ಮೈ ಜುಂ ಅನಿಸುತ್ತೆ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ -ಮಡದಿಯ ಆ್ಯಕ್ಷನ್​​ಗೆ ರಿಯಲ್​ ಸ್ಟಾರ್ ಫಿದಾ!

ಮೈ ಜುಂ ಅನಿಸುತ್ತೆ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ -ಮಡದಿಯ ಆ್ಯಕ್ಷನ್​​ಗೆ ರಿಯಲ್​ ಸ್ಟಾರ್ ಫಿದಾ!

ಉಪೇಂದ್ರ ಪ್ರಿಯಾಂಕ ನಾಯಕಿಯಾಗಿ ಅಷ್ಟೇ ಅಲ್ಲ, ಉತ್ತಮ ಗೃಹಿಣಿಯಾಗಿಯು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಅಲ್ಲದೆ ಉಪ್ಪಿಯ ಹೃದಯವನ್ನು ಕದ್ದಿದ್ದಾರೆ. ಸದಾ ನಗುನಗುತ ಮುದ್ದು ಮೊಗದಿಮದಲೇ ಎಲ್ಲರನ್ನು ಪ್ರಿಯಾಂಕ ಸೆಳೆಯುತ್ತಾರೆ. ಆದರೆ ಸಡನ್​ ಆಗಿ ಈಗ ಹೂವಿನ ಹುಡುಗಿ ಪ್ರಿಯಾಂಕ ಉಗ್ರಾವತಾರ ತಾಳಿದ್ದಾರೆ. ಹಸನ್ಮಿಖಿಯಾಗಿದ್ದ ಮುದ್ದು ಮಡದಿಯ ಉಗ್ರವತಾರ ಕಂಡು ಉಪ್ಪಿ ಫುಲ್​ ಫಿದಾ ಆಗಿದ್ದಾರೆ.

blank

ಬೆಂಗಾಲಿ ಬೆಡಗಿ ಪ್ರಿಯಾಂಕ ಕರ್ನಾಟಕದ ಸೊಸೆಯಾಗಿ ಸಿನಿಮಾ ಮತ್ತು ಸಂಸಾರ ಎರಡರಲ್ಲೂ ಸಕ್ಸಸ್​ ಕಂಡಿದ್ದಾರೆ. ಮದ್ವೆಯಾಗಿ ಎರಡು ಮಕ್ಕಾಳದ್ರು ಒಳ್ಳೆ ಫಿಟ್ನೆಸ್​ ಮೆಂಟೈನ್​ ಮಾಡಿದ್ದಾರೆ. ಅದ್ದರಿಂದಲೇ ಪ್ರಿಯಾಂಕ ಇಂದಿಗೂ ಚಾಲ್ತಿಯಲ್ಲಿರುವ ನಾಯಕಿಯಾಗಿದ್ದಾರೆ. ಹೆಚ್ಚು ಅವಕಾಶಗಳು ತಮ್ಮನ್ನ ಅರಸಿ ಬಂದ್ರ ಪ್ರಿಯಾಂಕ ಮಾತ್ರ ಅಳೆದು ತೂಗಿಯೇ ಪಾತ್ರಗಳ ಆಯ್ಕೆ ಮಾಡ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ ಮಹಿಳಾ ಪ್ರಧಾನ ಚಿತ್ರಗಳನ್ನು ಹೆಚ್ಚೆಚ್ಚು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ನಡುವೆ ಪ್ರಿಯಾಂಕ ‘ಉಗ್ರವತಾರ’ ಚಿತ್ರದ ಮೂಲಕ ಆಕ್ಷನ್​ ಚಿತ್ರಕ್ಕೂ ಕೈ ಹಾಕಿದ್ದಾರೆ. ಇನ್ನು ಉಗ್ರವತಾರ ಚಿತ್ರ ಸೆಟ್ಟೇರಿದಾಗಿನಿಂದಲೂ ಪ್ರಿಯಾಂಕ ಅವರ ಮಾಸ್​ ಅವತಾರ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅದ್ರೆ ಈಗ ಪ್ರಿಯಾಂಕ ಅವ್ರ ಮಾಸ್​ ಖದರ್​ಗೆ ಅವರ ಪತಿರಾಯ ಉಪೇಂದ್ರ ಕೂಡ ಬೋಲ್ಡ್​ ಆಗಿದ್ದಾರೆ.

blank

ಯೆಸ್​.. ಹೂವಿನ ಬೆಡಗಿ ಪ್ರಿಯಾಂಕ ‘ ಉಗ್ರವತಾರ’ ಸೆಟ್​ನಲ್ಲಿ ವಿಲನ್​ಗಳ ಜೊತರ ಸಖತ್​ ಆಗಿ ಫೈಟ್​ ಮಾಡಿ ಮಾಸ್​ ಅವತಾರದಲ್ಲಿ ಮಿರಮಿರ ಮಿಂಚಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ನೆಲಮಂಗಲ ರೆಸಾರ್ಟ್​ವೊಂದರಲ್ಲಿ ಉಗ್ರವತಾರ ಚಿತ್ರದ ಕ್ಲೈಮ್ಯಾಕ್ಸ್​ ಫೈಟಿನ ಚಿತ್ರೀಕರಣ ನಡೆದಿದ್ದು. ಕ್ಲೈ ಮ್ಯಾಕ್ಸ್​ ಫೈಟ್​ನಲ್ಲಿ ಭರ್ಜರಿ ಆಕ್ಷನ್​ ಸೀನ್​ಗಳಲ್ಲಿ ಪ್ರಿಯಾಂಕ ಕಾಣಿಸಿದ್ದಾರೆ.

blank

ಫೈಟ್​ ಮಾಸ್ಟರ್​ ವಿನೋದ್​ ನಿರ್ದೆಶನದಲ್ಲಿ ಪ್ರಿಯಾಂಕ್ ಜಬರ್ದಸ್ತ್​ ಆಗಿ ಕೇಡಿಗಳ ಜೊತೆ ಕಾದಾಡಿದ್ದಾರೆ. ಇನ್ನು ಉಗ್ರವತಾರ ಚಿತ್ರದ ಕ್ಲೈಮ್ಯಾಕ್ಸ್​ ಫೈಟಿನಲ್ಲಿ ಪ್ರಿಯಾಂಕ ಮಾಸ್​ ಅವತಾರ ನೋಡಿ ಉಪ್ಪಿ ಪುಲ್​ ಫಿದಾ ಆಗಿದ್ದಾರಂತೆ.

ಗುರುಮೂರ್ತಿ ನಿರ್ದೇಶನದ ಉಗ್ರವತಾರ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಈ ವರ್ಷದಲ್ಲೇ ಪ್ರಿಯಾಂಕಾರ ಮಾಸ್​ ಅವತಾರವನ್ನು ಅವರ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಚಿತ್ರತಂಡ ಪ್ಲಾನ್​ ಮಾಡಿದ್ದಾರೆ.

Source: newsfirstlive.com Source link