ಇಷ್ಟೊಂದು ದೊಡ್ಡ ಮೊತ್ತವನ್ನು ಜೀವನದಲ್ಲೇ ನೋಡಿಲ್ಲ: ಮಂಜು

– ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ವಿನ್ನರ್ ಆಗಿ ‘ಹಳ್ಳಿ ಹೈದ’ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ಇಷ್ಟೊಂದು ಮೊತ್ತವನ್ನು ನಾನು ನನ್ನ ಜೀವನದಲ್ಲಿಯೇ ನೋಡಿಲ್ಲ ಎಂದು ಮಂಜು ಹೇಳಿದ್ದಾರೆ.

ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ತನ್ನ ಮುಡಿಗೇರಿಸಕೊಂಡ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಫಿನಾಲೆಯಲ್ಲಿ ಸಿಗುವ ದೊಡ್ಡ ಮೊತ್ತದ ಹಣವನ್ನು ಇದುರೆಗೂ ಎಲ್ಲೂ ನೋಡಿಲ್ಲ, ಕೇಳಿದ್ದೀನಿ ಅಷ್ಟೇ ಎಂದು ನಗುತ್ತಲೇ ಉತ್ತರಿಸಿದರು. ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

ಸದ್ಯ ಈ ಹಣವನ್ನು ಏನು ಮಾಡಬೇಕು ಎಂದು ಗೊತ್ತಿಲ್ಲ. ಆದರೆ ಅಪ್ಪ-ಅಮ್ಮನನ್ನು ನಾನು ಸಾಯೋವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಹದಾಸೆ ಇದೆ. ಅವರಿಗಿಂತ ಮುಖ್ಯ ಯಾರೂ ಇಲ್ಲ. ಯಾಕಂದ್ರೆ ಅವರು ತುಂಬಾನೆ ಕಷ್ಟಪಟ್ಟು ಸಾಕಿ, ಬೆಳೆಸಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ದೊಡ್ಡ ಆಸೆ ಎಂದು ತಿಳಿಸಿದರು. ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ

ಇದೇ ವೇಳೆ ಬಿಗ್ ಬಾಸ್ ವೇದಿಕೆಗೆ ತೆರಳಲು ಸಿಕ್ಕ ಅವಕಾಶದ ಕುರಿತು ಮಾತನಾಡಿದ ಅವರು, ಆಸೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಕನ್ನಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಅನ್ನೋದು ಅತ್ಯಂತ ದೊಡ್ಡ ಶೋ ಆಗಿದೆ. ಇಂತಹ ವೇದಿಕೆಯಲ್ಲಿ ನನಗೆ ಅವಕಾಶ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದರು.

ಫಿನಾಲೆಯಲ್ಲಿ ಸುದೀಪ್ ಸರ್ ಎಡ ಹಾಗೂ ಬಲ ನಿಲ್ಲೋದು ಒಂದು ದೊಡ್ಡ ಸಾಧನೆಯಾಗಿದೆ. ಆ ಪರಿಸ್ಥಿತಿಯಲ್ಲಿ ತಲೆಯಲ್ಲಿ ಸಾವಿರ ಯೋಚನೆಗಳು ಓಡಾಡುತ್ತಿರುತ್ತವೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಿ ಮುಂದೆ ಬಂದಿರೋದು ತುಂಬಾ ಸಂತೋಷವಾಗಿದೆ ಎಂದು ಮಂಜು ಹೇಳಿದರು. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

ಸುದೀಪ್ ಸರ್ ನನ್ನ ಕೈ ಮೇಲೆ ಎತ್ತಿದಾಗ ನಿಜವಾಗಲೂ ನಾನೇ ವಿನ್ನರಾ. ಅವರು ತಿರುಗಿಸಿ ನನ್ನ ಫೋಟೋ ತೊರಿಸಿದಾಗಲೂ ನಾನೇನಾ ಎಂದು ಗಲಿಬಿಲಿಗೊಂಡೆ. ಸದ್ಯದ ಪರಿಸ್ಥಿತಿಯಲ್ಲೂ ಹಾಗೆಯೇ ಇದ್ದೀನಿ ಎಂದು ಮಂಜು ನಕ್ಕರು.

blank

ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಗ್ಯ್ರಾಂಡ್ ಫಿನಾಲೆಯಲ್ಲಿ ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು

Source: publictv.in Source link