ಧೋನಿ ಬಳಿಕ DRS ಆಯ್ಕೆಯಲ್ಲಿ ಟೀಂ ಇಂಡಿಯಾ ಫೇಲ್; ಟ್ರೋಲ್​ ಆದ ಕೊಹ್ಲಿ..!

ಧೋನಿ ಬಳಿಕ DRS ಆಯ್ಕೆಯಲ್ಲಿ ಟೀಂ ಇಂಡಿಯಾ ಫೇಲ್; ಟ್ರೋಲ್​ ಆದ ಕೊಹ್ಲಿ..!

ಡಿಸಿಷನ್​ ರಿವ್ಯೂ ಸಿಸ್ಟಮ್​ ಅನ್ನ ಭಾರತೀಯ ಕ್ರಿಕೆಟ್​​ ಅಭಿಮಾನಿಗಳು ಧೋನಿ ರಿವ್ಯೂ ಸಿಸ್ಟಮ್​ ಎಂದೇ ಹೇಳ್ತಿದ್ರು. ಧೋನಿ ತಂಡದಲ್ಲಿದ್ದಾಗ ಡಿಆರ್​ಎಸ್​ ತೆಗೆದುಕೊಳ್ಳುವಲ್ಲಿದ್ದ ಸ್ಪಷ್ಟತೆ, ನಿಖರತೆ ಹಾಗಿತ್ತು. ಆದ್ರೆ, ಈಗ ಪ್ರತಿ ಪಂದ್ಯ, ಪ್ರತಿ ಸರಣಿಯಲ್ಲೂ ಸಕ್ಸಸ್​ಫುಲ್​ ಡಿಆರ್​ಎಸ್​​ ತೆಗೆದುಕೊಳ್ಳುವಲ್ಲಿ ಎಡವುತ್ತಿದೆ.

blank

DRS ವಿಚಾರದಲ್ಲಿ ಧೋನಿಯಷ್ಟು ಪರಿಪಕ್ವವಾಗಿ ಡಿಸಿಷನ್ ತೆಗೆದುಕೊಳ್ಳವ ಮತ್ತೊಬ್ಬ ಕ್ರಿಕೆಟಿಗ, ವಿಶ್ವ ಕ್ರಿಕೆಟ್​​ನಲ್ಲಿ ಇಲ್ಲ.. ಒಮ್ಮೆ ಧೋನಿ ಡಿಆರ್​ಎಸ್​​ ಮೊರೆ ಹೋಗ್ತಾರೆ ಅಂದ್ರೆ, ಅದು ಪಕ್ಕ ಔಟ್​ ಅಂತಾನೇ ಎದುರಾಳಿ ಬ್ಯಾಟ್ಸ್​ಮನ್​ ಭಾವಿಸಿ ಬಿಡ್ತಿದ್ರು. ಧೋನಿಯ ನಿಖರತೆ ಸ್ಪಷ್ಟತೆ ಹಾಗಿತ್ತು.

ಧೋನಿ ಇದ್ದಾಗ ಡಿಆರ್​ಎಸ್​ ವಿಚಾರದಲ್ಲಿ ಸಕ್ಸಸ್​ ಕಂಡಿದ್ದ ಭಾರತ, ಮಾಹಿ ನಿವೃತ್ತಿಯ ಬಳಿಕ ಈ ಆಯ್ಕೆಯನ್ನ ಸದ್ಭಳಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದೆ. ಅದೀಗ ಡಿಸಿಷನ್ ರಾಂಗ್ ಸಿಸ್ಟಮ್ ಆಗಿ ಮಾರ್ಪಟ್ಟಿದೆ. ಇದರಿಂದ ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯವೂ ಹೊರತಾಗಲಿಲ್ಲ. ಪಂದ್ಯದ ಮೊದಲ ದಿನದಾಟದಲ್ಲೇ 21ನೇ ಓವರ್​​ ಡಿಆರ್​​ಎಸ್​ ಡ್ರಾಮಾಗೆ ವೇದಿಕೆ ಕಲ್ಪಿಸಿತ್ತು. ಬೂಮ್ರಾ ಬೌಲಿಂಗ್​ನಲ್ಲಿ ಪಂತ್​ ಸಲಹೆಯ ಮೇರೆಗೆ ಕೊಹ್ಲಿ ತೆಗೆದುಕೊಂಡ ಡಿಆರ್​ಎಸ್ ಫೆಲ್ಯೂರ್​​ ಆಯ್ತು.

blank

ಇದನ್ನೂ ಓದಿ: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಬಹುಮಾನಗಳ ಮಹಾಪೂರ; ಏನೆಲ್ಲಾ ಒಲಿದು ಬಂತು..?

ಪಂದ್ಯದ 4ನೇ ದಿನದಾಟದಲ್ಲಿ ರೂಟ್​​ 97 ರನ್​ಗಳಿಸಿದ್ದ ಸಂದರ್ಭದಲ್ಲಿ ಸಿರಾಜ್​ ಸಲಹೆ ಮೇರೆಗೆ ಕೊಹ್ಲಿ ತೆಗೆದು ಕೊಂಡ ರಿವ್ಯೂ ಫೇಲ್​ ಆಗಿತ್ತು. ಆ ರಿವ್ಯೂ ಫೇಲ್​ ಆದ ಪರಿಣಾಮ ಅಭಿಮಾನಿಗಳಿಂದಲೇ ಕೊಹ್ಲಿ ನಗೆ ಪಾಟಲಿಗೀಡಾಗುವಂತೆ ಆಯ್ತು.

ಕೇವಲ ಇದೊಂದೇ ಪಂದ್ಯ ಮಾತ್ರವಲ್ಲ. ಇಂಗ್ಲೆಂಡ್​​ ತಂಡದ ಭಾರತದ ಪ್ರವಾಸದ ಸರಣಿಯೂ ಡಿಆರ್​ಎಸ್​​ ಫೆಲ್ಯೂರ್​​ಗೆ ಸಾಕ್ಷಿಯಾಗಿತ್ತು. ಸರಣಿ ಬಳಿಕ ಸ್ಪಿನ್ನರ್​ ಆರ್​​.ಅಶ್ವಿನ್​ ನೀಡಿದ ಹಲವು ವಿಕೆಟ್​​ಗಳು ಕೈ ತಪ್ಪಲು ಪಂತ್​ ಕಾರಣ ಎಂದು ನೀಡಿದ ಹೇಳಿಕೆಯಂತೂ ಚರ್ಚೆ ಹುಟ್ಟು ಹಾಕಿತ್ತು. ಹೀಗಾಗಿ ಟೀಮ್ ಇಂಡಿಯಾದ ಡಿಆರ್​​ಎಸ್ ವೈಫಲ್ಯಕ್ಕೆ, ವಿಕೆಟ್​ ಕೀಪರ್ ಕಾರಣಾನಾ..? ಅಥವಾ ನಾಯಕ ಕೊಹ್ಲಿ ಕಾರಣಾನಾ..? ಅಥವಾ ಬೌಲರ್​ಗಳು ನೀಡೋ ಸಲಹೆ ಕಾರಣಾನಾ..? ಅನ್ನೋದು ಮತ್ತೆ ಡಿಬೇಟ್​ ಆಗಿ ಮಾರ್ಪಟ್ಟಿದೆ.

 

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಕನಸಿಗೆ ತಣ್ಣೀರೆರೆಚಿದ ಮಳೆ.. ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾ

Source: newsfirstlive.com Source link