ಆಫ್ಘಾನ್​​ನಲ್ಲಿ ತಾಲಿಬಾನಿಗಳ ಹೇಯ ಕೃತ್ಯ; ಟೈಟ್​ ಆಗಿರೋ ಬಟ್ಟೆ ಧರಿಸಿದ್ಕೆ ಯುವತಿಗೆ ಗುಂಡಿಟ್ಟ ಉಗ್ರರು

ಆಫ್ಘಾನ್​​ನಲ್ಲಿ ತಾಲಿಬಾನಿಗಳ ಹೇಯ ಕೃತ್ಯ; ಟೈಟ್​ ಆಗಿರೋ ಬಟ್ಟೆ ಧರಿಸಿದ್ಕೆ ಯುವತಿಗೆ ಗುಂಡಿಟ್ಟ ಉಗ್ರರು

ಟೈಟಾಗಿರೋ ಬಟ್ಟೆ ಧರಿಸಿದ್ದಾಳೆ ಎಂದು ರೊಚ್ಚಿಗೆದ್ದ ತಾಲಿಬಾನ್ ಉಗ್ರರು ಯುವತಿಯೊಬ್ಬರನ್ನ ಭೀಕರವಾಗಿ ಹತ್ಯೆ ಮಾಡಿದ ಘಟನೆ ಆಫ್ಘಾನಿಸ್ತಾನದ ಬಲ್ಖ್ ಪ್ರಾಂತ್ಯದಲ್ಲಿ ನಡೆದಿದೆ.

ಸಮರ್ ಖಂದ್​ ಅನ್ನೋ ಗ್ರಾಮದಲ್ಲಿ ಉಗ್ರರು ಯುವತಿಯನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಈ ಗ್ರಾಮವು ತಾಲಿಬಾನ್ ಉಗ್ರರ ಸುಪರ್ದಿಯಲ್ಲಿದೆ ಅಂತಾ ಆಫ್ಘಾನಿಸ್ತಾನದ ರೇಡಿಯೋ ಆಜಾದಿ ವರದಿ ಮಾಡಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಗುಂಡಿಟ್ಟು ಸಾಯಿಸಿದ ಯುವತಿಗೆ ಕೇವಲ 21 ವರ್ಷ. ಆಕೆಯ ಹೆಸರು ನಜಾನಿನ್. ಮನೆಯಿಂದ ವಾಹನದ ಮೇಲೆ ಹೊರಗಡೆ ಹೋಗುತ್ತಿದ್ದಾಗ ಗುಂಡಿಟ್ಟು ಸಾಯಿಸಿದ್ದಾರೆ. ಇನ್ನು ಈ ಮಹಿಳೆ ಬುರ್ಕಾವನ್ನ ಧರಿಸಿದ್ದಳು ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಎಂದೇ ತಾಲಿಬಾನ್​​ನಿಂದ ಪತ್ರಕರ್ತ ದ್ಯಾನಿಶ್ ಸಿದ್ದಿಕಿ ಹತ್ಯೆ; ದೇಹಕ್ಕೆ 12 ಗುಂಡು, ಮುಖದ ಮೇಲೆ ಗಾಡಿ

ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ವಾಪಸ್ಸಾಗುತ್ತಿದ್ದಂತೆಯೇ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ತಾಲಿಬಾನಿಗಳ ವಿರುದ್ಧ ಸುದ್ದಿ ಮಾಡುತ್ತಿದ್ದ ದ್ಯಾನಿಶ್ ಸಿದ್ದಿಕಿಯವರನ್ನ ಹತ್ಯೆಗೈದ ಬೆನ್ನಲ್ಲೇ ಇದೀಗ ಸರ್ಕಾರಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥನನ್ನ ಕೊಲೆ ಮಾಡುವ ಮೂಲಕ ಬೆಚ್ಚಿಬೀಳಿಸಿದೆ. ಇತ್ತೀಚೆಗೆ ತಾಲಿಬಾನ್ ಉಗ್ರರು ಸರ್ಕಾರದ ಹಿರಿಯ ಆಡಳಿತಾಧಿಕಾರಿಗಳನ್ನ ಗುರಿಯಾಗಿಸುವುದಾಗಿ ವಾರ್ನಿಂಗ್ ಮಾಡಿದ್ದರು.

ಇದನ್ನೂ ಓದಿ: ತಾಲಿಬಾನಿಗಳ ಮತ್ತೊಂದು ಭೀಕರ ಕೃತ್ಯ; ಆಫ್ಘಾನ್ ಸರ್ಕಾರದ ಮಾಧ್ಯಮ ಮುಖ್ಯಸ್ಥನ ಹತ್ಯೆ

ಇದನ್ನೂ ಓದಿ: ರಾಕೆಟ್​ ದಾಳಿ ಬೆನ್ನಲ್ಲೇ ಅಫ್ಘಾನಿಸ್ತಾನ್​​​ ಭದ್ರತಾ ಪಡೆಯಿಂದ ಏರ್​ಸ್ಟ್ರೈಕ್​ ; 254 ತಾಲಿಬಾನ್​​ ಉಗ್ರರು ಉಡೀಸ್

ಇದನ್ನೂ ಓದಿ: 350 ಕ್ಕೂ ಹೆಚ್ಚು ಪಾಕಿಸ್ತಾನಿ ತಾಲಿಬಾನ್ ಉಗ್ರರ ಹುಟ್ಟಡಗಿಸಿದ ಆಫ್ಘಾನಿಸ್ತಾನ

Source: newsfirstlive.com Source link