ಜಮೀರ್ ಅಹಮ್ಮದ್​​​ಗೆ ಮತ್ತೆ ಶಾಕ್.. ದಿಢೀರ್ ನೋಟಿಸ್ ಕೊಟ್ಟ ED  

ಜಮೀರ್ ಅಹಮ್ಮದ್​​​ಗೆ ಮತ್ತೆ ಶಾಕ್.. ದಿಢೀರ್ ನೋಟಿಸ್ ಕೊಟ್ಟ ED  

ಬೆಂಗಳೂರು: ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಜಮೀರ್ ಅಹಮ್ಮದ್​ ಖಾನ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಇದೀಗ ಇ.ಡಿ ಅಧಿಕಾರಿಗಳು ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಿದ್ದಾರೆ.

blank

10 ದಿನಗಳ ಒಳಗಾಗಿ ದಾಖಲೆಗಳನ್ನ ಸಲ್ಲಿಸಬೇಕು ಅಂತಾ ಜಮೀರ್ ಅವರಿಗೆ ನೋಟಿಸ್​ನಲ್ಲಿ ಸೂಚಿಸಿದ್ದಾರೆ. ಕೆಲವೊಂದು ದಾಖಲೆಗಳಿಲ್ಲದ ಆಸ್ತಿಗಳು ಪತ್ತೆಯಾಗಿವೆ, ದಾಖಲೆಗಳ ಜೊತೆ ಸ್ಪಷ್ಟನೆ ನೀಡಲು ಸೂಚಿಸಿದ್ದಾರೆ. ಅಗಸ್ಟ್​ 05 ರಂದು ಜಮೀರ್ ಅಹಮ್ಮದ್​ಗೆ ಸಂಬಂಧಿಸಿದ್ದ 15 ಕಡೆ ದಾಳಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

blank

ಬಂಬೂ ಬಜಾರ್ ಜಮೀರ್ ಮನೆಯ ಇಂಟೀರಿಯರ್ ಫೋಟೋ​ಗಳನ್ನ ED ಅಧಿಕಾರಿಗಳು ತೆಗೆದುಕೊಂಡಿದ್ದರು. ಒಳ ಭಾಗ ಇಂಟೀರಿಯರ್ ಡೆಕೋರೇಷನ್ ಬಹಳ ದುಬಾರಿ ಬೆಲೆಯದ್ದಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಫೋಟೋಸ್​ಗಳನ್ನ ತೆಗೆದುಕೊಂಡಿದ್ದರು.

blank

ಕೆಲವು ಆಸ್ತಿಗಳಿಗೆ ದಾಖಲಾತಿಗಳು ಸಿಕ್ಕಿದ್ದು, ಉಳಿದ ವಸ್ತುಗಳಿಗೆ ಯಾವುದೇ ದಾಖಲಾತಿಗಳೇ ಇಲ್ಲ. ಹೀಗಾಗಿ ಹತ್ತು ದಿನಗಳಲ್ಲಿ ಡಾಕ್ಯುಮೆಂಟ್, ಇ.ಡಿ ಕೈಗೆ ಹಸ್ತಾಂತರಿಸಬೇಕು ಎಂದು ಜಮೀರ್​ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

blank

Source: newsfirstlive.com Source link