಲ್ಲಿ ಮಂಡಳಿಯ ಸದಸ್ಯರು ಮತ್ತು ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.

7. ಇಂದು ಪ್ರಧಾನಿ ಮೋದಿ-ಅಸ್ಸಾಂ ಸಿಎಂ ಭೇಟಿ
ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವ ಶರ್ಮಾ, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿದ್ದು, ಅಸ್ಸಾಂ – ಮಿಜೋರಾಂ ಗಡಿ ಸಮಸ್ಯೆಯ ಕುರಿತು ಚರ್ಚಿಸಲಿದ್ದಾರೆ. ಅಸ್ಸಾಂ ಸಂಸದರ ಜೊತೆ ಹಿಮಂತ್​ ಬಿಸ್ವ ಶರ್ಮ ದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಗಡಿ ವಿವಾದ ಬಗ್ಗೆ ಚರ್ಚಿಸಲಿದ್ದಾರೆ. ಕಳೆದ ತಿಂಗಳು ಅಸ್ಸಾಂ ಮತ್ತು ಮಿಜೋರಾಂ ಗಡಿ ವಿವಾದದಲ್ಲಿ ಅಸ್ಸಾಂನ 6 ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದರು.

8. ‘ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರದ ಅಂತ್ಯ ಅಗತ್ಯ’
ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಹಾಗೆಯೇ ಅಲ್ಲಿನ ಹಿಂಸಾಚಾರ, ದ್ವೇಷದ ಕೃತ್ಯಗಳನ್ನು ಅಂತ್ಯಗೊಳಿಸುವ ಅಗತ್ಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳಿಗೆ ತಿಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್‌ ತಿಂಗಳ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದೆ. ಈ ಸ್ಥಾನ ಅಲಂಕರಿಸಿದ ಒಂದು ವಾರದಲ್ಲಿಯೇ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಮಂಡಳಿಯ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

9. ಬಿಗ್​ ಬಾಸ್​ ಟ್ರೋಫಿ ಎತ್ತಿಹಿಡಿದ ಮಂಜು ಪಾವಗಡ

blank
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 8ಕ್ಕೆ ಕೊನೆಗೂ ತೆರೆಬಿದ್ದಿದೆ. ಮಂಜು ಪಾವಗಡ, ಅರವಿಂದ್​ ನಡುವೆ ನಡೆದ ಫೈನಲ್​ ಹಣಾಹಣಿಯಲ್ಲಿ ಮಂಜು ಪಾವಗಡ ಬಿಗ್​ಬಾಸ್​​ ಕಿರೀಟವನ್ನು ತನ್ನದಾಗಿಸಿಕೊಂಡು 53 ಲಕ್ಷ ಗೆಲ್ಲುವ ಮೂಲಕ ಈ ಸೀಸನ್​​ನ​​ ವಿನ್ನರ್​ಆಗಿ ಹೊರಹೊಮ್ಮಿದ್ದಾರೆ. ಇನ್ನು ಅರವಿಂದ್​ ಕೆ.ಪಿ. ರನ್ನರ್​ ಅಪ್​ ಆಗಿದ್ದು, ದಿವ್ಯ ಉರುಡುಗ ಮೂರನೇ ಸ್ಥಾನಕ್ಕೆ ತೃಪ್ತರಾದ್ರು.

10. ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾ

blank
ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ. ಕಡೇ ದಿನವಾದ ಭಾನುವಾರ ಮಳೆ ಕಾರಣದಿಂದಾಗಿ ಆಟ ಸಾಧ್ಯವಾಗವಿಲ್ಲ. ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 209ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಭಾರತ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿತ್ತು. ಇನ್ನು 157ರನ್‌ಗಳನ್ನು ಗಳಿಸಿದ್ದರೆ ಭಾರತಕ್ಕೆ ಪಂದ್ಯದಲ್ಲಿ ಜಯ ಸಿಗುತ್ತಿತ್ತಾದರೂ ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಗಿ ಕೊನೆಗೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೂರ್ಖರಾಗಬೇಕಾಗುತ್ತೆ.

Source: newsfirstlive.com Source link