ನಮ್ಮ ನೀರು, ನಮ್ಮ ಹಕ್ಕು, ಮೇಕೆದಾಟು ಮಾಡೇ ಮಾಡ್ತೀವಿ -ಸಿಎಂ ಬೊಮ್ಮಾಯಿ ಭರವಸೆ

ನಮ್ಮ ನೀರು, ನಮ್ಮ ಹಕ್ಕು, ಮೇಕೆದಾಟು ಮಾಡೇ ಮಾಡ್ತೀವಿ -ಸಿಎಂ ಬೊಮ್ಮಾಯಿ ಭರವಸೆ

ಮೈಸೂರು: ತಮಿಳುನಾಡು ಏನೇ ಹೇಳಲೀ ನಾವು ಮೇಕೆದಾಟು ಅಣೆಕಟ್ಟು ಯೋಜನೆ ಮಾಡಿಯೇ ತೀರುತ್ತೇವೆ ಎಂದು ಸಿಎಂ ಬಸವರಾಜ್​​ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ. ಈ ಸಂಬಂಧ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬೊಮ್ಮಾಯಿ, ಮೇಕೆದಾಟು ಯೋಜನೆಗೆ ನಾವು ಈಗಾಗಲೇ ಡಿಪಿಆರ್ ರೆಡಿ ಮಾಡಿ ಕಳುಹಿಸಿದ್ದೇವೆ. ಡಿಪಿಆರ್‌ಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದರು.

ನಾನು ಮತ್ತೊಮ್ಮೆ ದೆಹಲಿಗೆ ತೆರಳಿ ಜಲಶಕ್ತಿ ಸಚಿವರನ್ನ ಭೇಟಿ ಮಾಡುತ್ತೇನೆ. ತಮಿಳುನಾಡು ನೀರಿನ ವಿಚಾರದಲ್ಲಿ ಮೊದಲಿನಿಂದಲೂ ರಾಜಕಾರಣ ಮಾಡುತ್ತಿದೆ. ಕಾವೇರಿ ನದಿ ನೀರು ಹಂಚಿಕೆಯ ವಿಚಾರ ಮುಂದಿಟ್ಟುಕೊಂಡು ಎಷ್ಟೋ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ ಎಂದು ತಮಿಳುನಾಡು ರಾಜಕಾರಣಿಗಳಿಗೆ ಟಾಂಗ್​ ಕೊಟ್ಟರು.

ತಮಿಳುನಾಡಿನವರು ಏನೇ ಹೇಳಿದರು ನಾವು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ. ಕಾವೇರಿ ಕೊಳ್ಳದಲ್ಲಿ ಲಭ್ಯವಾಗುವ ಗರಿಷ್ಠ ಪ್ರಮಾಣದ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್​ ತೀರ್ಪು ಸರಿಯಿದೆ
ಸುಪ್ರೀಂಕೊರ್ಟ್ ನೀಡಿರುವ ತೀರ್ಪು ಕಾನೂನಾತ್ಮಕವಾಗಿದೆ. ನಮಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುತ್ತೇನೆ. ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸುತ್ತೇನೆ. ನಮ್ಮ ನೀರು ನಮ್ಮ ಹಕ್ಕು ಅದನ್ನು ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬದಲಾವಣೆ ದೃಷ್ಟಿಯಿಂದ ಹೊಸಬರಿಗೆ ಕೆಲವು ಮಹತ್ವದ ಖಾತೆ -ಬೊಮ್ಮಾಯಿ ಸ್ಪಷ್ಟನೆ

Source: newsfirstlive.com Source link