ವಿಜಯಪುರಕ್ಕೂ ಕಾಲಿಟ್ಟಿದ್ದ ಡೆಲ್ಟಾ ರೂಪಾಂತರಿ -280 ಮಂದಿ ಸೋಂಕಿಗೆ ಬಲಿಯಾಗಿರೋ ಶಂಕೆ

ವಿಜಯಪುರಕ್ಕೂ ಕಾಲಿಟ್ಟಿದ್ದ ಡೆಲ್ಟಾ ರೂಪಾಂತರಿ -280 ಮಂದಿ ಸೋಂಕಿಗೆ ಬಲಿಯಾಗಿರೋ ಶಂಕೆ

ವಿಜಯಪುರ: ಜಿಲ್ಲೆಯಲ್ಲಿ ಸ್ಫೋಟಕ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ಆರ್ಭಟಿಸಿತ್ತು. ಕೊರೊನಾ 2 ನೇ ಅಲೇ ವೇಳೆ ಕೊರೊನ ಸೋಂಕಿತ ಗರ್ಭಿಣಿಯರು, ಮಕ್ಕಳು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಸ್ಯಾಂಪಲ್ ಸಂಗ್ರಹಿಸಿದ್ದ ಜಿಲ್ಲಾಡಳಿತ, ಸ್ಯಾಂಪಲ್ ಗಳನ್ನ ಬೆಂಗಳೂರು ಮೆಡಿಕಲ್ ಕಾಲೇಜಿನ ವೈರಾಲಜಿ ಲ್ಯಾಬ್ ಗೆ ಕಳುಹಿಸಿತ್ತು.

blank

ಕಳೆದ ಜುಲೈ ಕೊನೆಯ ವಾರದಲ್ಲೇ ಡೆಲ್ಟಾ ರೂಪಾಂತರಿಯ ಲ್ಯಾಬ್ ರಿಪೋರ್ಟ್ ಬಂದಿದೆ. ವಿಜಯಪುರ ಜಿಲ್ಲಾಡಳಿತ ಕಳುಹಿಸಿದ 120 ಸ್ಯಾಂಪಲ್ ಪೈಕಿ 77 ಜನರಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿತ್ತು ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 15 ರಿಂದ ಮೇ 15 ವರೆಗೆ ಒಂದು ತಿಂಗಳಲ್ಲೇ 280 ಜನರು ಡೆಲ್ಟಾ ರೂಪಾಂತರಿಗೆ ಬಲಿಯಾಗಿರೋ ಶಂಕೆ ಕೂಡ ವ್ಯಕ್ತವಾಗಿದ್ದು, ಈಗಲೂ ತಿಂಗಳಿಗೆ ಎರಡು ಸಾರಿ ಶಂಕಿತರ ಕಫದ ಸ್ಯಾಂಪಲ್ ಪಡೆದು ಜಿಲ್ಲಾಡಳಿತ ಕಳುಹಿಸುತ್ತಿದೆ. ಸದ್ಯಕ್ಕೆ ಯಾವುದೆ ಡೆಲ್ಟಾ ಕೇಸ್ ಪತ್ತೆಯಾಗಿಲ್ಲ. ಇನ್ನು ರಾಜ್ಯದಲ್ಲೆ ಡೆಲ್ಟಾ ರೂಪಾಂತರಿ ಸೋಂಕಿತರಲ್ಲಿ ವಿಜಯಪುರ ಎರಡನೇ ಸ್ಥಾನದಲ್ಲಿದೆ.

Source: newsfirstlive.com Source link