ಸಾಮರ್ಥ್ಯ ಪ್ರೂವ್ ಮಾಡಿದ ಸಿರಾಜ್, ಜಡೇಜಾ: ‘ಈ’ 3 ಹಿರಿಯ ಆಟಗಾರರ ಸ್ಥಾನಕ್ಕೆ ಬಂತಾ ಕುತ್ತು..?

ಸಾಮರ್ಥ್ಯ ಪ್ರೂವ್ ಮಾಡಿದ ಸಿರಾಜ್, ಜಡೇಜಾ: ‘ಈ’ 3 ಹಿರಿಯ ಆಟಗಾರರ ಸ್ಥಾನಕ್ಕೆ ಬಂತಾ ಕುತ್ತು..?

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಅಂತ್ಯ ಕಂಡಿದೆ. ಇದೇ ಪಂದ್ಯ ಕೆಲ ಆಟಗಾರರ ಭವಿಷ್ಯ ಮುಂದೇನು ಎಂಬ ಪ್ರಶ್ನೆಯ ಹುಟ್ಟಿಗೂ ಕಾರಣವಾಗಿದೆ.

ಆರ್​.ಅಶ್ವಿನ್, ಇಶಾಂತ್ ಶರ್ಮಾ, ಮಯಾಂಕ್ ಅಗರ್ವಾಲ್ ಈ ಮೂವರು ನ್ಯಾಟಿಂಗ್​ಹ್ಯಾಮ್ ಟೆಸ್ಟ್​ನಲ್ಲಿ ಕಣಕ್ಕಿಳಿಯೋದು ಬಹುತೇಕ ಕನ್ಫರ್ಮ್ ಆಗಿತ್ತು. ಆದ್ರೆ, ಕನ್ಕಷನ್​​ನಿಂದಾಗಿ ಮಯಾಂಕ್ ಮೊದಲ ಪಂದ್ಯದಿಂದ ಔಟ್​ ಆದರೆ, ಕ್ಯಾಪ್ಟನ್ ಕೊಹ್ಲಿಯ ಅಚ್ಚರಿ ನಿರ್ಧಾರದಿಂದ ಆರ್​.ಅಶ್ವಿನ್, ಇಶಾಂತ್ ಶರ್ಮಾ ಬೆಂಚ್​ ಕಾಯಬೇಕಾಯ್ತು. ಇದೀಗ ಈ ಮೂವರು ಆಟಗಾರರು ವಿದೇಶಗಳಲ್ಲಿ ಬೆಂಚ್​ಗೆ ಸೀಮಿತವಾಗಿ ಬಿಡ್ತಾರಾ..? ಇಲ್ಲ ಕಳೆದುಹೋಗ್ತಾರಾ..? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿವೆ.

ಇದನ್ನೂ ಓದಿ: RR & KKRಗೆ ಗುಡ್​​ನ್ಯೂಸ್​​: ಶಕೀಬ್​​-ಮುಸ್ತಫಿಜುರ್​ ಐಪಿಎಲ್​ ಹಾದಿ ಸುಗಮ

blank

ವಿದೇಶಗಳಲ್ಲಿ ಸೈಡ್​ಲೈನ್ ಆಗ್ತಾರಾ ಅಶ್ವಿನ್​-ಇಶಾಂತ್..?
ಸದ್ಯ ಮೊದಲ ಪಂದ್ಯದಲ್ಲಿ ಬೆಂಚ್ ಕಾದಿರುವ ಇಶಾಂತ್ ಶರ್ಮಾ, ಇಂಗ್ಲೆಂಡ್ ಕಂಡೀಷನ್ಸ್​ಗೆ ಹೇಳಿ ಮಾಡಿಸಿರುವ ಬೌಲರ್. ಇನ್ ಆ್ಯಂಡ್ ಔಟ್​ ಸ್ವಿಂಗ್​ ಎಸೆತಗಳಿಂದ ಬ್ಯಾಟ್ಸ್​ಮನ್​ಗಳನ್ನ ಕೆಂಗಡಿಸುವ ಸಾಮರ್ಥ್ಯವೂ ಇದೆ. ಆದ್ರೆ, ಇಶಾಂತ್​ ಬದಲಿಗೆ ಕಣಕ್ಕಿಳಿದ ಯುವ ವೇಗಿ ಸಿರಾಜ್, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಹೀಗಾಗಿ ಮುಂದಿನ ಟೆಸ್ಟ್​ನಲ್ಲೂ ಇಶಾಂತ್ ಬೆಂಚ್ ಕಾಯೋದು ಅನಿವಾರ್ಯವಾಗೋ ಸಾಧ್ಯತೆ ಎದುರಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಕನಸಿಗೆ ತಣ್ಣೀರೆರೆಚಿದ ಮಳೆ.. ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾ

blank

ಟೀಮ್ ಇಂಡಿಯಾದ ಓವರ್​ಸೀಸ್ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ಅಶ್ವಿನ್​ ಕಥೆ ವಿಭಿನ್ನವಾಗಿದೆ. ತಂಡದ ಮೊದಲ ಆಯ್ಕೆಯಾಗಿದ್ದ ಅಶ್ವಿನ್​​​​​​​​​​​​​​​​​​​​​​​​​​​​​​, ಜಡೇಜಾ ನೀಡಿದ ಪ್ರದರ್ಶನದಿಂದ ವಿದೇಶದಲ್ಲಿ ಹಿಂದುಳಿದು ಬಿಡುವ ಆತಂಕಕ್ಕೆ ಸಿಲುಕಿದ್ದಾರೆ. ಜಡೇಜಾ ಕೆಳ ಕ್ರಮಾಂಕ ಕಣಕ್ಕಿಳಿದು ಲೀಲಾಜಾಲವಾಗಿ ರನ್​​ ಕಲೆ ಹಾಕಿದ್ದು ಅಶ್ವಿನ್​ ಸ್ಥಾನಕ್ಕೆ ಕುತ್ತು ತಂದಿದೆ.

ಕಂಕಷನ್​ ಇಂಜುರಿಗೆ ತುತ್ತಾಗಿದ್ದ ಮಯಾಂಕ್​ ಅಗರ್​ವಾಲ್​ ಸ್ಥಾನದಲ್ಲಿ ಕಣಕ್ಕಿಳಿದ ಕೆಎಲ್​ ರಾಹುಲ್​ ಪ್ರಾಮಿಸಿಂಗ್​ ಪ್ರದರ್ಶನ ನೀಡಿದ್ದಾರೆ. ರಾಹುಲ್ ನೀಡಿದ ಈ ಪ್ರದರ್ಶನ, ಇದೀಗ ಮಯಾಂಕ್​ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿಸಿದೆ.

ಒಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನೇ ಆ ಮೂವರು ಎನ್​ಕ್ಯಾಶ್ ಮಾಡಿಕೊಂಡಿರೋದು ಉಳಿದ ಪಂದ್ಯಗಳಲ್ಲಿ ಸ್ಥಾನವನ್ನಂತೂ ಖಾತ್ರಿಪಡಿಸಿದೆ. ಹೀಗಾಗಿ ಬೆಂಚ್ ಕಾದ ಈ ತ್ರಿಮೂರ್ತಿಗಳ ಮುಂದಿನ ಭವಿಷ್ಯ ಏನಾಗುತ್ತೆ ಅನ್ನೋದು ಕುತೂಹಲವನ್ನ ಹುಟ್ಟುಹಾಕಿದೆ.

ಇದನ್ನೂ ಓದಿ: ಧೋನಿ ಬಳಿಕ DRS ಆಯ್ಕೆಯಲ್ಲಿ ಟೀಂ ಇಂಡಿಯಾ ಫೇಲ್; ಟ್ರೋಲ್​ ಆದ ಕೊಹ್ಲಿ..!

Source: newsfirstlive.com Source link