ಲೆಜೆಂಡರಿ ‘ವಿಕ್ರಾಂತ್​’ಗೆ​ ಪುರ್ನಜನ್ಮ; ಸ್ವದೇಶಿ ನಿರ್ಮಿತ ಈ ನೌಕೆಯ ಸ್ಪೆಷಲ್ ಏನು..?

ಲೆಜೆಂಡರಿ ‘ವಿಕ್ರಾಂತ್​’ಗೆ​ ಪುರ್ನಜನ್ಮ; ಸ್ವದೇಶಿ ನಿರ್ಮಿತ ಈ ನೌಕೆಯ ಸ್ಪೆಷಲ್ ಏನು..?

ಇತ್ತೀಚಿನ ವರ್ಷಗಳಲ್ಲಿ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳೇ ರಾರಾಜಿಸುತ್ತಿವೆ. ಅದರಲ್ಲಿಯೂ ಭಾರತ ಈಗ ನಿರ್ಮಿಸಿರುವ ಸ್ವರ್ದೇಶಿ ನಿರ್ಮಿತ ಸಮುದ್ರ ಬೇಟೆಗಾರನೊಬ್ಬ ಎದುರಾಳಿಗಳ ಹೃದಯ ಬಡಿತ ಹೆಚ್ಚಿಸಿದ್ದಾನೆ.

ದೇಶದ ರಕ್ಷಣೆಗಾಗಿ ಭಾರತ ತನ್ನ ಭೂಪಡೆ, ವಾಯುಪಡೆ, ನೌಕಾಪಡೆಯನ್ನು ಸ್ಟ್ರಾಂಗ್‌ ಮಾಡುತ್ತಲೇ ಇದೆ. ಇಲ್ಲಿಯವರೆಗೆ ಸೇನೆಗೆ ಬೇಕಾದ ಅತ್ಯಾಧುನಿಕ ಯುದ್ಧ ಸಲಕರಣೆಗಳನ್ನು ರಷ್ಯಾ, ಅಮೆರಿಕ, ಫ್ರಾನ್ಸ್‌, ಇಸ್ರೇಲ್‌.. ರಾಷ್ಟ್ರಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧಾಸ್ತ್ರಗಳು ಒಂದೊಂದಾಗಿಯೇ ಸೇನಾಪಡೆ ಸೇರ್ಪಡೆಯಾಗುತ್ತಿವೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿಯೂ ರಫ್ತು ಮಾಡಲಾಗ್ತಿದೆ. ಈ ನಡುವೆ ಇಡೀ ವಿಶ್ವವೇ ಬೆರಗು ಗಣ್ಣಿನಿಂದ ನೋಡುವಂತಿರುವ ಬೇಟೆಗಾರನೊಬ್ಬನನ್ನು ನೌಕಾ ಸೇನೆ ನೀರಿಗೆ ಇಳಿಸಿದೆ.. ಅಗ್ನಿ ಪರೀಕ್ಷೆಗೆ ಒಡ್ಡಿದೆ.

ಭಾರತದತ್ತ ತಿರುಗಿ ನೋಡುತ್ತಿದೆ ಜಗತ್ತು
ಸ್ವದೇಶಿಯಾಗಿಯೇ ನಿರ್ಮಾಣವಾಯ್ತು ಅತ್ಯಾಧುನಿಕ ಯುದ್ಧಭೂಮಿ

ಹೌದು, ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಯಾಕೆಂದ್ರೆ ಅಂತಹವೊಂದು ಸಾಧನೆ ಭಾರತ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಬದಲಾವಣೆಯ ಹೆಜ್ಜೆ ಇಟ್ಟಿದೆ. ಸ್ವದೇಶಿ ನಿರ್ಮಿತ ವಸ್ತುವಿಗೆ ಆದ್ಯತೆ ನೀಡುತ್ತಿದೆ. ಅದರಲ್ಲಿಯೂ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಸಲಕರಣೆಗಳ ತಯಾರಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ. ಸ್ವದೇಶಿ ನಿರ್ಮಿತವಾಗಿಯೇ ಯುದ್ಧ ವಿಮಾನ, ಯುದ್ಧ ಹೆಲಿಕಾಪ್ಟರ್‌ ಸೇರಿದಂತೆ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ನಿರ್ಮಿಸುತ್ತಿದೆ. ಆದ್ರೆ ಇದೀಗ ಒಂದು ತೇಲುವ ಬೃಹತ್ ಯುದ್ಧ ಭೂಮಿಯನ್ನೇ ಭಾರತ ನಿರ್ಮಿಸಿ ಬಿಟ್ಟಿದೆ. ಫೈಟರ್​ ಜೆಟ್​​ಗಳು, ಮಿಸೈಲ್​ಗಳು, ಗನ್​​ಗಳು, ಫೈಟರ್​ ಹೆಲಿಕಾಪ್ಟರ್​​​ಗಳು. ಹೀಗೆ ಸಕಲ ಸರ್ವನಾಶಾಸ್ತ್ರಗಳನ್ನೂ ಹೊರಲು ರಣ ಬೇಟೆಗಾರ ಸಿದ್ಧವಾಗಿದ್ದಾನೆ.. ಅವನ ಅಗ್ನಿ ಪರೀಕ್ಷೆಯೂ ಭರದಿಂದ ಸಾಗ್ತಿದೆ.. ಅಷ್ಟಕ್ಕೂ ಆ ರಣ ಭಯಂಕರ ಬೇಟೆಗಾರ ಯಾರು ಗೊತ್ತಾ?

ಭಾರತದ ಲೆಜೆಂಡರಿ ವಿಕ್ರಾಂತ್​ ಪುರ್ನಜನ್ಮ
ಈ ರಣ ಬೇಟೆಗಾರನ ಹೆಸರೇ ವೈರಿಗಳಿಗೆ ವೀರಭದ್ರ

ಅದು 1971ರ ಸಮಯ.. ಅಂದಿನ ವೆಸ್ಟ್​ ಪಾಕಿಸ್ತಾನವಾಗಿದ್ದ ಬಂಗಾಳಿಯರೇ ಹೆಚ್ಚಿದ್ದ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯ ಅತ್ಯಾಚಾರ ಮುಗಿಲು ಮೀರಿತ್ತು.. ಲಕ್ಷಾಂತರ ಮಹಿಳೆಯರ ಮೇಲೆ ಬಲಾತ್ಕಾರ.. ಪುರಷರ ಹತ್ಯೆ ಅಲ್ಲಿನ ನದಿಗಳ ನೀರನ್ನ ಕೆಂಪಾಗಿಸಿತ್ತು. ಇಂಥ ವೇಳೆಯಲ್ಲೇ ಅವರ ಸಹಾಯಕ್ಕೆ ಎದ್ದು ನಿಂತಿದ್ದು ಭಾರತ.. ಒಂದೆಡೆ ಭಾರತೀಯ ತಲ ಸೇನೆ, ವಾಯುಸೇನೆಗಳು ಪಾಕಿಗಳ ಹುಟ್ಟಗಿಸುತ್ತಿದ್ದರೆ.. ಪಾಕಿಸ್ತಾನ ಸೇನೆಯ ಬೆನ್ನು ಮೂಳೆ ಮುರಿದು ಕೇವಲ 13 ದಿನದಲ್ಲಿ ಪಾಕಿಸ್ತಾನ ಸೇನೆ ಸೋಲುವಂತೆ ಮಾಡಿದ್ದ ಅಂದಿನ ದೈತ್ಯ ಶಕ್ತಿಯೇ ಭಾರತೀಯ ನೌಕಾ ಸೇನೆ. ಭಾರತೀಯ ನೌಕಾಸೇನೆಯ ಭೀಮ ಬಲವಾಗಿದ್ದೇ ಭಾರತದ ಮೊಟ್ಟ ಮೊದಲ ವಿಮಾನ ವಾಹಕ. ಅಂದ್ರೆ ಏರ್​​ಕ್ರಾಫ್ಟ್​ ಕ್ಯಾರಿಯರ್​​​ ಐಎನ್​​ಎಸ್ ವಿಕ್ರಾಂತ್​.

1961ರಿಂದ 1997ರ ತನನಕ ಭಾರತಕ್ಕೆ ಅಭೂತ ಪೂರ್ವ ಸೇವೆ ಸಲ್ಲಿಸಿದ್ದ ಐಎನ್​​​ಎಸ್​ ವಿಕ್ರಾಂತ್ ಅನ್ನು ನಂತರದಲ್ಲಿ ಡಿಸ್​​ಮ್ಯಾಂಟಲ್​ ಮಾಡಲಾಗಿತ್ತು. ಆದ್ರೆ ಇದ್ದಾಗ ಜೀವಂತ ದಂತಕಥೆ.. ಸೇವೆ ನಿಲ್ಲಿಸಿದ ಬಳಿಕ ಐತಿಹಾಸಿಕ ಹೆಸರನ್ನ ಉಳಿಸಿಕೊಂಡಿದ್ದ ವಿಕ್ರಾಂತ್​​​ನ ಸಾಧನೆ ಭಾರತೀಯ ಜಲ ಸೇನೆಯಲ್ಲಿ ನಿರಂತರ ಹುಮ್ಮಸ್ಸು ತುಂಬುತ್ತಲೇ ಇತ್ತು.. ಇದೇ ಕಾರಣದಿಂದಾಗಿ ಈ ರಣ ಬೇಟೆಗೆ ಗಾರ ಇಂದು ಸಂಪೂರ್ಣವಾಗಿ ಪುನರ್ಜನ್ಮ ಪಡೆದಿದ್ದಾನೆ.. ಸಂಪೂರ್ಣ ಹೊಸದಾಗಿ ಭಾರತದಲ್ಲೇ ನಿರ್ಮಾಣವಾಗಿ ಇದೀಗ ಸೀ ಟ್ರೈಯಲ್​ಗಾಗಿ ನೀರಿಗೆ ಮತ್ತೆ ಐಎನ್​ಎಸ್ ವಿಕ್ರಾಂತ್ ಅನ್ನೋ ಹೆಸರಿನಿಂದಲೇ ನೀರಿಗೆ ಇಳಿದಿದ್ದಾನೆ.

ಹೌದು, ಭಾರತದ ನೌಕಾ ಪಡೆಯನ್ನು ಸೇರಲು ಸಜ್ಜಾಗಿರೋ ರಣ ಬೇಟೆಗಾರನೇ ಐಎನ್‌ಎಸ್‌ ವಿಕ್ರಾಂತ್‌. ಇದೊಂದು ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾಗಿದೆ. ಸಮುದ್ರಲ್ಲಿ ನಿಲ್ಲಿಸಿಕೊಂಡು, ಅಥವಾ ಚಲಿಸುತ್ತಿರುವಾಗಲೇ ಯುದ್ಧ ವಿಮಾನಗಳನ್ನು, ಹೆಲಿಕಾಪ್ಟರ್‌ಗಳನ್ನು ಟೇಕಪ್‌, ಲ್ಯಾಂಡಿಂಗ್‌ ಮಾಡಬಹುದು. ಅದಕ್ಕೆ ಬೇಕಾದ ರನ್‌ವೇ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಇರುತ್ತದೆ. ಅಷ್ಟೇ ಅಲ್ಲ ತನ್ನನ್ನು ತಾನು ರಕ್ಷಿಸಿಕೊಳ್ಳಲೂ ಇದರ ಬಳಿಯಲ್ಲಿ ಅಸಂಖ್ಯೆ ಶಸ್ತ್ರಾಸ್ತ್ರಗಳ ಭಂಡಾರವೇ ಇರುತ್ತೆ..

ಇದರ ವಿಶೇಷತೆಗಳು ಮತ್ತೇನೆಲ್ಲ ಇವೆ ಗೊತ್ತಾ?

  • ದೇಶದ ಅತಿದೊಡ್ಡ, ಅತ್ಯಂತ ಸಂಕೀರ್ಣ ಯುದ್ಧ ನೌಕೆ
  • 23,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
  • ಯುದ್ಧನೌಕೆಯ ತೂಕ 40,000 ಟನ್
  • ಉದ್ದ 262 ಮೀಟರ್‌, ಅಗಲ 62 ಮೀಟರ್‌
  • ಗಂಟೆಗೆ 51 ಕಿಲೋ ಮೀಟರ್‌ ವೇಗ
  • ಒಮ್ಮೆಗೆ 13890 ಕಿಲೋ ಮೀಟರ್‌ ಚಲಿಸುವ ಸಾಮರ್ಥ್ಯ

ಐಎನ್‌ಎಸ್‌ ವಿಕ್ರಾಂತ್‌ ಸಾಮರ್ಥ್ಯ ಏನು ಗೊತ್ತಾ?
ಆಗಸದಲ್ಲಿ ಪುಟಾಣಿಯಂತೆ ಕಾಣುವ ವಿಮಾನಗಳು ಎಷ್ಟು ದೊಡ್ಡವು ಇರುತ್ತವೆ ಅನ್ನೋದನ್ನ ಅದನ್ನು ನೋಡಿದವರು ತಿಳಿದಿರ್ತಾರೆ. ಅದ್ರಲ್ಲೂ ಯುದ್ಧ ವಿಮಾನಗಳು.. ಅದ್ರಲ್ಲಿ ಅಳವಡಿಸಲಾಗುವ ಮಿಸೈಲ್​ಗಳು ಸೈಜ್​ನಲ್ಲಿ ಮಾತ್ರ ದೊಡ್ಡವಲ್ಲ ಬದಲಿಗೆ ಅದರ ತೂಕವೂ ಭಾರಿಯಾಗಿಯೇ ಇರುತ್ತೆ. ಉದಾಹರಣೆಗೆ ಹೇಳೋದಾದ್ರೆ ಅಟ್ಯಾಕ್​ಗೆ ತಯಾರಾದ ಒಂದು ಯುದ್ಧ ವಿಮಾನದ ಸರಾಸರಿ ತೂಕ.. ಎರಡು ಬೃಹತ್​ ಲಾರಿಗಳಿಗೆ ಸಮನಾಗಿರುತ್ತವೆ.. ಇಂಥ ಬರೋಬ್ಬರಿ 30 ವಿಮಾನಗಳು ನಿಲ್ಲಬೇಕು ಅಂದ್ರೆ ಅದಕ್ಕೆ ಬೇಕಾದಂಥ ಜಾಗ ಹೇಗಿರಬಹುದು? ಎಷ್ಟು ತೂಕ ಅವುಗಳದ್ದಾಗಿರಬಹುದು? ಊಹಿಸಿದ್ರೇನೇ ರೋಮಾಂಚನವಾಗುತ್ತೆ ಅಲ್ವಾ? ನಿಮಗೆ ಇನ್ನೂ ರೋಮಾಂಚನವಾಗುವಂಥ ಮತ್ತೊಂದು ಸಂಗತಿ ಇದೆ.

ಈ ರಣ ಬೇಟೆಗಾರ ಐಎನ್ಎಸ್ ವಿಕ್ರಾಂತ್ ಇದ್ದಾನಲ್ಲ.. ಈತ ಸಮುದ್ರದಲ್ಲಿ ತೇಲುತ್ತಿರುವಾಗಲೇ ಹೀಗೆ ಮಿಸೈಲುಗಳಿಂದ ಸುಸಜ್ಜಿತವಾದ ಬರೋಬ್ಬರಿ 30 ಮಿಗ್-29ಕೆ ಫೈಟರ್​ ಜೆಟ್ ಹೊತ್ತೋಯಬಲ್ಲ.. ಅಷ್ಟೇ ಅಲ್ಲ ಅಗತ್ಯ ಬಿದ್ದಾಗ ಅವುಗಳು ಹಾರಲು ಬೇಕಾದ ರನ್​ ವೇ ಕೂಡ ಈತ ಹೊಂದಿದ್ದದ್ದು. ಲ್ಯಾಂಡ್​ ಮಾಡಲೂ ಸಹಾಯಕವಾಗುವಂಥ ವ್ಯವಸ್ಥೆಯನ್ನೂ ಈತ ಹೊಂದಿದೆ.

ಕೇವಲ 30 ಫೈಟರ್​ ಜೆಟ್​ ಮಾತ್ರವಲ್ಲ. ನಿಮಗೆ ನಂಬಲೂ ಸಾಧ್ಯವಾಗದಂಥ ಅಚ್ಚರಿಯನ್ನುಂಟು ಮಾಡಬಲ್ಲಂಥ ವಿಶೇಷತೆಗಳು ಈ ಐಎನ್​ಎಸ್ ವಿಕ್ರಾಂತ್​ನಲ್ಲಿವೆ. ಹೌದು.. 30 ಮಿಗ್-29ಕೆ ಫೈಟರ್​ ಜೆಟ್ ಮಾತ್ರವಲ್ಲ.. ರಷ್ಯಾ ನಿರ್ಮಿತ ಕಮೋವ್‌-31 ಹೆಲಿಕಾಪ್ಟರ್​​, ಮೊನ್ನೆ ತಾನೆ ಅಮೆರಿಕಾದಿಂದ ಡೆಲಿವರಿ ಪಡೆದಿರೋ ಸಬ್​ಮರೈನ್ ಹಂಟರ್.. ಮಲ್ಟಿ ರೋಲ್ ಅಟ್ಯಾಕ್ ಹೆಲಿಕಾಪ್ಟರ್​​ ರೋಮಿಯೋ ಅಲಿಯಾಸ್ ಎಂಎಚ್‌-60ಆರ್‌.. ಜೊತೆಗೆ ಭಾರತದಲ್ಲೇ ತಯಾರಾಗಿರೋ ಹೆಚ್​​ಎಎಲ್ ನಿರ್ಮಿತ್ ಅಡ್ವಾನ್ಸ್​ ಲೈಟ್ ಕಾಂಬ್ಯಾಟ್​ ಹೆಲಿಕಾಪ್ಟರ್​​ಗಳನ್ನೂ ಇದು ಹೊತ್ತೊಯ್ಯಬಲ್ಲದು. ಸಂಪೂರ್ಣ ಯುದ್ಧಕ್ಕೆ ಸಿದ್ಧವಾದ ಬರೋಬ್ಬರಿ 6 ಫೈಟರ್ ಹೆಲಿಕಾಪ್ಟರ್​ಗಳು ಇದ್ರಲ್ಲಿ ಒಮ್ಮೆಲೇ ಪಯಣಿಸಬಹುದು.. ಅಗತ್ಯ ಬಿದ್ದಾಗ ಟೇಕ್​ ಆಫ್ ಆಗಿ ದಾಳಿ ಕೂಡ ಮಾಡಬಹುದು.

ವಿಕ್ರಾಂತ್‌ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳೋದು ಹೇಗೆ?
ವಿಕ್ರಾಂತ್‌ನಲ್ಲಿರುತ್ತೆ ಮಿಸೈಲ್ಸ್‌, ಡ್ರೋನ್‌, ಅತ್ಯಾಧುನಿಕ ಗನ್‌
ವೈರಿ ಪಡೆಯ ದಾಳಿ ತಿಳಿಯುವ ರಾಡರ್‌, ರಾಕೆಟ್‌ ಉರುಳಿಸುವ ಮಿಸೈಲ್

ಹೌದು, ಯುದ್ಧಭೂಮಿ ಎಂದೇ ಕರೆಯಿಸಿ ಕೊಳ್ಳುವ ವಿಮಾನವಾಹಕ ನೌಕೆಗಳು ವೈರಿ ಪಡೆಯನ್ನು ಹೊಡೆದುರುಳಿಸಲುನೆರವಾಗುತ್ತೆ. ಆದ್ರೆ, ವೈರಿ ಪಡೆಗಳು ಕೂಡ ಯುದ್ಧ ನೌಕೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ. ಹಾಗಾದ್ರೆ, ದಾಳಿಯಿಂದ ತಪ್ಪಿಸಿಕೊಳ್ಳಲು ಯುದ್ಧನೌಕೆಯಲ್ಲಿ ಯಾವೆಲ್ಲ ಸಾಧನಗಳು ಇರುತ್ತವೆ ಗೊತ್ತಾ? ಬಹುಮುಖ್ಯವಾಗಿ ರಾಡರ್‌ ಇರುತ್ತದೆ. ಇದರ ಮೂಲಕ ವೈರಿ ಪಡೆಯಿಂದ ಬರುವ ರಾಕೆಟ್‌ಗಳನ್ನು ಗೊತ್ತು ಮಾಡಲಾಗುತ್ತೆ. ಅದೇ ರೀತಿಯಾಗಿ ಮಿಸೈಲ್ಸ್‌ಗಳು, ಅತ್ಯಾಧುನಿಕ ಡ್ರೋನ್‌ಗಳು, ಅತ್ಯಾಧುನಿಕ ಗನ್‌ಗಳು ಇರುತ್ತವೆ. ಒಟ್ಟಿನಲ್ಲಿ ವೈರಿಗಳ ದಾಳಿಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಏನು ಬೇಕೋ ಆ ಎಲ್ಲಾ ಸಾಧನವನ್ನು ತೆಲುವ ಯುದ್ಧ ಭೂಮಿ ಹೊಂದಿರುತ್ತೆ. ವಿಕ್ರಾಂತ್‌ನಲ್ಲಿ ಕೂಡ ಆ ಎಲ್ಲಾ ಸಾಧನಗಳು ಇವೆ.

ವಿಕ್ರಾಂತ್‌ ಬಗ್ಗೆ ಪಾಕ್‌ ಹೇಳಿದ್ದೇನು ಗೊತ್ತಾ?
ಐಎನ್‌ಎಸ್‌ ವಿಕ್ರಾಂತ್‌ ಒಂದು ದೊಡ್ಡ ಹಳ್ಳಿಯಿದ್ದಂತೆ. ಅದರಲ್ಲಿ ಸುಮಾರು 1700 ಜನಕ್ಕಿಂತ ಹೆಚ್ಚಿನ ಸಿಬ್ಬಂದಿ ನಾನಾ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಯುದ್ಧ ವಿಮಾನಗಳಿಗೆ ರಾಕೆಟ್‌ ಅಳವಡಿಸುವುದು, ಇಂಧನ ತುಂಬಿಸೋದ್ರಿಂದ ಹಿಡಿದು. ಎಲ್ಲಾ ಕೆಲಸವನ್ನು ಸಿಬ್ಬಂದಿ ಮಾಡುತ್ತಾರೆ. ಇನ್ನು ಭದ್ರತೆ ವಿಚಾರಕ್ಕೆ ಬಂದ್ರೆ ಈ ಯುದ್ಧ ಭೂಮಿಗೆ ಹೈ-ಸೆಕ್ಯೂರಿಟಿ ಇರುತ್ತದೆ. 369 ಡಿಗ್ರಿಯಲ್ಲಿಯೂ ಕಣ್ಗಾವಲು ಇರುತ್ತದೆ. ಅಂದ್ರೆ, ಆಕಾಶ ಮರ್ಗದಲ್ಲಿಯಾಗಲಿ, ಜಲ ಮಾರ್ಗದಲ್ಲಿಯಾಗಲಿ ಯಾವುದೇ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ. ಜಲಾಂತರ್ಗಾಮಿಗಳು ವಿಕ್ರಾಂತ್‌ ಮೇಲೆ ಹದ್ದಿನ ಕಣ್ಣಿಟ್ಟಿರುತ್ತವೆ. ವಿಶೇಷ ಅಂದ್ರೆ , ಇಷ್ಟೊಂದು ಭದ್ರತೆ ಹೊಂದಿರೋ ವಿಕ್ರಾಂತ್‌ ಬಗ್ಗೆ ಪಾಕ್‌ ಸೇನೆ ನೀಡಿರುವ ಪ್ರತಿಕ್ರಿಯೆ ಏನು ಗೊತ್ತಾ? ಅದೇನಂದ್ರೆ ತನ್ನ ಬಳಿಯಿರುವ ಸಿಎಂ-400 ಎಕೆಜಿ, ಸಿಎಂ 302 ಮಿಸೈಲ್‌ನಲ್ಲಿ ವಿಕ್ರಾಂತ್‌ ಹೊಡೆದಿರುಳಿಸುವ ಸಾಮರ್ಥ್ಯ ಇದೆ ಅಂತ ಹೇಳಿಕೊಂಡಿದೆ. ಅದ್ರೆ, ಅದು ಸಾಧ್ಯವಿಲ್ಲದ ಮಾತು. ಒಮ್ಮೆ ವಿಕ್ರಾಂತ್‌ ಹೊಡೆದುರುಳಿಸಲು ಪಾಕ್‌ನಿಂದ ರಾಕೆಟ್‌ ಲಾಂಚ್‌ ಆದಾಗಲೇ ವಿಕ್ರಾಂತ್‌ನಲ್ಲಿರೋ ರಾಡರ್‌ಗೆ ತಿಳಿದುಬಿಡುತ್ತೆ. ತಜ್ಞಣವೇ ರಾಕೆಟ್‌ ಹೊಡೆದುರುಳಿಸುವ ಕೆಲಸ ಆಗುತ್ತೆ.

ಭಾರತಕ್ಕೆ ಒಂದು ಸ್ವದೇಶಿ ನಿರ್ಮಿತ ಯುದ್ಧ ನೌಕೆ ಅಗತ್ಯ ಇದೆ ಅಂತ ಭಾರತ ತೀರ್ಮಾನಿಸಿದ್ದು 1999ರಲ್ಲಿ. ಹೌದು, ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್‌ ಫರ್ನಾಂಡಿಸ್‌ ಅವರು ಐಎನ್‌ಎಸ್ ವಿಕ್ರಾಂತ್‌ ವಿನ್ಯಾಸ ಆರಂಭಕ್ಕೆ ಚಾಲನೆ ನೀಡಿದ್ದರು. ಅದು, ಹೇಗಿರಬೇಕು, ಎಷ್ಟು ಕೋಟಿ ವೆಚ್ಚದಲ್ಲಿ ನಿರ್ಮಿಸಬೇಕು, ಅದರ ಸಾಮರ್ಥ್ಯ ಎಷ್ಟಿರಬೇಕು, ಅದರ ಭಾರ ಎಷ್ಟಿರಬೇಕು ಅನ್ನೋದನೆಲ್ಲಾ ವಿನ್ಯಾಸ ಮಾಡಲಾಗಿತ್ತು. ವಿನ್ಯಾಸ ಕಾರ್ಯ ಪೂರ್ಣಗೊಂಡ ಬಳಿಕ 2009 ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಸ್ವದೇಶ ನಿರ್ಮಿತ ಐಎನ್‌ಎಸ್‌ ವಿಕ್ರಾಂತ್‌ ಸಿದ್ಧವಾಗಿದೆ. 2022ರಲ್ಲಿ ಭಾರತೀಯ ನೌಕಾಪಡೆಯನ್ನು ಸೇರಲಿದೆ.

Source: newsfirstlive.com Source link