2ನೇ ಹಂತದ ​IPLಗೆ ನೂತನ ಕಟ್ಟುನಿಟ್ಟಿನ ನಿಯಮಗಳನ್ನು ಹೊರತಂದ ಬಿಸಿಸಿಐ

2ನೇ ಹಂತದ ​IPLಗೆ ನೂತನ ಕಟ್ಟುನಿಟ್ಟಿನ ನಿಯಮಗಳನ್ನು ಹೊರತಂದ ಬಿಸಿಸಿಐ

ಈ ಬಾರಿ ಐಪಿಎಲ್​ ಅನ್ನ ಭಾರತದಲ್ಲೇ ಆಯೋಜಿಸಿ ಯಡವಟ್ಟು ಮಾಡಿಕೊಂಡ ಬಿಸಿಸಿಐ ದೊಡ್ಡ ಪಾಠ ಕಲಿತಿದೆ. ಇದೀಗ ಯುಇಎನಲ್ಲಿ 2ನೇ ಹಂತದ ಆಯೋಜನೆಗೆ ಸಿದ್ಧತೆ ನಡೆಸಿರೋ ಬಿಸಿಸಿಐ, ಆಟಗಾರರ ಸುರಕ್ಷತೆಗೆ ಸಂಬಂಧಿಸಿದಂತೆ ಕಟ್ಟು ನಿಯಮಗಳನ್ನ ಜಾರಿಗೊಳಿಸಿದೆ.

ಸೆಪ್ಟೆಂಬರ್​ 19ರಿಂದ ಎರಡನೇ ಹಂತದ ಐಪಿಎಲ್​ ಯುಎಇನಲ್ಲಿ ಮರು ಆಯೋಜನೆಯಾಗಲಿದ್ದು, ಬಿಸಿಸಿಐ ಅಂತಿಮ ಹಂತದ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಕಳೆದ ಬಾರಿ ಕೊರೊನಾ ನಡುವೆಯೂ ಯುಎಇನಲ್ಲಿ ನಡೆದ 13ನೇ ಆವೃತ್ತಿಯ IPL​ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆದರೆ 14ನೇ ಆವೃತ್ತಿಯನ್ನ ಭಾರತದಲ್ಲಿ ಆಯೋಜಿಸಿದ್ದ ಬಿಸಿಸಿಐ ಯಡವಿತ್ತು. ಹೀಗಾಗಿ ಉಳಿದ ಪಂದ್ಯಗಳ ಆಯೋಜನೆಗೆ ಬಿಸಿಸಿಐ, ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಿದೆ.

blank

ವರುಣ್ ಚಕ್ರವರ್ತಿ, ವೃದ್ಧಿಮಾನ್​ ಸಹಾ, ಅಮಿತ್​ ಮಿಶ್ರಾ ಸೇರಿದಂತೆ ಹಲ ಆಟಗಾರರು ಹಾಗೂ ಗ್ರೌಂಡ್​​ ಸ್ಟಾಫ್​ ಕೊರೊನಾ ಸೋಂಕಿಗೆ ತುತ್ತಾದ ಪರಿಣಾಮ 14ನೇ ಆವೃತ್ತಿ ಐಪಿಎಲ್​ಗೆ ಬ್ರೇಕ್​ ಬಿತ್ತು. ಇದೀಗ ಉಳಿದ ಪಂದ್ಯಗಳ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನ ಆಟಗಾರರ ಮುಂದಿಟ್ಟಿದೆ. ಆಟಗಾರರ ಸುರಕ್ಷತೆಗೆ 46 ಪುಟಗಳ ಆರೋಗ್ಯ ಮಾರ್ಗಸೂಚಿ ಬಿಸಿಸಿಐ ಬಿಡುಗಡೆ ಮಾಡಿದೆ.

14 ಬಯೋಬಬಲ್​ಗಳಿಗೆ ನಿರ್ಮಾಣಕ್ಕೆ ಬಿಸಿಸಿಐ​​ ಪ್ಲಾನ್​
ಎಲ್ಲಾ ಫ್ರಾಂಚೈಸಿಗಳ ಸದಸ್ಯರು, ಆಟಗಾರರು ಬಯೋಬಬಲ್​ಗೆ ಪ್ರವೇಶಿಸುವ ಮುನ್ನ 6 ದಿನಗಳ ಕಾಲ ಕ್ವಾರಂಟೀನ್​​​ಗೆ ಒಳಗಾಗಬೇಕು. ಟೂರ್ನಿಗಾಗಿ 14 ಬಯೋಬಬಲ್​​​​ಗಳನ್ನ ಸಿದ್ಧಪಡಿಸಿರುವ ಬಿಸಿಸಿಐ, ಫ್ರಾಂಚೈಸಿಗಳಿಗೆ ​8, ಅಧಿಕಾರಿಗಳಿಗೆ 3​, ಸಿಬ್ಬಂದಿಗೆ 3 ಬಬಲ್​ಗಳನ್ನ ಮೀಸಲಿಟ್ಟಿದೆ.​ ಸದಸ್ಯರು ಬಿಸಿಸಿಐನಿಂದ ಮಾನ್ಯತೆ ಪಡೆದ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದ್ದು, ವಾಹನಗಳ ಚಾಲಕರು ಸಹ ಬಬಲ್​ಗೆ ಪ್ರವೇಶಿಸಬೇಕು ಎಂದು ನಿಯಮ ರೂಪಿಸಿದೆ. ಆಟಗಾರರು & ಅವರ ಕುಟುಂಬ ಸದಸ್ಯರು ಅನಿವಾರ್ಯವಿದ್ದಾಗ ಬಬಲ್​ ತೊರೆಯುವ ಅವಕಾಶ ನೀಡಲಾಗಿದೆ. ಒಂದು ವೇಳೆ ಹಾಗೆ ತೆರಳಿದ್ರೆ, ಮರು ಪ್ರವೇಶಿಸಲು 6 ದಿನಗಳ ಕಾಲ ಕ್ವಾರಂಟೀನ್​​ಗೆ ಒಳಗಾಗಬೇಕಾಗುತ್ತೆ. ಅಲ್ಲದೆ, ಕ್ವಾರಂಟೀನ್​ ಅವಧಿಯ 2, 4 ಮತ್ತು 6ನೇ ದಿನದ ಟೆಸ್ಟ್​ ರಿಪೋರ್ಟ್​ ಕಡ್ಡಾಯವಾಗಿ ನೆಗೆಟಿವ್​ ಇರಬೇಕಾಗುತ್ತದೆ.

blank

ಬಯೋಬಬಲ್​​​ ಟು ಬಯೋಬಬಲ್ ಪ್ರವೇಶಕ್ಕೆ ಅನುಮತಿ!
ಸದ್ಯ ಇಂಗ್ಲೆಂಡ್ ಮತ್ತು ಭಾರತದ ಟೆಸ್ಟ್​ ಸರಣಿ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಸರಣಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್​​ನಿಂದಾಗಿ ಆಟಗಾರರು ಈಗಾಗಲೇ ಬಬಲ್​ನಲ್ಲಿದ್ದಾರೆ. ಹೀಗಾಗಿ ಬಬಲ್​ನಲ್ಲಿರುವ ಈ ಆಟಗಾರರನ್ನ ನೇರವಾಗಿ ಐಪಿಎಲ್​ ಬಯೋಬಬಲ್​​ಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಒಟ್ಟಿನಲ್ಲಿ ಭಾರತದಲ್ಲಿ ಆಯೋಜಿಸಿ ಪಾಠ ಕಲಿತಿರುವ ಬಿಸಿಸಿಐ ಇದೀಗ ಯುಇಎನಲ್ಲಿ ಯಶಸ್ಸು ಕಾಣಲು ಹಾರ್ಡ್​ ವರ್ಕ್​ ನಡೆಸ್ತಾ ಇದೆ. ವಿಶ್ವಕಪ್​ ಆಯೋಜನೆಯ ಹಕ್ಕೂ ಬಿಸಿಸಿಐ ಬಳಿ ಇರೋದ್ರಿಂದ ಯಶಸ್ಸು ಕಾಣೋದು ಅನಿವಾರ್ಯವೂ ಆಗಿದೆ.

Source: newsfirstlive.com Source link