ನಾವು ಶಾಸಕರಲ್ಲವಾ? ಮಷ್ಕರಿ ಮಾಡ್ತೀರಾ? -ಈಶ್ವರಪ್ಪ ಎದುರೇ ಆಯನೂರು ಅಸಮಾಧಾನ

ನಾವು ಶಾಸಕರಲ್ಲವಾ? ಮಷ್ಕರಿ ಮಾಡ್ತೀರಾ? -ಈಶ್ವರಪ್ಪ ಎದುರೇ ಆಯನೂರು ಅಸಮಾಧಾನ

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎದುರು ಅವರದ್ದೇ ಪಕ್ಷದ ಎಂಎಲ್​​ಸಿ ಆಯನೂರ್ ಮಂಜುನಾಥ್ ಅಸಮಾಧಾನ ಹೊರ ಹಾಕಿರುವ ಪ್ರಸಂಗ ನಡೆಯಿತು. ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಮತ್ತು ಪ್ರವಾಹಕ್ಕೆ ಸಂಬಂಧಿಸಿ ಇಂದು ಸಭೆ ನಡೆಯಿತು.

ಘಟನೆಗೆ ಕಾರಣ ಏನು..?
ಈ ವೇಳೆ ಆಯನೂರು ಸಭಾಂಗಣದ ಮುಂದೆ ಬಂದು ಆಕ್ರೋಶ ಹೊರ ಹಾಕಿದರು. ನಾವೇನು ಶಾಸಕರಲ್ಲವೇನು? ಮಷ್ಕರಿ ಮಾಡ್ತೀರಾ? ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದರು. ಜಿಲ್ಲಾಧಿಕಾರಿ ಸಭೆ ಅಥವಾ ತಾಲೂಕಿನ ಆಡಳಿತದ ಸಭೆಗೆ ನಮಗೆ ಆಹ್ವಾನ ನೀಡುತ್ತಿಲ್ಲ. ಅದರ ಬಗ್ಗೆ ಮಾಹಿತಿ‌ ಕೊಡೋದಿಲ್ಲ. ಯಾರಿಗಾದರು ಅನುದಾನ ಕೊಟ್ಟರೆ ಮಾಹಿತಿ‌ ನೀಡೋದಿಲ್ಲ. ಪರಿಹಾರ ಧನ ನೀಡಿದ್ರೆ ನಮಗೆ ಮಾಹಿತಿ ಸಿಗೋದಿಲ್ಲ. ನಾವೇನು ನಿಮಗೆ ಶಾಸಕರ ರೀತಿ ಕಾಣಿಸೋದಿಲ್ವಾ? ಎಂದು ಪ್ರಶ್ನೆ ಮಾಡಿದರು.

ಆಯನೂರು ಮಾತಿಗೆ ಸಭೆಯಲ್ಲಿದ್ದ ಸಾಗರ ಶಾಸಕ ಹರತಾಳು ಹಾಲಪ್ಪ ಸಾಥ್ ನೀಡಿದರು. ಈ ಬಗ್ಗೆ ಡಿಸಿ ಕೆ.ಬಿ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.

Source: newsfirstlive.com Source link