ಇಟ್ಟಿರೋ ಹೆಜ್ಜೆ ಹಿಂದೆ ತೆಗೆಯೋದಿಲ್ವಂತೆ ‘ಭಜರಂಗಿ’..!

ಇಟ್ಟಿರೋ ಹೆಜ್ಜೆ ಹಿಂದೆ ತೆಗೆಯೋದಿಲ್ವಂತೆ ‘ಭಜರಂಗಿ’..!

ಗಣೇಶ ಹಬ್ಬಕ್ಕೆ ಭಜರಂಗಿ-2 ಬಿಡುಗಡೆ ಮಾಡೋದಾಗಿ ಚಿತ್ರತಂಡ ಈಗಾಗಲೇ ಅನೌನ್ಸ್​ ಮಾಡಿದೆ. ಕೊರೊನಾ 3ನೇ ಅಲೆಗೆ ಭಜರಂಗಿ ರಿಲೀಸ್​ ಆಗುತ್ತೋ ಇಲ್ಲ ಮುಂದೆ ಹೋಗುತ್ತ ಅನ್ನೋ ಕನ್ಫ್ಯೂಸ್​​ನಲ್ಲಿದ್ದಾರೆ ಶಿವಣ್ಣ ಅಭಿಮಾನಿಗಳು. ಸದ್ಯ ಟಗರು ಶಿವನ ಹುಡುಗರ ಈ ಎಲ್ಲಾ ಗೊಂದಲಕ್ಕೆ ಈಗ ಉತ್ತರ ಸಿಕ್ಕಿದೆ.

blank

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳ ಅಡ್ಡದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ಅಭಿಮಾನಿ ದೇವರುಗಳಲ್ಲಿ ಕುತೂಹಲದ ಅರಮನೆಯಲ್ಲೆ ನಿರ್ಮಾಣ ಮಾಡಿದ್ದ, ಸೆಂಚುರಿ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರನ’ಭಜರಂಗಿ-2′ ಸಿನಿಮಾದ ರಿಲೀಸ್​ ಡೇಟ್​ಅನ್ನು ಅನೌನ್ಸ್​ ಮಾಡಿದೆ ಚಿತ್ರತಂಡ.

ಲಾಡ್​ ನಂತ್ರ ಸರ್ಕಾರ ಥಿಯೇಟರ್ ಒಪನ್ ಗೆ ಅನುಮತಿ ನೀಡ್ತಿದ್ದಂತೆ ಭಜರಂಗಿ-೨ ತಂಡ ರಿಲೀಸ್​ ಅನೌನ್ಸ್​ ಮಾಡಿದೆ. ಭಜರಂಗಿ ತಂಡ ಸಿನಿಮಾ ರಿಲೀಸ್​ ಡೇಟ್​ ಘೋಷಣೆ ಮಾಡಿದ ನಂತ್ರ ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡಿದೆ. ಪರಿಸ್ಥಿತಿಯ ಅರಿತ ಸರ್ಕಾರ ಇನ್ನೂ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ ನೀಡಿಲ್ಲ. ಬದಲಿಗೆ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಹಾಗೂ ನೈಟ್​ ಕರ್ಪ್ಯೂ ಘೋಷಣೆ ಮಾಡಿದೆ. ಯಾವಾಗ ಕೊರೊನಾ 3ನೇ ಅಲೆಯ ಅತಂಕ ಶುರುವಾಯ್ತೋ ಆಗಲೇ ಭಜರಂಗಿ-2 ನಿಜವಾಗ್ಲೂ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತ ಅನ್ನೋ ಪ್ರಶ್ನೆ ಶಿವಣ್ಣನ ಅಭಿಮಾನಿಗಳಲ್ಲಿ ಶುರುವಾಗಿದೆ.

blank

ಹ್ಯಾಟ್ರಿಕ್​ ಹೀರೋ ಅಭಿಮಾನಿಗಳ ಈ ಪ್ರಶ್ನೆಗೆ ಚಿತ್ರಪ್ರೇಮಿಗಳೇ ತಂಡಕ್ಕೆ ಉತ್ತರ ಸಿಕ್ಕಿದೆ. ಇನ್ನು ಆ ಉತ್ತರವನ್ನು ಕೇಳಿದ್ರೆ ಶಿವಣ್ಣನ ಅಭಿಮಾನಿ ಬಳಗ ಪುಲ್​ ಖುಷ್​ ಆಗೋದು ಗ್ಯಾರಂಟಿ. ಹೌದು ಶಿವಣ್ಣ ಅಭಿನಯದ ಭಜರಂಗಿ 2 ಅಂದು ಕೊಂಡಂತೆ ಸೆಪ್ಟೆಂಬರ್​ 10ಕ್ಕೆ ಥಿಯೇಟರ್​ಗೆ ಬರೋದು ಪಕ್ಕಾ. ಇನ್ನು ಈ ವಿಷ್ಯವನ್ನು ನಿರ್ಮಾಪಕ ಜಯಣ್ಣ ನ್ಯೂಸ್​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

blank

ಸರ್ಕಾರ ಚಿತ್ರಮಂದಿರಗಳಿಗೆ 100 ಪರ್ಸೆಂಟ್​ ಅನುಮತಿ ನೀಡದೆ ಇದ್ರು ಪರ್ವಾಗಿಲ್ಲ, ಯಾವುದೇ ಕಾರಣಕ್ಕೂ ಭಜರಂಗಿ-2 ರಿಲೀಸ್​ ಡೇಟ್​ ಮುಂದೆ ಹೋಗಲ್ಲ. ದಳಪತಿ ವಿಜಯ್​ ಅಭಿನಯದ ‘ಮಾಸ್ಟರ್’ ಚಿತ್ರವೂ 50 ಪರ್ಸೆಂಟ್ ಭರ್ತಿಯಲ್ಲಿ ರಿಲೀಸ್​ ಆಯ್ತು. ಅಲ್ಲದೆ ಗಲ್ಲಾ ಪೆಟ್ಟಿಗೆಯಲ್ಲೂ ಗೆದ್ದಿದೆ. ಅದೇ ರೀತಿ ನಾವು ಕೂಡು 50 ಪರ್ಸೆಂಟ್​ ಅಲ್ಲೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಗಣೇಶ ಹಬ್ಬದಂದೆ ಭಜರಂಗಿ 2 ಚಿತ್ರವನ್ನು ರಿಲೀಸ್​ ಮಾಡ್ತೇವೆ ಎಂದು ನಿರ್ಮಾಪಕ ಜಯಣ್ಣ ಹೇಳಿದ್ದಾರೆ.

ಅದೇನೆ ಇರಲಿ ಕೊರೊನಾ 3ನೇ ಅಲೆಯ ಭಯದಲ್ಲಿ ಚಿತ್ರರಂಗ ಎಲ್ಲಿ ಕೊಚ್ಚಿ ಹೋಗುತ್ತೋ ಅನ್ನೋ ಭಯ ಇರುವಾಗ, ಭಜರಂಗಿ 2 ಚಿತ್ರತಂಡ ಧೈರ್ಯ ಮಾಡಿ ಪ್ರೇಕ್ಷಕ ಪ್ರಭುಗಳ ತೇರನ್ನ ಎಳೆಯೋಕೆ ಮನಸ್ಸು ಮಾಡಿದ್ದಾರೆ.

Source: newsfirstlive.com Source link