ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

– ಶುಭಾ, ನಿಧಿ ಕುರಿತು ವಿನ್ನರ್ ಮಾತು

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಆರಂಭದಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಒಂದು ಜೋಡಿಯಾಗಿದ್ದರೆ, ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಇನ್ನೊಂದು ಜೋಡಿಯಾಗಿ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ವಿನ್ನರ್ ಆದ ಬಳಿಕ ಮಂಜು ಅವರು ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

ಹೌದು. ಬಿಗ್ ಬಸಸ್ ಮನೆಯಲ್ಲಿ ದಿವ್ಯಾ ಜೊತೆಗಿನ ಗೆಳೆತನದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮನಬಿಚ್ಚಿ ಮಾತನಾಡಿದ ಮಂಜು, ದಿವ್ಯಾ ಸುರೇಶ್ ನನ್ನ ಬೆಸ್ಟ್ ಫ್ರೆಂಡ್. ಬಿಗ್ ಬಾಸ್ ಮನೆಯೊಳಗಡೆ ಹೋದಾಗ ಅಲ್ಲಿ ನಮ್ಮವರು ಅಂತ ಯಾರೂ ಇರಲ್ಲ. ಆಗ ಹೇಳಿಕೊಳ್ಳೋಕೆ ಒಬ್ಬರು ಬೇಕು ಅನಿಸುತ್ತದೆ. ಆಗ ನಮ್ಮ ಮೆಂಟಾಲಿಟಿಗೆ ಮ್ಯಾಚ್ ಆಗೋರು ಒಬ್ಬರು ಸಿಗುತ್ತಾರೆ. ಹೀಗೆ ನನಗೆ ದಿವ್ಯಾ ಸುರೇಶ್ ಸಿಕ್ಕಿದ್ದಾಳೆ. ತುಂಬಾ ಸಪೋರ್ಟ್ ಮಾಡುತ್ತಿದ್ದಳು. ಹಾಗೆಯೇ ಒಳ್ಳೆಯ ಸ್ಪರ್ಧಿ ಕೂಡ. ಒಟ್ಟಿನಲ್ಲಿ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಂದ್ರು. ಇದನ್ನೂ ಓದಿ: ಇಷ್ಟೊಂದು ದೊಡ್ಡ ಮೊತ್ತವನ್ನು ಜೀವನದಲ್ಲೇ ನೋಡಿಲ್ಲ: ಮಂಜು

ಮನೆಯೊಳಗಡೆ ಹೋದಾಗ ಸೆಲೆಬ್ರಿಗಳಾದ ನಿಧಿ, ಶುಭಾ ಹಾಗೂ ಶಂಕರ್ ಅಶ್ವಥ್ ನೋಡಿ ಹೆಂಗಪ್ಪಾ ಇಲ್ಲಿ ಇರೋದು ಅಂದುಕೊಂಡಿದ್ದೆ. ಆದರೆ ಹೋಗ್ತಾ ಹೋಗ್ತಾ ಎಲ್ಲರೂ ನನಗೆ ಕ್ಲೋಸ್ ಆದ್ರು. ಶುಭಾ ಅಂತೂ ಈಗ ನನಗೆ ಪ್ರೀತಿಯ ಗುಂಡಮ್ಮ ಆಗಿದ್ದಾಳೆ. ಇನ್ನು ಬಾಲಿವುಡ್ ನಲ್ಲಿ ಸಿನಿಮಾ ಮಾಡಿರುವ ನಿಧಿಸುಬ್ಬಯ್ಯ ಅವರನ್ನು ನಿಧಿ, ಪಿಪಿಇ ಕಿಟ್ ಅಂತೆಲ್ಲಾ ಕರೆಯೋಕೆ ಆರಂಭಿಸಿದೆ. ಇತ್ತ ಶಂಕರ್ ಅಣ್ಣನನ್ನೂ ರೇಗಿಸ್ತೀನಿ. ಒಟ್ಟಿನಲ್ಲಿ ಸದ್ಯ ದೊಡ್ಡ ದೊಡ್ಡವರ ಜೊತೆ ಇದ್ದು ಇಂದು ನಾನು ಗೆದ್ದಿರೋದು ತುಂಬಾನೆ ಖುಷಿ ಇದೆ ಎಂದು ಮಂಜು ಹೇಳಿದರು. ಇದನ್ನೂ ಓದಿ: ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು

blank

ಒಟ್ಟಿನಲ್ಲಿ ಮನರಂಜನೆ ಹಾಗೂ ಉತ್ತಮ ಸ್ಪರ್ಧೆಯಿಂದಲೇ ವೀಕ್ಷಕರ ಗಮನ ಸೆಳೆಯುವ ಮೂಲಕ ಲ್ಯಾಗ್ ಮಂಜು ಅವರು ವಿನ್ನರ್ ಆಗಿ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

Source: publictv.in Source link