ಬಿಗ್​​​ಬಾಸ್​​ ವಿನ್ನರ್​ ಮಂಜು ತವರೂರು ಪಾವಗಡದಲ್ಲಿ ಅಭಿಮಾನಿಗಳ ಸಂಭ್ರಮ

ಬಿಗ್​​​ಬಾಸ್​​ ವಿನ್ನರ್​ ಮಂಜು ತವರೂರು ಪಾವಗಡದಲ್ಲಿ ಅಭಿಮಾನಿಗಳ ಸಂಭ್ರಮ

ತುಮಕೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 8ಕ್ಕೆ ಕೊನೆಗೂ ತೆರೆಬಿದ್ದಿದೆ. ಮಂಜು ಪಾವಗಡ, ಅರವಿಂದ್​ ಹಾಗೂ ದಿವ್ಯ ಉರುಡುಗ ನಡುವೆ ನಡೆದ ಫೈನಲ್​ ಹಣಾಹಣಿಯಲ್ಲಿ ಮಂಜು ಪಾವಗಡ ಬಿಗ್​ಬಾಸ್​​ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಇತ್ತ ಮಂಜು ಗೆಲುವು ಪಡೆಯುತ್ತಿದಂತೆ ತುಮಕೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ನಡೆಸಿದ್ದಾರೆ.

blank

ಮಂಜು ಅವರ ತವರೂರು ಪಾವಗಡದಲ್ಲಿ ಅಭಿಮಾನಿಗಳು ತಡರಾತ್ರಿ ಸಂಭ್ರಮಾಚರಣೆ ನಡೆಸಿದ್ದು, ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಮಂಜು ಪಾವಗಡಗೆ ಸಾಕಷ್ಟು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

blank
ಮಂಜು ಪಾವಗಡಗೆ ಬಿಗ್​ ಬಾಸ್ ವಿಜೇತರಾಗಿದ್ದಕ್ಕೆ 53 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಇನ್ನೂ ಅರವಿಂದ್​ ಕೆ.ಪಿ. ರನ್ನರ್​ ಅಪ್​ ಆಗಿದ್ದು, ದಿವ್ಯ ಉರುಡುಗ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.

blank

Source: newsfirstlive.com Source link