ಕಂಟೈನ್ಮೆಂಟ್ ಝೋನ್​ ಸಂಖ್ಯೆ 169 ಏರಿಕೆ! ಬೆಂಗಳೂರಿಗರು ಎಚ್ಚೆತ್ತುಕೊಳ್ಳದಿದ್ರೆ ಮತ್ತೆ ಲಾಕ್​ಡೌನ್..?

ಕಂಟೈನ್ಮೆಂಟ್ ಝೋನ್​ ಸಂಖ್ಯೆ 169 ಏರಿಕೆ! ಬೆಂಗಳೂರಿಗರು ಎಚ್ಚೆತ್ತುಕೊಳ್ಳದಿದ್ರೆ ಮತ್ತೆ ಲಾಕ್​ಡೌನ್..?

ಬೆಂಗಳೂರು: ಕೋವಿಡ್ ಸೋಂಕು ಇನ್ನೂ ಹೆಚ್ಚಳವಾದ್ರೆ ಬೆಂಗಳೂರು ಮತ್ತೆ ಲಾಕ್​ಡೌನ್ ಆಗುವ ಸಾಧ್ಯತೆ ಇದೆ. ಜನ ಎಚ್ಚೆತ್ತುಕೊಳ್ಳದಿದ್ರೆ ರಾಜಧಾನಿ ಮತ್ತೊಮ್ಮೆ ಸ್ತಬ್ಧವಾಗೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಯಾಕಂದ್ರೆ ದಿನೇ ದಿನೆ ನಗರದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಅಪಾರ್ಟ್​​ಮೆಂಟ್​ಗೆ ಪ್ರಮುಖ ಟಾರ್ಗೆಟ್​ ಆಗಿವೆ. ಹೀಗಾಗಿ ಈಗಾಗಲೇ ಬೆಂಗಳೂರಲ್ಲಿ 169 ಕಡೆ ಮೈಕ್ರೋ ಕಂಟೈನ್ಮೆಂಟ್ ಜಾರಿ ಮಾಡಿಲಾಗಿದೆ. ಮಹಾದೇವಪುರ ಹಾಗೂ ಬೆಂಗಳೂರು ಪೂರ್ವ ವಲಯದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಒಂದು ವೇಳೆ ಇದು ಮುಂದುವರಿದ್ರೆ ವೀಕೆಂಡ್ ಲಾಕ್ ಆದರೂ ಅಚ್ಚರಿ ಇಲ್ಲ. ಯಾಕಂದ್ರೆ ರಾಜ್ಯ ಸರ್ಕಾರ ಈಗಾಗಲೇ 8 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಿದೆ.

ಎಲ್ಲೆಲ್ಲಿ ಎಷ್ಟು ಮೈಕ್ರೋ ಕಂಟೈನ್ಮೆಂಟ್ ಝೋನ್ ಇದೆ..?

  • ಮಹಾದೇವಪುರು-42
  • ಬೆಂಗಳೂರು ಪೂರ್ವ-35
  • ಬೊಮ್ಮನಹಳ್ಳಿ-24
  • ಬೆಂಗಳೂರು ದಕ್ಷಿಣ-20
  • ಯಲಹಂಕ-20
  • ಬೆಂಗಳೂರು ಪಶ್ಚಿಮ-9
  • ಆರ್ ಆರ್ ನಗರ-6
  • ದಾಸರಹಳ್ಳಿ-3

ಇನ್ನು ನಿನ್ನೆ ಒಂದೇ ದಿನ ಬೆಂಗಳೂರಲ್ಲಿ ಹೊಸದಾಗಿ 348 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ನಗರವೊಂದರಲ್ಲೇ ಸೋಂಕಿತರ ಸಂಖ್ಯೆ 12,30,486ಕ್ಕೆ ಏರಿಕೆಯಾಗಿದೆ. ಇನ್ನು 366 ಮಂದಿ ಡಿಸ್ಚಾರ್ಜ್​ ಆಗಿದ್ದು, ಇದುವರೆಗೂ ಬೆಂಗಳೂರಲ್ಲಿ 12,06,078 ಮಂದಿ ಕೊರೊನಾದಿಂದ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ನಿನ್ನೆ ಕೊರೊನಾಗೆ ಒಂದು ಸಾವನ್ನಪ್ಪಿದೆ.

Source: newsfirstlive.com Source link