ಮೊದಲ ಬಾರಿಗೆ UNSC ಸಭೆಗೆ ಮೋದಿ ಅಧ್ಯಕ್ಷತೆ; ಪುಟಿನ್ ಸೇರಿ ಹಲವು ರಾಷ್ಟ್ರ ನಾಯಕರು ಭಾಗಿ

ಮೊದಲ ಬಾರಿಗೆ UNSC ಸಭೆಗೆ ಮೋದಿ ಅಧ್ಯಕ್ಷತೆ; ಪುಟಿನ್ ಸೇರಿ ಹಲವು ರಾಷ್ಟ್ರ ನಾಯಕರು ಭಾಗಿ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಾಗರ ಭದ್ರತೆ ಕುರಿತು ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಯಲಿದೆ. ಇಂದು ಸೋಮವಾರ ಸಂಜೆ 5.30ಕ್ಕೆ ನಡೆಯಲಿರುವ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಸೇರಿದಂತೆ ಹಲವು ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ.

ಸಾಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಮತ್ತು ಅಭದ್ರತೆಯನ್ನು ಪರಿಣಾಮಕಾರಿಯಾಗಿ ಹೇಗೆ ಎದುರಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಗರ ವಲಯದಲ್ಲಿ ಹಲವು ದೇಶಗಳ ನಡುವೆ ಸಮನ್ವಯ ಕೊರತೆ ಎದುರಾಗಿದೆ. ಹೀಗಾಗಿ ಇದನ್ನು ಬಲಪಡಿಸುವ ಮಾರ್ಗಗಳ ಕುರಿತು ಇಲ್ಲಿ ಚರ್ಚೆ ನಡೆಸಲಾಗುತ್ತಿದೆ.

ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಇದೇ ಮೊದಲ ಬಾರಿಗೆ ಸಮುದ್ರ ಮಟ್ಟದ ಭದ್ರತೆಯನ್ನು ಸಮಗ್ರ ರೀತಿಯಲ್ಲಿ ಚರ್ಚಿಸುವ ಸಭೆಯೊಂದು ಆಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಈ ಕುರಿತು ಮುಕ್ತವಾಗಿ ಚರ್ಚಿಸಿ ಒಂದು ವಿಶೇಷವಾದ ಕಾರ್ಯಸೂಚಿ ತಯಾರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಚರ್ಚೆಗೆ ಮೋದಿ ಅಧ್ಯಕ್ಷತೆ -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

ಒಂದು ದೇಶದಿಂದ ಸಮುದ್ರ ಭದ್ರತೆಯ ವೈವಿಧ್ಯಮಯ ಅಂಶಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಎಲ್ಲಾ ದೇಶಗಳು ಗಂಭೀರವಾಗಿ ಪರಿಗಣಿಸಬೇಕು. ಕಡಲ ಭದ್ರತೆಗೆ ಸಮಗ್ರ ವಿಧಾನವು ಕಾನೂನು ಬದ್ಧವಾಗಿರಬೇಕು. ಕಡಲ ವಲಯದಲ್ಲಿ ಬರುವ ಬೆದರಿಕೆಗಳನ್ನು ಎದುರಿಸಬೇಕು ಎಂಬುದು ಈ ಸಭೆಯ ಉದ್ದೇಶ.

Source: newsfirstlive.com Source link