ಬಾಲಿವುಡ್​ ಖ್ಯಾತ ನಟ ಅನುಪಮ್​​ ಶ್ಯಾಮ್​ ನಿಧನ

ಬಾಲಿವುಡ್​ ಖ್ಯಾತ ನಟ ಅನುಪಮ್​​ ಶ್ಯಾಮ್​ ನಿಧನ

ಮುಂಬೈ: ಬಾಲಿವುಡ್​ ಖ್ಯಾತ ನಟ ಅನುಪಮ್​​ ಶ್ಯಾಮ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅನುಪಮ್ ಶ್ಯಾಮ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಅನುಪಮ್ ಶ್ಯಾಮ್ ದಸ್ತಕ್, ದಿಲ್ ಸೇ ,ಲಗಾನ್, ಗೋಲ್ಮಾಲ್ ಮತ್ತು ಮುನ್ನಾ ಮೈಕೆಲ್ ನಂತಹ ಜನಪ್ರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಇನ್ನು ಅನುಪಮ್ ಶ್ಯಾಮ್ ನಿಧನಕ್ಕೆ ಬಾಲಿವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಅನುಪಮ್ ಶ್ಯಾಮ್ ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ಪರದೆಯ ಮೇಲೂ ನಟಿಸಿ ಸೈ ಎನಿಸುಕೊಂಡಿದ್ದರು. ಅನುಪಮ್​ ಶ್ಯಾಮ್​ ಅವರ ‘ಮನ್​​ ಕೀ ಆವಾಜ್​’ ಸಿರೀಸ್​​ನಲ್ಲಿ ಸಜ್ಜನ್​​ ಸಿಂಗ್​ ಪಾತ್ರ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಹಿಂದಿ ಧಾರಾವಾಹಿ ಮಾತ್ರವಲ್ಲದೇ ಸ್ಲಮ್​ ಡಾಗ್​ ಮಿಲಿಯನಿರ್​​, ಬಂದಿಟ್​ ಕ್ವೀನ್​ ಸಿನಿಮಾದ ಪಾತ್ರಗಳು ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸಿದ್ದವು.

Source: newsfirstlive.com Source link