ನಾಟಿಂಗ್​ಹ್ಯಾಮ್​ ಟೆಸ್ಟ್​ನಲ್ಲೂ ಕಾಡಿದ ಸಮಸ್ಯೆ -ಟೀಮ್ ಇಂಡಿಯಾಗೆ ಜಡೇಜಾನೇ ಉತ್ತರ!

ನಾಟಿಂಗ್​ಹ್ಯಾಮ್​ ಟೆಸ್ಟ್​ನಲ್ಲೂ ಕಾಡಿದ ಸಮಸ್ಯೆ -ಟೀಮ್ ಇಂಡಿಯಾಗೆ ಜಡೇಜಾನೇ ಉತ್ತರ!

ಇಂಗ್ಲೆಂಡ್​ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಉತ್ತಮ ಪ್ರದರ್ಶನವನ್ನ ನೀಡಿದೆ. ಆದ್ರೆ, ಈ ಅಮೋಘ ಪ್ರದರ್ಶನದ ನಡುವೆಯೂ ತಂಡದಲ್ಲಿನ ಸಮಸ್ಯೆ ಮಾತ್ರ ವಿರಾಟ್ ಪಡೆಯನ್ನ ಬಿಟ್ಟು ಬಿಡದೇ ಕಾಡ್ತಿದೆ.

ಟೀಮ್​ ಇಂಡಿಯಾದ ವೀಕ್​ನೆಸ್ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲೂ ಮರುಕಳಿಸಿದೆ. ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆರ ಕಳೆದ 3 ವರ್ಷಗಳ ವೈಫಲ್ಯ ನಾಟಿಂಗ್​ಹ್ಯಾಮ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಮರುಕಳಿಸ್ತು. ನಂಬಿಕಸ್ತ ಬ್ಯಾಟ್ಸ್​ಮನ್​ಗಳಾಗಿ ಗುರುತಿಸಿಕೊಂಡಿದ್ದ ಈ ಆಟಗಾರರು ಮತ್ತೆ ಮುಗ್ಗರಿಸಿದ್ರು.

blank

ಜಡೇಜಾಗೆ ಬಡ್ತಿ ನೀಡಿದರೆ ಸಮಸ್ಯೆಗೆ ಸಿಗುತ್ತಾ ಮುಕ್ತಿ?
ಕಳೆದ ಕೆಲ ಪಂದ್ಯಗಳಿಂದ ಮಧ್ಯಮ ಕ್ರಮಾಂಕ ರನ್​ಗಳಿಸೋಕೆ ಪರದಾಡ್ತಿದೆ. ಆದ್ರೆ, 7ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿರುವ ಜಡ್ಡು ಮಾತ್ರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. 2018ರಿಂದ ಸ್ಥಿರ ಪ್ರದರ್ಶನ ನೀಡ್ತಿರುವ ಜಡೇಜಾ, ಆಸ್ಟ್ರೇಲಿಯಾ ಪ್ರವಾಸದಲ್ಲೂ ಮಿಂಚಿದ್ರು. ಇದೀಗ ಇಂಗ್ಲೆಂಡ್​​​ ವಿರುದ್ಧದ ಮೊದಲ ಟೆಸ್ಟ್​ನಲ್ಲೂ ಅಬ್ಬರಿಸಿದ್ದಾರೆ. ಹೀಗಾಗಿ 2018ರಿಂದ 50.88ರ ಸರಾಸರಿಯಲ್ಲಿ ಬ್ಯಾಟ್ ಬೀಸಿರೋ ಜಡೇಜಾಗೆ ಬಡ್ತಿ ನೀಡಿದ್ರೆ ಸಮಸ್ಯೆಗೆ ಮುಕ್ತಿ ಸಿಗಬಹುದು ಅನ್ನೋ ಚರ್ಚೆ ಹುಟ್ಟಿದೆ.

blank

ಜಡೇಜಾಗೆ ಬಡ್ತಿ ನೀಡಿದ್ರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಂತೆ!
ಹೌದು, ಬ್ಯಾಟಿಂಗ್​ನಲ್ಲಿ ಜಾಡೇಜಗೆ ಬಡ್ತಿ ನೀಡಿದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದಂತಾಗೋದು ಪಕ್ಕಾ.. ಬ್ಯಾಟಿಂಗ್​​ ಜೊತೆಗೆ ಬೌಲಿಂಗ್ ವಿಭಾಗಕ್ಕೂ ಬಲ ಬಂದಂತಾಗುತ್ತೆ.. ಜೊತೆಗೆ ಒಬ್ಬ ಬ್ಯಾಟ್ಸ್​ಮನ್​ ಆಗಿ ಜಡೇಜಾರನ್ನ ಪರಿಗಣಿಸಿದ್ದೇ ಆದ್ರೆ, ಅಶ್ವಿನ್​​ಗೂ ಹನ್ನೊಂದರಲ್ಲಿ ಸ್ಥಾನ ನೀಡಬಹುದಾಗಿದೆ. ಕೇರಂ ಸ್ಪಿನ್ನರ್​ ಅಸ್ತ್ರದ ನೆರವಿನಿಂದ ಇಂಗ್ಲೆಂಡ್​​ ಬ್ಯಾಟ್ಸ್​ಮನ್​ಗಳನ್ನ ಕಟ್ಟಿ ಹಾಕಬಹುದು ಅನ್ನೋ ವಾದವೂ ಎದ್ದಿದೆ.

ಈ ಎಲ್ಲಾ ವಾದಕ್ಕೆ ಪೂರಕವೆಂಬಂತೆ ದೇಶಿ ಕ್ರಿಕೆಟ್​ನಲ್ಲಿ ಮಿಡಲ್​ ಆರ್ಡರ್​ನಲ್ಲಿ ಬ್ಯಾಟ್​ ಬೀಸಿದ ಅನುಭವವೂ ಜಡ್ಡುಗಿದೆ. ಅದಲ್ಲದೇ ಬಡ್ಡಿ ಪಡೆದುಕೊಂಡು ಕಣಕ್ಕಿಳಿದು 3 ಶತಕ ಸಿಡಿಸಿದ ದಾಖಲೆಯೂ ಬೆನ್ನಿಗಿದೆ. ಹೀಗಾಗಿ ಜಡೇಜಾಗೆ ಬಡ್ತಿ ನೀಡಿದ್ರೆ ತಂಡಕ್ಕೆ ಲಾಭವೇ ಆಗಲಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಈ ಬಗ್ಗೆ ಟೀಮ್ ಮ್ಯಾನೇಜ್​ಮೆಂಟ್ ಏನು ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

blank

Source: newsfirstlive.com Source link